ಬರ ಪರಿಹಾರ ಸಭೆ
ನವಲಗುಂದ,ಮೇ.19 : ರೈತರು ಬ್ಯಾಂಕಗೆ ಹೋಗಿ ನಿಮಗೇ ಬರಪರಿಹಾರ ಹಣ ನೀಡುವಲ್ಲಿ ಯಾವುದೇ ರೀತಿಯಲ್ಲಿ ತೊಂದರೆಯಾದಲ್ಲಿ ನಮ್ಮನ್ನ ಸಂಪರ್ಕಸಿ ನಾವೇ ಖುದ್ದಾಗಿ ಹಣ ನೀಡುವಂತೆ ಹೇಳುತ್ತೇವೆ ಹಾಗೇ ಬಾಕಿ ಉಳಿದಿರುವ ರೈತರಿಗೆ ಹಣ ಜಮಾ ವಾಗಲಿಕ್ಕೆ 15 ದಿನಗಳ ಕಾಲಾವಕಾಶ ಬೇಕಾಗುತ್ತದೆ ಎಂದು ತಹಸೀಲ್ದಾರ ಮಲ್ಲಿಕಾರ್ಜುನ ಹೆಗ್ಗಣವರ ಹೇಳಿದರು.
ಅವರು ತಹಶೀಲ್ದಾರ ಕಚೇರಿಯಲ್ಲಿ ವಿವಿಧ ರೈತ ಮುಖಂಡರು, ಕೃಷಿ ಅಧಿಕಾರಿಗಳು ಹಾಗೂ ಎಲ್ಲ ಬ್ಯಾಂಕ್ಗಳ ಮ್ಯಾನೇಜರ ಬರಪರಿಹಾರ ಸಭೆ ನಡೆಸಿ ಮಾತನಾಡಿದರು
ಇದಕ್ಕೂ ಮೊದಲು ರೈತ ಮುಖಂಡರು ಮಾತನಾಡಿ ನವಲಗುಂದ ಹಾಗೂ ಅಣ್ಣಿಗೇರಿ ತಾಲೂಕಗಳನ್ನು ಬರಗಾಲ ಅಂತಾ ಘೋಷಣೆ ಮಾಡಿದರು ಕೂಡ ರೈತರಿಗೆ ಸರಿಯಾಗಿ ಬರಪರಿಹಾರ ಬೆಳೆವಿಮೆ ಬಂದಿರುವದಿಲ್ಲ ಕೆಲ ರೈತರಿಗೆ ಬಂದಿದೆ, ಇದನ್ನು ಕೂಡಲೇ ರಾಜ್ಯ ಸರ್ಕಾರ ಸರಿಪಡಿಸಬೇಕು ಎಂದರು.
ಬ್ಯಾಂಕಿನ ಅಧಿಕಾರಿಗಳು ರೈತರ ಖಾತೆಗೆ ಬಂದಂತಹ, ಬೆಳೆಪರಿಹಾರ, ಬೆಳೆವಿಮೆ, ಪೆನ್ಸನ್ ಹಣ, ರೈತರ ಸಾಲಕ್ಕೆ ಜಮಾ ಮಾಡಿಕೊಳ್ಳಬಾರದು ಹಾಗೇ ಬ್ಯಾಂಕ್ ನವರು ರೈತರ ಯಾವುದೇ ಸಾಲಕ್ಕೆ ಪರಿಹಾರ ಹಣ ಜಮಾಮಾಡಿಕೊಳ್ಳಬೇಡಿ ಬರಗಾಲದಿಂದ ತತ್ತರಿಸಿದ್ದು, ನಿತ್ಯಜೀವನ ನಡೆಸೋದ ಕಷ್ಟವಾಗಿದೆ ದಯಮಾಡಿ ಬ್ಯಾಂಕ್ ನವರು ಸರ್ಕಾರದಿಂದ ಯಾವುದೇ ಪರಿಹಾರ ಹಣಬಂದರೆ ನೇರವಾಗಿ ರೈತರಿಗೆ ಕೊಡಿ, ಹಾಗೇ ರೈತರು ಬ್ಯಾಂಕ್ಗೆ ಬಂದಾಗ ಅಸಭ್ಯದಿಂದ ವರ್ತಿಸದೇ, ಆದೇಶ ಹಾಗೇ ಇದೇ ಹೀಗೆ ಇದೆ ಅಂತಾ ಹೇಳದೆ ಸತಾಯಿಸದೇ ಹಣನೀಡಿ ಎಂದರು.
ಬ್ಯಾಂಕ್ ಆಫ್ ಬರೋಡ ವ್ಯವಸ್ಥಾಪಕರಾದ ಮಹೇಶ ಗುಜಮಾಗಡಿ ಮಾತನಾಡಿ ಜಿಲ್ಲಾಧಿಕಾರಿಗಳ ಆದೇಶದಂತೆ ಬರಪರಿಹಾರ ಹಣವನ್ನು ಸಾಲಕ್ಕೆ ಜಮಾವಾಗಿದ್ದಲ್ಲಿ ಆ ಹಣವನ್ನು ಮರಳಿ ರೈತರಿಗೆ ನೀಡಲಾಗುವುದು ಎಂದರು.
ಈ ವೇಳೆಯಲ್ಲಿ ಶಂಕ್ರಪ್ಪ ಅಂಬಲಿ, ಮಲ್ಲೇಶ್ ಉಪ್ಪಾರ, ಲೋಕನಾಥ್ ಹೇಬಸೂರ್, ಎಲ್ಲಪ್ಪ ದಾಡಿಬಾಯಿ,ರಘುನಾಥರೆಡ್ಡಿ ನಡುವಿನಮನಿ, ಬಸನಗೌಡ ಹುಣಸಿಕಟ್ಟೆ, ಸಿದ್ದಲಿಂಗಪ್ಪ ಹಳ್ಳದ, ಗೋವಿಂದರೆಡ್ಡಿ ಮೊರಬದ, ಮುರಗೇಪ್ಪ ಪಲ್ಲೆದ ನಿಂಗಪ್ಪ ತೋಟದ, ಬಸಪ್ಪ ಮುಪ್ಪಯ್ಯನವರ, ಗಂಗಪ್ಪ ಸಂಗಟಿ, ಶಿವಪ್ಪ ಸಂಗಳದ, ಚಾ ಹುಸೇನ ಸಂಗಪ್ಪ ನೀಡವನಿ ಮತ್ತು ತಾಲೂಕಿನ ಇನ್ನು ಅನೇಕ ರೈತರಿದ್ದರು.