ವಾಸವಿ ಕನ್ಯಕಾ ಪರಮೇಶ್ವರಿಯವರ ಜಯಂತೋತ್ಸವ ಭವ್ಯ ಮೆರವಣಿಗೆ
ಬೀದರ: ಮೇ.19:ಪ್ರತಿ ವರ್ಷದಂತೆ ಈ ವರ್ಷವು ಕೂಡಾ ಶ್ರೀ ವಾಸವಿ ಕನ್ಯಕಾ ಪರಮೇಶ್ವರಿ ಜಯಂತೋತ್ಸವ ಆಚರಿಸಲಾಯಿತು.
ಬೆಳಿಗ್ಗೆ 6:00 ಗಂಟೆಯಿಂದ ಅಭಿಷೇಕ, 9:00 ಗಂಟೆಗೆ ಕುಂಕುಮಾರ್ಚನೆ, ಪುಷ್ಪಾರ್ಚನೆ ಮತ್ತು ಮಧ್ಯಾಹ್ನ 12:00 ಗಂಟೆಗೆ ತೊಟ್ಟಿಲು ಕಾರ್ಯಕ್ರಮ ಅತಿ ವಿಜೃಂಭಣೆಯಿಂದ ನಡೆಸಿ ಸಾಯಂಕಾಲ 6 ಗಂಟೆಗೆ ಭವ್ಯ ಮೆರವಣಿಗೆಯಲ್ಲಿ ಮಹಿಳೆಯರು ಬಣ್ಣದ ಶಿರೆ ಉಟ್ಟಿಕೊಂಡು ಕೋಲಾಟ ಆಡುತ್ತಾ ಮೇರವಣಿಗೆಯಲ್ಲಿ ಶೋಭೆ ತಂದಿತ್ತು
ಹೊರ ರಾಜ್ಯದ ಮಹಾರಾಷ್ಟ್ರಾದ ಪೂಣೆಯಿಂದ ಬ್ಯಾಂಡ ಹಾಗೂ ಭಜನೆ ಹಾಗೂ ನೃತ್ಯದೊಂದಿಗೆ ಮೇರವಣಿಗೆಯಲ್ಲಿ ಶೋಭೆ ಹೆಚ್ಚಸಿದ್ದರು.
À ಈ ಮೇರವಣಿಗೆವು ಕನ್ಯಕಾ ಪರಮೇಶ್ವರಿ ದೇವಸ್ಥಾನದಿಂದ ಬಸವೇಶ್ವರ ವೃತ್ತ, ಮಹಾವೀರ ವೃತ್ತ, ಅಂಬೇಡ್ಕರ್ ವೃತ್ತ, ಕ್ರಾಂತಿ ಗಣೇಶ, ವಿನಾಯಕ್ ವೃತ್ತ, ಮುಖ್ಯ ರಸ್ತೆ, ಚೌಬಾರ, ಮಾರ್ಗವಾಗಿ ಮತ್ತೆ ದೇವಸ್ಥಾನಕ್ಕೆ ತಲುಪಿತು.
ಆರ್ಯ ವೈಶ್ಯ ಸಂಘದ ಪದಾಧಿಕಾರಿಗಳು, ವಾಸವಿ ಮಹಿಳಾ ಮಂಡಳ, ವಾಸವಿ ಯುವತಿ ಸಂಘ, ವಾಸವಿ ಕಿಶೋರ ಸಂಘ, ವಾಸವಿ ಫ್ರೇಂಡ್ಸ್ ಗ್ರೂಪ, ಕನ್ಯಕಾ ಮರಮೇಶ್ವರಿ ಮಿತ್ರ ಮಂಡಳದ ಎಲ್ಲಾ ಪದಾಧಿಕಾರಿಗಳು, ಭಕ್ತಾಧಿಗಳು ಸೇರಿ ಜಯಂತಿಗೆ ಕಳೆ ತಂದುಕೊಟ್ಟರು
ಸಂಘದ ಅಧ್ಯಕ್ಷರಾದ ಡಿ.ವಿ. ಸಿಂದೋಲ, ಉಪಾಧ್ಯಕ್ಷರಾದ ದಿಗಂಬರ ಪೆÇೀಲಾ, ಪ್ರಧಾನ ಕಾರ್ಯದರ್ಶಿಗಳಾದ ಶ್ರೀನಿವಾಸ ಪೆÇಲಾ, ಕಾರ್ಯದರ್ಶಿಗಳಾದ ಚಂದ್ರಶೇಖರ ಗಾದಾ, ವೆಂಕಟೇಶ ಪಿ. ಗಾಧಾ ಹಾಗೂ ಖಜಾಂಚಿಗಳಾದ ಸುನೀಲ ಸೇರಿಧಂತೆ ಅನೇಕ ಗಣ್ಯರು, ಭಕ್ತಾಧಿಗಳು ಉಪಸ್ಥಿತರಿದ್ದರು.