ಗಿಡ ಮೂಲಿಕೆಗಳಿಂದ ಆರೋಗ್ಯವಂತರಾಗಿ
ಕೋಲಾರ,ಸೆ.೨೩-ವಿದ್ಯಾರ್ಥಿಗಳು ಗಿಡ ಮೂಲಿಕೆಗಳ ಮಹತ್ವವನ್ನು ತಿಳಿದುಕೊಂಡರೆ ದುಶ್ಚಟಗಳಿಂದ ದೂರವಾಗುತ್ತಾರೆ ಹಾಗೂ ಆರೋಗ್ಯವಂತರಾಗುತ್ತಾರೆ ಎಂದು ಪಾರಂಪರಿಕ ವೈದ್ಯರು ಮತ್ತು ಜೀವ ವೈವಿದ್ಯ ನಿರ್ವಹಣಾ ಸಮಿತಿ ಸದಸ್ಯ ಡಾ. ಹರೀಶ್ ಬಾಬು ತಿಳಿಸಿದರು.
ಮುಳಬಾಗಿಲು ತಾಲ್ಲೂಕಿನ ಕಾಂತರಾಜು ಸರ್ಕಲ್ ಸರ್ಕಾರಿ ಪಾಲಿಟೆಕ್ನಿಕ್‌ನಲ್ಲಿ ನಡೆದ ಮನೆಮದ್ದು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ ಪಪ್ಪಾಯ ಗಿಡದ ಎಲೆಯ ಮಹತ್ವ ಡೆಂಗ್ಯೂ ಜ್ವರ ಬಂದಾಗ ಬಿಳಿ ರಕ್ತ ಕಣಗಳು ಹೆಚ್ಚಾಗುವುದಕ್ಕೆ, ಪಪ್ಪಾಯ ಎಲೆಯ ರಸವನ್ನು ೨೫-೩೦ಎಂ.ಎಲ್ ರಷ್ಟು ರಸಕ್ಕೆ ಜೇನು ತುಪ್ಪ ಎರಡು ಹನಿಯನ್ನು ಅದರಲ್ಲಿ ಬೆರಸಿ ಬೆಳಿಗ್ಗೆ-ಸಂಜೆ ಸೇವಿಸುವುದರಿಂದ ಬಿಳಿ ರಕ್ತಕಣಗಳು ಹೆಚ್ಚಾಗುತ್ತದೆ ಹಾಗೂ ಗಿಡ ಮೂಲಿಕೆಗಳ ಬಗ್ಗೆ ಸವಿಸ್ತಾರವಾಗಿ ಸುಮಾರು ೮೦ ಗಿಡಗಳಕ್ಕಿಂತ ಹೆಚ್ಚು ಗಿಡಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ವಿದ್ಯಾರ್ಥಿಗಳಿಗೆ ಅರಿವು ಮೂಡಿಸಿದರು.
ಕಾರ್ಯಕ್ರಮದಲ್ಲಿ ಪ್ರಾಂಶುಪಾಲರಾದ ಕೆ.ವಿ. ವೆಂಕಟರೆಡ್ಡಿ, ಉಪನ್ಯಾಸಕರಾದ ಮುರಳಿ ನಾಯಕ್, ರಂಗನಾಥ್, ಚಂದ್ರಶೇಖರ್ ಮತ್ತು ದೀಪಿಕ ಅವರು ಸೇರಿದಂತೆ ವಿದ್ಯಾರ್ಥಿಗಳು ಹಾಜರಿದ್ದರು.