ಪ್ರಾಂಶುಪಾಲರು ಹೊಸ ಕೌಶಲ್ಯಗಳನ್ನು ಅಳವಡಿಸಿಕೊಳ್ಳಬೇಕು: ಪ್ರೊ. ಸಿ.ಎಂ ತ್ಯಾಗರಾಜ
ವಿಜಯಪುರ,ಮೇ.19:ಮಹಾವಿದ್ಯಾಲಯದ ಪ್ರಾಂಶುಪಾಲರುಗಳು ಕಲಿಕೆಯಲ್ಲಿ ತಮ್ಮ ಮಹಾವಿದ್ಯಾಲಯಗಳಲ್ಲಿ ವಿದ್ಯಾರ್ಥಿಗಳ ಭವಿಷ್ಯಕ್ಕೆ ಉಪಯುಕ್ತವಾಗುವಂತಹ, ಹೊಸ ಹೊಸ ಕೌಶಲ್ಯ ಅಭಿವೃದ್ಧಿಗಳ ಕಾರ್ಯಕ್ರಮಗಳನ್ನು ಅಳವಡಿಸಿಕೊಂಡು ವಿದ್ಯಾರ್ಥಿಗಳಿಗೆ ಸಲಹೆ ಮಾರ್ಗದರ್ಶನ ನೀಡಬೇಕು ಎಂದು ರಾಣಿಚನ್ನಮ್ಮ ವಿಶ್ವವಿದ್ಯಾಲಯ ಬೆಳಗಾವಿಯ ಕುಲಪತಿ ಪೆÇ್ರ. ಸಿ. ಎಂ. ತ್ಯಾಗರಾಜ ಹೇಳಿದರು.
ಗುರುವಾರ ಬಿ.ಎಲ್.ಡಿ.ಇ ಸಂಸ್ಥೆಯ ಆವರಣದಲ್ಲಿರುವ ಡಾ.ಫ.ಗು. ಹಳಕಟ್ಟಿ ಇಂಜನೀಯರಿಂಗ್ ಮಹಾವಿದ್ಯಾಲಯದ ಸಭಾಂಗಣದಲ್ಲಿ “Navigating Youth Towards AmruthaKal: Knowledge Transfer Through Technology and Skill Development” ಎಂಬ ವಿಷÀಯದ ಕುರಿತ ಒಂದು ದಿನದ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.
ಕುಲ ಸಚಿವೆ ರಾಜಶ್ರೀ ಜೈನಾಪೂರ ಮಾತನಾಡಿ, ವಿದ್ಯಾರ್ಥಿಗಳು ಪರೀಕ್ಷೆಗಳಲ್ಲಿ ಹೆಚ್ಚನ ಅಂಕ ಗಳಿಸುವದಕ್ಕಿಂತಲೂ ತಮ್ಮ ಜೀವನಕ್ಕೆ ಉಪಯುಕ್ತವಾಗುವ ಕೌಶಲ್ಯಗಳನ್ನು ಕಲಿಯಲು ಪ್ರಯತ್ನಿಸಬೇಕು ಎಂದು ಹೇಳಿದರು.
ಈ ಕಾರ್ಯಾಗಾರದಲ್ಲಿ ಮೂರು ಗೋಷ್ಠಿಗಳನ್ನು ಹಮ್ಮಿಕೊಳ್ಳಲಾಗಿತ್ತು. ಮೊದಲನೇ ಗೋಷ್ಠಿಯನ್ನು ಶ್ರೀನಿವಾಸ ಪಿ, ಅವರು “RevolutionisingArtificalInteligence in Knowledge Transfer” ಎಂಬ ವಿಷÀಯದ ಬಗ್ಗೆ, ಎರಡನೇ ಗೋಷ್ಠಿಯನ್ನು ಐಐಟಿ ದೆಹಲಿಯ ಡಿಎಸ್. ಮಂಜುನಾಥ ಅವರು “ToC Critical Chain-Theory of Constriants Tools Industry 4.0 Innovation” ಎಂಬ ವಿಷಯದ ಕುರಿತು, ಮೂರನೇ ಗೋಷ್ಠಿಯನ್ನು ಆರ್ ಕೆ ಇಂಡಸ್ಟ್ರೀಸ್‍ನ ನಿರ್ದೇಶಕÀ ಸೂರಜ ನಾಡಿಗ “Empowering Institutions through Skill Development and Entrepreneurship” ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದರು.
ಉಪ ಕುಲಸಚಿವ ಡಾ.ಡಿ. ಕೆ ಕಾಂಬಳೆ, ಬಿಎಲ್‍ಡಿಇ ಸಂಸ್ಥೆಯ ಪ್ರಾಂಶುಪಾಲ ವಿ. ಜಿ ಸಂಗಮ ವೇದಿಕೆಯ ಮೇಲೆ ಉಪಸ್ಥಿತರಿದ್ದರು.
ಪೆÇ್ರ.ಎಸ್ ಎಂ. ಗಂಗಾಧರಯ್ಯ ಸ್ವಾಗತಿಸಿದರು. ಸ್ನಾತಕೋತ್ತರ ಕೇಂದ್ರ ವಿಜಯಪುರದ ನಿರ್ದೇಶಕÀ ಡಾ. ದಯಾನಂದ ಸಾವಕಾರ ವಂದಿಸಿದರು. ಡಾ.ಪೂರ್ಣಿಮಾ ದಾಮನ್ನವರ ಹಾಗೂ ಡಾ.ರೂಪಾ ಇಂಗಳೆ ಕಾರ್ಯಕ್ರಮವನ್ನು ನಿರೂಪಿಸಿದರು. ಕುಮಾರಿ.ವೈಷÀ್ಣವಿ ನಾಗರಾಳ ಹಾಗೂ ಶ್ರೀರಕ್ಷಾ ಕುಲಕರ್ಣಿ ಗೋಷ್ಠಿಗಳನ್ನು ನಿರ್ವಹಿಸಿದರು.