ಶರಣರು ಬೇಧವಿಲ್ಲದ ಸಮಾಜ ನಿರ್ಮಾಣ ಮಾಡಿದ್ದಾರೆ: ಹೆಗ್ಗಣದೊಡ್ಡಿ
ವಿಜಯಪುರ,ಮೇ.19::ಬಸವಾದಿ ಶರಣರು ಭೇದವಿಲ್ಲದ ಸಮಾಜ ನಿರ್ಮಾಣ ಮಾಡಿದರು. ವಚನ ಸಾಹಿತ್ಯ ಜನಸಾಮಾನ್ಯರಿಗೂ ಅರ್ಥವಾಗುವಂತಹದ್ದು. ಕಾಯಕದಲ್ಲಿ ನಿರತನಾಗಿರಬೇಕು. ಹುಸಿ ಹೇಳದೆ ಸತ್ಯ ಪ್ರತಿಪಾದಿಸಬೇಕು. ಸಮಾಜ ಸುಧಾರಣೆ ವಚನದ ಆಶಯ ಎಂದು ಸಿಂದಗಿಯ ಎಚ್.ಜಿ. ಪದವಿಪೂರ್ವ ಮಹಾವಿದ್ಯಾಲಯದ ಪ್ರಾಚಾರ್ಯ ಎ.ಆರ್. ಹೆಗ್ಗನದೊಡ್ಡಿ ಅಭಿಪ್ರಾಯ ವ್ಯಕ್ತಪಡಿಸಿದರು
ಶನಿವಾರ ಅನÀ್ನಪೂರ್ಣ ಮಹಾದೇವಪ್ಪ ಕಾಗಲಕರ ದಿ. ಭೀಮಕ್ಕ ರಾಮಚಂದ್ರ ಕಾಗಲಕರ ದತ್ತಿ ಹಾಗೂ ಶಾಂತಾಬಾಯಿ ಸುಖಾರಾಮ ನೂಲಿಕರ ದತ್ತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಜನಸಾಮಾನ್ಯರಿಗೆ ಮುಖ್ಯ ವಾಹಿನಿಗೆ ತರುತ್ತಿರುವದು ಶ್ಲಾಘನೀಯ ಎಂದರು.
ಸಭೆಯ ಅಧ್ಯಕ್ಷತೆಯನ್ನು ವಹಿಸಿದ ತಿಕೋಟಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸಿದ್ರಾಮಯ್ಯ ಲಕ್ಕುಂಡಿಮಠ ಮಾತನಾಡಿ, ಪ್ರಗತಿಪರ ಸಮಾಜದ ನಿರ್ಮಾಣವೇ ವಚನ ಸಾಹಿತ್ಯ. ಶ್ರದ್ಧೆಯಿಂದ ಮಾಡಿದ ಕಾಯಕ ಪೂಜೆಗಿಂತ ಶ್ರೇಷ್ಠ. ಇಂದು ವಚನ ಸಾಹಿತ್ಯ ಸುಂದರ ಬದುಕಿನ ಸಾಹಿತ್ಯವಾಗಿದೆ ಎಂದರು.
ಶರಣರ ವಚನ ಸಾಹಿತ್ಯ ಕುರಿತು ಮಮತಾ ಮುಳಸಾವಳಗಿ ಉಪನ್ಯಾಸ ನೀಡಿ, ಪ್ರಬುದ್ಧತೆಯ ಮಹೋನ್ನತ ಶಿಖರ ವಚನ ಸಾಹಿತ್ಯ. ವಚನವೆಂದರೆ ಹುಸಿಯಾಗದ ಮಾತು. ಕನ್ನಡ ವಚನ ಸಾಹಿತ್ಯ ವಿಶ್ವಕ್ಕೆಲ್ಲ ನೀಡಿದ ಕೊಡುಗೆ. ಅಲ್ಲಮಪ್ರಭು ಹಾಗೂ ಅಕ್ಕಮಹಾದೇವಿ ಸಂವಾದವೇ ವಚನ ಎಂದರು.
ಕಾಯಕ ಕುರಿತು ಶರಣ ಸಂಸ್ಕøತಿಯ ಚಿಂತಕಿ ಚೈತನ್ಯ ಮುದ್ದೇಬಿಹಾಳ ಉಪನ್ಯಾಸ ನೀಡಿ, ಬಸವಣ್ಣ ಬಿತ್ತಿದ ಬೀಜಗಳು ನಾವು, ನಮಗಿರದು ಎಂದೆಂದು ಸಾವು. ಕಾಯಕವೇ ಕೈಲಾಸದಲ್ಲಿ ನಂಬಿಕೆಯಿಟ್ಟು ಗೌರವದಿಂದ ಬದುಕಿದವರು. ಸತ್ಯ ಶುದ್ಧ ಕಾಯಕವೇ ಶ್ರೇಷ್ಠ. ಶರಣ ದೃಷ್ಟಿಯಲ್ಲಿ ಹೊನ್ನವು ಮಣ್ಣೆ ಎಂದರು.
ಇದೇ ಸಂದರ್ಭದಲ್ಲಿ ಇಂಡಿ ಶಿಕ್ಷಕರ ಸಂಘದ ಪದಾಧಿಕಾರಿಗಳಾದ ಜಯಶ್ರೀ ತೆಲಗ, ವಿಜಯಲಕ್ಮೀ ಡಿಸಲೆ, ರಜೀಯಾ ಚಪ್ಪರಬಂದ, ರಾಜಶ್ರೀ ನಾರಾಯಣಕರ ಅವರನ್ನು ಗೌರವಿಸಿ ಸನ್ಮಾನಿಸಲಾಯಿತು.
ವೇದಿಕೆಯ ಮೇಲೆ ರೇಣುಕಾ ತಳವಾರ, ಡಾ ಸುರೇಶ ಕಾಗಲಕರರಡಿ,್ಡ ಧರೆಪ್ಪ ಯಚ್ಚಿ, ರಾಜೇಸಾಬ ಶಿವನಗುತ್ತಿ, ರೇಣುಕಾ ತಳವಾರ, ಉಪಸ್ಥಿತರಿದ್ದರು.
ಡಾ. ಆನಂದ ಕುಲಕರ್ಣಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಸುರೇಶ ಜತ್ತಿ ಸ್ವಾಗತಿಸಿ, ನಿರೂಪಿಸಿದರು. ಶೋಭಾ ಬಡಿಗೇರ ವಂದಿಸಿದರು.
ಹಾಸಿಂಪೀರ ವಾಲಿಕಾರ, ಕಮಲಾ ಮುರಾಳ, ಜಿ.ಎಸ್. ಬಳ್ಳೂರ, ಅಹಮ್ಮದ ವಾಲಿಕಾರ, ಅರ್ಜುನ ಶಿರೂರ, ಶಾಂತಾ ವಿಭೂತಿ, ಸುರಭಿ ತೆಲಗ, ದ್ಯಾಮಪ್ಪ ಗರಸಂಗಿ, ಎಸ್..ಎಸ್ ಕುಂಬಾರ, ಎಸ್.ವಾಯ್. ತುದಿಗಾಲ, ಎಸ್..ಎಸ್ ಬೇಟಗೇರಿ, ಭಾಗೀರಥಿ ಸಿಂಧೆ, ಕೆ.ಎಸ್. ಹಣಮಾನಿ, ಟಿ.ಆರ್. ಹಾವಿನಾಳ, ಎಸ್.ಬಿ. ಕಲಕೇರಿ, ಎಮ್.ಎನ್. ನಿಂಬಾಳ ಮುಂತಾದವರು ಉಪಸ್ಥಿತರಿದ್ದರು.