ಹತ್ತು ದಿನಗಳ ಮಿರ್ಚಿ ಕಾರ್ಯಕ್ರಮ
ಸಂಜೆವಾಣಿ ನ್ಯೂಸ್
ಮೈಸೂರು: ಅ.05:- ಎರಡು ವರ್ಷಗಳ ಯಶಸ್ವಿ ಆಯೋಜನೆಯ ನಂತರ, ಮೂರನೇ ಸೀಸನ್‍ಗಾಗಿ ನಾವು ಸಿದ್ಧವಾಗಿದ್ದೇವೆ. ನಮ್ಮೆಲ್ಲರ ಹೆಮ್ಮೆಯಾದ ದಸರಾವನ್ನು ವಿಶೇಷವಾಗಿ ಆಚರಿಸಲು ಮಿರ್ಚಿ ಸಿದ್ಧವಾಗಿದೆ .
ಮಿರ್ಚಿ ಮಹಾದರ್ಬಾರ್ ಎಂಬ ವಿನೂತನ ಪರಿಕಲ್ಪನೆಯೊಂದಿಗೆ ಮೈಸೂರಿನ ಮೆಚ್ಚಿನ ರೇಡಿಯೋ ಸ್ಟೇಷನ್ನಿ ಮ್ಮಮುಂದೆಬರುತ್ತಿದೆ ಸತತವಾಗಿ ಹತ್ತು ದಿನಗಳ ಕಾಲಹತ್ತಾರು ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಮೈಸೂರಿಗರ ಮನಮುಟ್ಟುವತವಕ ನಮ್ಮದು ಮಿರ್ಚಿ ಮಹಾದರ್ಬಾರ್ ದಸರಾ ಹಬ್ಬದ ಅಂಗವಾಗಿ ಮಿರ್ಚಿಯಲ್ಲಿ ಹಲವಾರು ವಿಶೇಷಕಾರ್ಯಕ್ರಮಗಳು ಪ್ರಸಾರವಾಗಲಿವೆ ಮೈಸೂರು ದಸರಾ ಅಂಗವಾಗಿ ಮೈಸೂರಿನಲ್ಲಿನಡೆಯುವ ಎಲ್ಲ ಆಗುಹೋಗುಗಳನ್ನು ಮಿರ್ಚಿಯುರೇಡಿಯೋ ಮೂಲಕ ನಿಮಗೆ ತಲುಪಿಸಲಿದೆ.
ಮೈಸೂರಿನ ಪ್ರಮುಖ ಪ್ರವಾಸಿ ತಾಣಗಳ ಬಗೆಗೆ ಆಕರ್ಷಕ ರೀತಿಯಲ್ಲಿ ಮಾಹಿತಿ ಕೊಡುವ ಕಿರುಕಾರ್ಯಕ್ರಮ ಸೇರಿದಂತೆ ಎಷ್ಟೋ ವಿಶೇಷ ಕಾರ್ಯಕ್ರಮಗಳು ನಿಮಗಾಗಿ ಕಾಯುತ್ತಿವೆ ಮಿರ್ಚಿಯ ಮೂಲಕ ನಿಮ್ಮ ಮನೆ ಮನಗಳಲ್ಲಿ ದಸರೆಯ ಸಂಭ್ರಮ ಮನೆ ಮಾಡಲಿದೆ.