ಮೇ. 23 ರಂದು ಗೌತಮ ಬುದ್ಧರ 2568ನೇ ಜಯಂತಿ
ಬೀದರ:ಮೇ.19: ಮೇ. 23 ರಂದು ಗುರುವಾದಂದು ವಿಶ್ವ ಶಾಂತಿ ಸಂದೇಶ ಸಾರಿದ ಗೌತಮ ಬುದ್ಧರ 2568ನೇ ಜಯಂತಿ ಆಚರಿಸುವ ಅಂಗವಾಗಿ ಬೀದರ ನಗರದ ಶಾಹಗಂಜ್ ಬುದ್ಧ ವಿಹಾರದಿಂದ ಅಂಬೇಡ್ಕರ್ ವೃತ್ತ, ಭಗತ್‍ಸಿಂಗ್ ವೃತ್ತ, ಬಸವೇಶ್ವರ ವೃತ್ತ ಹಾಗೂ ಬೊಮ್ಮಗೊಂಡೇಶ್ವರ ವೃತ್ತ ಮಾರ್ಗವಾಗಿ ಗಾಂಧಿಗಂಜ್ ಬುದ್ಧ ವಿಹಾರದವರೆಗೆ ಬುದ್ಧರ ಪ್ರತಿಮೆಯ ಭವ್ಯ ಮೆರವಣಿಗೆಯನ್ನು ಹಮ್ಮಿಕೊಳ್ಳಲಾಗಿದೆ
ಕಾರ್ಯಕ್ರಮದ ಸಾನಿಧ್ಯ ಪೂಜ್ಯ ಭಂತೆ ಧಮ್ಮಾನಂದ ಮಹಾಥೇರೋ, ಪೂಜ್ಯ ಭಂತೆ ಜ್ಞಾನಸಾಗರ ವಹಿಸಲಿದ್ದಾರೆ.
ಮೇರವಣಿಗೆಯಲ್ಲಿ ಬುದ್ಧ ಸ್ತೂಪ ಮತ್ತು ಬೋದಿವೃಕ್ಷಸ್ತಬ್ದ ಚಿತ್ರಗಳಿಂದ ಛತ್ರಿ ಚಾಮರಗಳಿಂದ ಕೂಡಿರುತ್ತದೆ ಪ್ರಯುಕ್ತ ಜಿಲ್ಲೆಯ ಹೆಚ್ಚಿನ ಸಮಖ್ಯೆಯಲ್ಲಿ ಎಲ್ಲಾ ಬೌದ್ಧ ಅನುಯಾಯಿಗಳು ಮತ್ತು ಸಾರ್ವಜನಿಕರು ಭಾಗವಹಿಸಬೇಕೆಂದು ಧಮ್ಮ ಸಂಸ್ಕøತಿ ಮತ್ತು ಶಿಕ್ಷಣ ಜಾಗೃತಿ ವೇದಿಕೆ ವತಿಯಿಂದ ಪ್ರಕಟಣೆ ಮೂಲಕ ತಿಳಿಸಿದ್ದಾರೆ.