ವಿಜೃಂಬಣೆಯಿಂದ ಜರುಗಿದ ಶ್ರೀ ವಾಸವಿದೇವಿಯ ಜಯಂತ್ಯೋತ್ಸವ
ತಾಳಿಕೋಟೆ:ಮೇ.19: ಪಟ್ಟಣದ ಆರ್ಯ ವೈಶ್ಯ ಸಮಾಜ ಬಾಂದವರ ಕುಲದೇವರಾದ ಶ್ರೀ ವಾಸವಿದೇವಿಯ ಜಯಂತ್ಯೋತ್ಸವವು ಶನಿವಾರರಂದು ವಿಜೃಂಬಣೆಯಿಂದ ಜರುಗಿತು.
ಜಯಂತ್ಯೋತ್ಸವ ಅಂಗವಾಗಿ ಬೆಳಿಗ್ಗೆ 9 ಗಂಟೆಗೆ ಭಜಾರ ಶ್ರೀ ಅಂಬಾಭವಾನಿ ಮಂದಿರದಿಂದ ಸುಮಂಗಲೆಯರ ಕುಂಭ ಮೇಳದ ಮೆರವಣಿಗೆಯು ಪ್ರಾರಂಭಗೊಂಡು ಕತ್ರಿ ಭಜಾರ ಮಾರ್ಗವಾಗಿ ಶ್ರೀ ವಾಸವಿ ದೇವಸ್ಥಾನಕ್ಕೆ ತಲುಪಿತು.
ನಂತರ ಶ್ರೀ ವಾಸವಿದೇವಿಯ ಮಹಾ ಮೂರ್ತಿಗೆ ಮಹಾಭಿಷೇಕ, ಕುಂಕುಮಾರ್ಚನೆ, ಬಿಲ್ವಾರ್ಚನೆ, ಪುಷ್ಪಾರ್ಚನೆ, ಮಹಾ ಮಂಗಳಾರತಿ ಕಾರ್ಯಕ್ರಮಗಳು ಜರುಗಿದವಲ್ಲದೇ ನಂತರ ಸಮಸ್ತ ಭಕ್ತಾಧಿಗಳಿಗೆ ಮಹಾ ಪ್ರಸಾದ ವಿತರಿಸಲಾಯಿತು.
ಜಯಂತ್ಯೋತ್ಸವ ಅಂಗವಾಗಿ ಸಾಯಂಕಾಲ ಸಮಾಜದ ಮಕ್ಕಳಿಂದ ಮನರಂಜನೆ ಕಾರ್ಯಕ್ರಮಗಳು ಜರುಗಿದವು.
ಈ ಜಯಂತ್ಯೋತ್ಸವದ ನೇತೃತ್ವವನ್ನು ಆರ್ಯ ವೈಶ್ಯ ಸಮಾಜದ ಅಧ್ಯಕ್ಷ ರವಿ ತಾಳಪಲ್ಲೆ, ವಾಸವಿ ಮಹಿಳಾ ಮಂಡಳದ ಅಧ್ಯಕ್ಷ ಸಾವಿತ್ರಿ ವಾಸುದೇವ ಹೆಬಸೂರ, ಅಶೋಕ ಶೆಟ್ಟಿ, ಶ್ರೀಕಾಂತ ಶೆಟ್ಟಿ, ಯಂಕಣ್ಣ ತಾಳಪಲ್ಲೆ, ಸತ್ಯನಾರಾಯಣ ತಾಳಪಲ್ಲೆ, ಭೀಮಣ್ಣ ಅಗಡಿ, ದತ್ತಾತ್ರೇಯ ಹೆಬಸೂರ, ವಿದ್ಯಾಧರ ಗೊಟಗುಣಕಿ, ಗುರು ತಾಳಪಲ್ಲೆ, ಬದ್ರಿನಾರಾಯಣ ಕನಕಗಿರಿ, ಪ್ರಶಾಂತ ಜನಾದ್ರಿ, ಮಂಜು ಶೆಟ್ಟಿ, ಸಂಗಮನಾಥ ಶೆಟ್ಟಿ, ಸಂದೀಪ ಶೆಟ್ಟಿ, ಸುರಜ ಶೆಟ್ಟಿ, ವಾಸು ಮಾನ್ವಿ, ಮುರಳಿಧರ ಮಾನ್ವಿ, ಕೃಷ್ಣಾ ಕನಕಗಿರಿ, ಮಹಿಳಾ ಮಂಡಳದ ಗೀತಾ ತಾಳಪಲ್ಲೆ, ಸುಭದ್ರಾ ಹೆಬಸೂರ, ಸುಲೋಚನಾ ಶೆಟ್ಟಿ, ವಂದನಾ ಶೆಟ್ಟಿ, ರಾಜಲಕ್ಷ್ಮೀ ಮಾನ್ವಿ, ರಮಾ ತಾಳಪಲ್ಲೆ, ಉಷಾ ಮಾನ್ವಿ, ಶೀಲಾಬಾಯಿ ತಾಳಪಲ್ಲೆ, ಕವಿತಾ ಜನಾದ್ರಿ, ಐಶ್ವರ್ಯ ಗೊಟಗುಣಕಿ, ಮೊದಲಾದವರು ವಹಿಸಿದ್ದರು.