ಸಂಭ್ರಮದ ರಥೋತ್ಸವ
ಲಕ್ಷ್ಮೇಶ್ವರ,ಮೇ19: ಪಟ್ಟಣದ ಆರಾಧ್ಯ ದೈವಪುಲಿಗೆರಿಯ ಶ್ರೀ ಸೋಮೇಶ್ವರ ದೇವಸ್ಥಾನದ ಮಹಾರಥೋತ್ಸವ ಶನಿವಾರ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಅತ್ಯಂತ ಸಡಗರ ಸಂಭ್ರಮದಿಂದ ಜರುಗಿತು.
ಸಾಯಂಕಾಲದಿಂದಲೇ ಮೋಡಕವಿದ ವಾತಾವರಣವದ್ದು ತುಂತುರು ಮಳೆಯ ಮಧ್ಯೆ ಸಾವಿರಾರು ಭಕ್ತರ ಹರ್ಷೋದ್ಗಾರ ಮಧ್ಯ ಉತ್ಸವ ಮೂರ್ತಿಯನ್ನು ರಥದಲ್ಲಿ ಪ್ರತಿಷ್ಠಾಪಿಸಿ ರಥದ ಚಕ್ರಕ್ಕೆ ಪೂಜೆ ಪುನಸ್ಕಾರ ಸಲ್ಲಿಸುತ್ತಿದ್ದಂತೆ ಪಾಲ್ಗೊಂಡಿದ್ದ ಭಕ್ತರು ಮುಗಿಲು ಮುಟ್ಟುವಂತೆ ಹರ ಹರ ಹರ ಮಹಾದೇವ ಎಂಬ ಉದ್ಘೋಷಗಳು ಮೊಳಗಿಸುತ್ತಿದ್ದಂತೆಯೇ ಭಕ್ತರು ರಥದ ಕಳಸಕ್ಕೆ ನಿಂಬೆಹಣ್ಣು ಉತ್ತತ್ತಿ ಬಾಳೆಹಣ್ಣು ಎಸೆದು ಕೃತಾರ್ಥರಾದರು.