ಡಿ.ಹೆಚ್.ಓ. ಕಚೇರಿಯಲ್ಲಿ ಗಾಂಧಿ-ಶಾಸ್ತ್ರಿ ಜಯಂತಿ
ಕೋಲಾರ,ಅ.೫- ಕೋಲಾರ ನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಡಿ.ಎಚ್.ಓ ಕಚೇರಿಯಲ್ಲಿ ಮಹಾತ್ಮ ಗಾಂಧೀ ಜಯಂತಿಯನ್ನು ಡಿ.ಎಚ್.ಓ ಡಾ.ಜಿ.ಶ್ರೀನಿವಾಸ್ ಮಹಾತ್ಮ ಗಾಂಧಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ರವರ ಭಾವಚಿತ್ರಕ್ಕೆ ಹೂಗುಚ್ಚ ನೀಡಿ ಗೌರವಿಸಿದರು.
ಮಹಾತ್ಮ ಗಾಂಧೀಜಿ ರವರ ಸರಳತೆ ಪ್ರಾಮಾಣಿಕತೆ, ದೇಶಭಕ್ತಿ, ಸತ್ಯ ಆಹಿಂಸಾ ಮಾರ್ಗದಲ್ಲಿ ಬ್ರಿಟಿಷರ ವಿರುದ್ಧ ಸ್ವಾತಂತ್ರ ಚಳುವಳಿ ಮಾರ್ಗ, ಉಪ್ಪಿನ ಸತ್ಯಾಗ್ರಹ, ಕ್ವಿಟ್ ಇಂಡಿಯಾ ಚಳುವಳಿ ಮತ್ತು ವಿದೇಶಿ ವಸ್ತುಗಳ ಬಹಿಷ್ಕಾರಣೆ ಮುಂತಾದ ಚಳುವಳಿಗಳ ಮೂಲಕ ದೇಶದ ಲಕ್ಷಾಂತರ ಜನರನ್ನು ಹೋರಾಟದ ಮಾರ್ಗಕ್ಕೆ ಸೇರಿದರು. ಇಂದು ತಾವು ಅನುಭವಿಸುತ್ತಿರುವ ಸ್ವಾತಂತ್ರ್ಯ ಸಮಾನತೆ ಹಕ್ಕುಗಳು ಹೋರಾಟದ ಪ್ರತಿಫಲವಾಗಿದೆ ಎಂದು ವಿವರಿಸಿದರು.
ಜಿಲ್ಲಾ ಕ್ಷಯ ರೋಗ ನಿವಾರಣ ಅನುಷ್ಠಾನ ಅಧಿಕಾರಿ ಡಾ.ಎನ್.ಸಿ ನಾರಾಯಣಸ್ವಾಮಿ ರವರು ಮಹಾತ್ಮ ಗಾಂಧೀಜಿ ರವರ ದೂರ ದೃಷ್ಟಿ ತ್ಯಾಗ ಹೋರಾಟದ ಪ್ರತಿಫಲವಾಗಿ ಭಾರತ ದೇಶವು ಅಭಿವೃದ್ಧಿಯತ್ತ ಮುನ್ನಡೆಯುತ್ತಿದೆ ಎಂದು ತಿಳಿಸಿದರು.
ಡಾ. ಪ್ರಸನ್ನಕುಮಾರ್, ಡಾ. ರವಿಕುಮಾರ್, ಜಿಲ್ಲಾ ಮಲೇರಿಯಾ ಸಹಾಯಕ ಆಡಳಿತ ಅಧಿಕಾರಿ ಉಮಾದೇವಿ ಎಸ್, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಎಂ.ಪ್ರೇಮ ಹಾಗೂ ಸಿಬ್ಬಂದಿಯವರ ಹಾಜರಿದ್ದರು.