ಸಾಲಕ್ಕೆ ಹೊಂದಾಣಿಕೆ ಮಾಡದಿರಲು ಆಗ್ರಹ
ಹುಬ್ಬಳ್ಳಿ,ಮೇ.19: ರಾಜ್ಯಾದ್ಯಂತ ಬರಗಾಲ ತಾಂಡವವಾಡುತ್ತಿದ್ದು. ರೈತರ ಅನುಕೂಲಕ್ಕಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವತಿಯಿಂದ ಬರಪೀಡಿತ ತಾಲೂಕುಗಳ ರೈತರಿಗೆ ಹಣಕಾಸಿನ ನೆರವು ನೀಡಿದ್ದು ರಾಷ್ಟ್ರೀಕೃತ ಹಾಗೂ ಸಹಕಾರ ಬ್ಯಾಂಕುಗಳು ರೈತರ ಖಾತೆಯಿಂದ ಬಂದಿರುವ ಬರಪೀಡಿತ ಪ್ರದೇಶದ ಹಣವನ್ನು ರೈತರ ಸಾಲಕ್ಕೆ ಹೊಂದಾಣಿಕೆ ಮಾಡುತ್ತಿದ್ದು ರೈತರಿಗೆ ತೀವ್ರ ಕಳವಳ ಉಂಟು ಮಾಡಿದೆ. ಮೊದಲೇ ಬರಗಾಲವಿದ್ದು ಜನ ಜಾನುವಾರುಗಳಿಗೆ ಮೇವು ಆಹಾರವಿಲ್ಲದೆ ಹತ್ತು ಹಲವಾರು ಸಮಸ್ಯೆಗಳಿಂದ ಕೂಡಿ ಬಸವಳಿದ ರೈತನಿಗೆ ಅನುಕೂಲ ಕಲ್ಪಿಸಿದ ಸರ್ಕಾರ ತಕ್ಷಣ ಬ್ಯಾಂಕುಗಳಿಗೆ ನಿರ್ದೇಶನ ಕೊಟ್ಟು ಯಾವುದೇ ಕಾರಣಕ್ಕೂ ಬರಗಾಲದ ಹಣವನ್ನು ರೈತರ ಸಾಲಕ್ಕೆ ಜಮಾ ಮಾಡಬಾರದೆಂದು ಕಟ್ಟು ನಿಟ್ಟಿನ ಆದೇಶ ಮಾಡಬೇಕು. ತಪ್ಪಿದಲ್ಲಿ ಬಿಜೆಪಿ ರೈತ ಮೋರ್ಚಾ ವತಿಯಿಂದ ಉಗ್ರ ಹೋರಾಟ ಕೈಗೊಳ್ಳಲಾಗುವುದು ಎಂದು ಧಾರವಾಡ ಜಿಲ್ಲಾ ರೈತ ಮೋರ್ಚ ಉಪಾಧ್ಯಕ್ಷರಾದ ದೇವರಾಜ ಬ.ದಾಡಿಬಾವಿ ಸರ್ಕಾರವನ್ನು ಆಗ್ರಹಿಸಿದ್ದಾರೆ.