ಅಂತರಾಷ್ಟ್ರೀಯ ವಸ್ತುಸಂಗ್ರಹಾಲಯ ದಿನಾಚರಣೆ
ಚನ್ನಮ್ಮನ ಕಿತ್ತೂರು, ಮೇ19: ವಸ್ತುಸಂಗ್ರಾಲಯದಲ್ಲಿ ಪಠ್ಯಕ್ರಮ ಮುಖ್ಯವಾಗಿವೆ ಎಂದು ಪ್ರಭಾರಿ ಕ್ಷೇತ್ರ ಶಿಕ್ಷಣಾಧಿಕಾರಿ ಗಾಯತ್ರಿ ಅಜ್ಜನವರ ಹೇಳಿದರು.
ಪಟ್ಟಣದ ರಾಣಿ ಚನ್ನಮ್ಮ ಕೋಟೆ ಆವರಣದಲ್ಲಿ ಇರುವ ಕಿತ್ತೂರ ರಾಣಿ ಚನ್ನಮ್ಮ ಸ್ಮಾರಕ ಸರ್ಕಾರಿ ವಸ್ತುಸಂಗ್ರಹಾಲಯ ಆವರಣದಲ್ಲಿ ಅಂತರಾಷ್ಟ್ರೀಯ ವಸ್ತು ಸಂಗ್ರಹಾಲಯ ದಿನಾಚರಣೆಯ ಕಾರ್ಯಕ್ರಮದ ಮುಖ್ಯ ಅಥಿತಿಯಾಗಿ ಸಸಿಗೆ ನೀರೆರೆಯುವದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಇಂದು ಪುರಾತತ್ವ ಸಂಗ್ರಹಾಲಯಗಳ, ಸರ್ಕಾರಿ ವಸ್ತುಸಂಗ್ರಹಾಲಯಗಳ ಅವಶ್ಯಕತೆಯಿದೆ ಎಂದರು.
ಅತಿಥಿಗಳಾಗಿ ಆಗಮಿಸಿದ ದಾಂಡೇಲಿ ಸ.ಪ್ರ.ದ.ಮ.ವಿ. ಇತಿಹಾಸ ಪ್ರಾಧ್ಯಾಪಕ ಡಾ. ಬಸವರಾಜ. ಎನ್. ಅಕ್ಕಿ ಅವರು ಉಪನ್ಯಾಸಕರಾಗಿ “ಅನೌಪಚಾರಿಕ ಜ್ಞಾನದ ಶಾಖೆ” ಗಳಾಗಿ ವಸ್ತು ಸಂಗ್ರಹಾಲಯಗಳು” ಎಂಬ ವಿಷಯದ ಕುರಿತು ಮಾತನಾಡಿ ನಮ್ಮ ದೇಶದ ಸಂಸ್ಕøತಿ ಬೇರೆ ದೇಶದಲ್ಲಿ ಸಿಗುವುದಿಲ್ಲ. ವಿದೇಶಿಗರು ನಮ್ಮ ಸಂಸ್ಕøತಿ ನೋಡಲು ಬರುತ್ತಾರೆ. ವಸ್ತು ಸಂಗ್ರಹಾಲಯಗಳ ಹಿನ್ನಲೆ, ಬೆಳೆದು ಬಂದ ಬಗೆ ಅವುಗಳ ಅಧ್ಯಯನದ ಮಹತ್ವ, ವಿವಿಧ ತೆರನಾದ ವಸ್ತು ಸಂಗ್ರಹಾಲಯದ ಕುರಿತು ವಿಸ್ತೃತವಾಗಿ ಮಾತನಾಡಿದರು. ವಿದ್ಯಾರ್ಥಿಗಳಿಗೆ ವಸ್ತು ಸಂಗ್ರಹಾಲಯದ ಅಧ್ಯಯನದ ಅಗತ್ಯತೆಯನ್ನು ಪ್ರಸ್ತಾಪಿಸಿದರು.
ಕ್ಯುರೇಟರ್ ರಾಘವೇಂದ್ರ ಅತಿಥಿಗಳನ್ನು ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳಲ್ಲಿ ವಸ್ತುಸಂಗ್ರಹಾಲಯದ ಅಂತರಾಷ್ಟ್ರೀಯ ವಸ್ತು ಸಂಗ್ರಹಾಲಯಗಳು ಹಾಗೂ ಅವುಗಳ ಜ್ಞಾನದ ಪೂರೈಕೆ ಪ್ರಸ್ತುತ ವಸ್ತು ಸಂಗ್ರಹಾಲಯದ ಅಭಿವೃದ್ಧಿಯ ಕುರಿತು ಸವಿಸ್ತಾರವಾಗಿ ತಿಳಿಸಿದರು.
ಅತಿಥಿಗಳಾಗಿ ಪಪಂ ಮುಖ್ಯಾಧಿಕಾರಿ ಮಲ್ಲಯ್ಯ ಹಿರೇಮಠ ಅವರು ಇತಿಹಾಸ ಪ್ರಜ್ಞೆ, ಚಾರಿತ್ರಿಕ, ಸಾಂಸ್ಕøತಿಕ ಅಧ್ಯಯನಗಳ ಅವಶ್ಯಕತೆ ಕುರಿತು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ ಎಸ್.ಬಿ. ದಳವಾಯಿ ಅವರು ಕರ್ನಾಟಕ ಸುವರ್ಣ ಸಂಭ್ರಮ ಕುರಿತು ಪ್ರಸ್ತಾಪಿಸಿ ಕನ್ನಡ ವಿಷಯದಲ್ಲಿ 125 ಅಂಕಗಳನ್ನು ಗಳಿಸಿದ ವಿದ್ಯಾರ್ಥಿಗಳ ಸಾಧನೆಯನ್ನು ಶ್ಲಾಘಿಸುವುದರ ಜೊತೆಗೆ ಕನ್ನಡ ನಾಡು ನುಡಿಯ ವಿಶೇಷತೆಯನ್ನು ಕೊಂಡಾಡಿದರು.
ಕಾರ್ಯಕ್ರಮದ ಸಾನಿದ್ಯ ವಹಿಸಿ ಆರ್ಶೀವಚನ ನೀಡಿ ಮಾತನಾಡಿದ ರಾಜಗುರು ಸಂಸ್ಥಾನ ಕಲ್ಮಠದ ಶ್ರೀ ರಾಜಯೋಗೀಂದ್ರ ಸ್ವಾಮಿಜಿ ಯಾರಿಗೆ ಇತಿಹಾಸದ ಪ್ರಜ್ಞೆ ಇರುವುದಿವೋ ಅಂತವರಿಗೆ ಇತಿಹಾಸ ನಿರ್ಮಿಸಲು ಸಾಧ್ಯವಿಲ್ಲ. ಕನ್ನಡ ಭಾಷೆ, ಇತಿಹಾಸ ಪ್ರಜ್ಞೆಯ ಬೆಳವಣಿಗೆಯ ಬಗ್ಗೆ ಹಾಗೂ ವಸ್ತುಸಂಗ್ರಹಾಲಯ ವಿದ್ಯಾರ್ಥಿಗಳನ್ನು ವಹಿಸುವ ಪ್ರಾಮುಖ್ಯತೆಯನ್ನು ತಿಳಿಸಿದರು. ಜೊತೆಗೆ ವಿದ್ಯಾರ್ಥಿಗಳ ಸಾಂಸ್ಕೃತಿಕ,ಸಾಮಾಜಿಕ ಜವಾಬ್ದಾರಿಗಳನ್ನು ಮನಗಾಣಿಸಿದ ಅವರು ಜನಸಾಮಾನ್ಯರು ವಸ್ತು ಸಂಗ್ರಹಾಲಯಗಳಿಗೆ ಭೇಟಿ ನೀಡುವುದರ ಮೂಲಕ ಅವುಗಳ ಮಹತ್ವ ಅರಿಯಬೇಕು ಕನ್ನಡ ವಿಷಯದಲ್ಲಿ ವಿದ್ಯಾರ್ಥಿಗಳು ಹೆಚ್ಚಿನ ಅಂಕ ಗಳಿಸಿ ತಾಲೂಕಿಗೆ ಕೀರ್ತಿ ಹೆಚ್ಚಿಸಿದ್ದೀರಿ. ನಿಮ್ಮ ಭವಿಷ್ಯ ಉಜ್ವಲವಾಗಲಿ ಎಂದರು.
2023-24 ನೇ ಸಾಲಿನಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ತಾಲೂಕಿಗೆ ಪ್ರಥಮ ಮೂರು ಸ್ಥಾನ ಪಡೆದ ವಿದ್ಯಾರ್ಥಿಗಳಾದ ಕುಮಾರಿ, ಕೀರ್ತಿ ರವಳೋಜಿ, ಕುಮಾರಿ ಗಂಗಮ್ಮ ಹೈಬತ್ತಿ , ಕುಮಾರ ಸಮ್ಮೇದ ಭೋಜ್ ಹಾಗೂ ಕುಮಾರಿ ಅನನ್ಯ ಇಟಗಿ ಇವರುಗಳನ್ನು ಸನ್ಮಾನಿಸಿ ಗೌರವಿಸಲಾಯಿತು.
ಕ.ಸಾ.ಪ ಚನ್ನಮ್ಮನ ಕಿತ್ತೂರ ವತಿಯಿಂದ 2023-24 ನೇ ಸಾಲಿನಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ತಾಲೂಕಿಗೆ ಪ್ರಥಮ, ದ್ವಿತೀಯ, ತೃತೀಯ ಸ್ಥಾನ ಪಡೆದ ವಿದ್ಯಾರ್ಥಿಗಳ ಹಾಗೂ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಕನ್ನಡ ವಿಷಯದಲ್ಲಿ 125 ಕ್ಕೆ 125 ಅಂಕಗಳನ್ನು ಪಡೆದ 24 ವಿದ್ಯಾರ್ಥಿಗಳನ್ನು ಪ್ರಮಾಣ ಪತ್ರ , ಪುಸ್ತಕ ಕಾಣಿಕೆ, ಕನ್ನಡ ಕೊರಳು ಪಟ್ಟಿಗಳನ್ನು ನೀಡಿ ಗೌರವಿಸಲಾಯಿತು.
ತಹಶೀಲ್ದಾರ ರವೀಂದ್ರ ಹಾದಿಮನಿ, ಮಹೇಶ ಹೊಂಗಲ, ವಿವೇಕ ಕುರಗುಂದ, ವ್ಹಿ.ಎಸ್.ನಂದಿಹಳ್ಳಿ, ನಾಗಯ್ಯ ಹುಲೆಪ್ಪನವರಮಠ, ಪ್ರಭಾವತಿ ಲದ್ದಿಮಠ ಹಾಗೂ ಸರ್ವಸದಸ್ಯರು ಭಾಗವಹಿಸಿದ್ದರು. ಶಾಲಾ ಕಾಲೇಜು ಮತ್ತು ಸ್ಥಳೀಯ ವಿವಿಧ ತರಬೇತಿ ಸಂಸ್ಥೆಯ ವಿದ್ಯಾರ್ಥಿಗಳು ಸಾರ್ವಜನಿಕರಿದ್ದರು. ಮಂಜುನಾಥ. ಕಳಸಣ್ಣವರ ಪರಿಚಯಿಸಿದರು. ಬಿ.ಸಿ. ಬಿದರಿ ನಿರೂಪಿಸಿದರು. ರಾಜಶೇಖರ. ರಗಟಿ ವಂದಿಸಿದರು. ಕುಮಾರಿ ಕೃತಿ ಮತ್ತು ಅಕ್ಷರಾ ಪ್ರಾರ್ಥಿಸಿದರು.