ಅಂತರರಾಷ್ಟ್ರಿಯ ವಸ್ತು ಸಂಗ್ರಹಾಲಯ ದಿನಾಚರಣೆ
ಬಾಗಲಕೋಟೆ: ಮೇ 19: ಪುರಾತತ್ವವಸ್ತು ಸಂಗ್ರಹಾಲಯಗಳುಗತಕಾಲದ ವೈಭವವನ್ನು ತಿಳಿಸುವದಲ್ಲದೇ ಶೈಕ್ಷಣಿಕ ಹಾಗೂ ಸಂಶೋದÀsÀನೆಯ ಕೇಂದ್ರಗಳಾಗಿವೆ ಎಂದು ಬಾದಾಮಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾದ್ಯಾಪಕ ಗೋವರ್ಧನ ಪಿ.ಬಿ ಅಭಿಪ್ರಾಯ ಪಟ್ಟರು.
ಶನಿವಾರ ಬಾದಾಮಿಯ ಭಾರತೀಯ ಪುರಾತತ್ವ ಸರ್ವೇಕ್ಷಣೆ ಇಲಾಖೆಯ ಪುರಾತತ್ವ ಸಂಗ್ರಹಾಲಯದಲ್ಲಿ ಹಮ್ಮಿಕೊಂಡ ಅಂತರಾಷ್ರ್ಟೀಯ ವಸ್ತು ಸಂಗ್ರಹಾಲಯ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ವಿಶ್ವದ ಇತಿಹಾಸವನ್ನು ಕಟ್ಟಿಕೊಡುವಲ್ಲಿ ವಸ್ತು ಸಂಗ್ರಹಾಲಯಗಳು ಪ್ರಮುಖ ಪಾತ್ರವಹಿಸುತ್ತಿವೆ ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದಂತಹ ವೀರಪುಲಕೇಶಿ ವಿದ್ಯಾವರ್ಧಕ ಸಂಘದ ನಿವೃತ್ತ ಮುಕ್ಯೋಪಾದ್ಯಾಯ ಎಸ್.ಎಮ್.ಹಿರೇಮಠ ಮಾತಾನಾಡಿ ವಿದ್ಯಾರ್ಥೀಗಳು ಸ್ಮಾರಕಗಳ ವಸ್ತು ಸಂಗ್ರಹಾಲಯಗಳಿಗೆ ಭೇಟಿ ನೀಡಿ ಅವುಗಳ ಮಹತ್ವಗಳನ್ನು ಅರಿತುಕೊಂಡು ಮತ್ತಷ್ಟು ಸಂಶೋಧನೆಯನ್ನು ಮಾಡಬೇಕೆಂದು ತಿಳಿಸಿದರು.
ಪ್ರಾರಂಭದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ಸಹಾಯಕ ಅಧೀಕ್ಷಕ ಡಾ.ದೇವರಾಜ ಸಾರಂಗಮಠ ಅವರು ಪ್ರತಿವರ್ಷವು ಮೇ 18ರಂದು ಅಂತರಾಷ್ರ್ಟೀಯ ವಸ್ತು ಸಂಗ್ರಹಾಲಯ ದಿನಾಚರಣೆಯನ್ನು ಆಚರಿಸಲಾಗುತ್ತದೆ. ಇದರ ಪ್ರಮುಖ ಉದ್ದೇಶ ವಸ್ತು ಸಂಗ್ರಹಾಲಯಗಳ ಪ್ರಾಮುಖ್ಯತೆಯ ಮಹತ್ವ ಕುರಿತು ವಿದ್ಯಾರ್ಥೀಗಳಿಗೆ ಅರಿವುಮೂಡಿಸದಾಗಿದೆ. ಗತಕಾಲದ ಇತಿಹಾಸವನ್ನು ಪ್ರತಿಬಿಂಬಸುವಲ್ಲಿ ಮಹತ್ವದ ಪ್ರಾತವಹಿಸುತ್ತವೆ. ಇವು ಅಂದಿನ ಕಾಲದ ರಾಜಕೀಯ, ಸಾಮಾಜಿಕ, ಆರ್ಥೀಕ, ಧಾರ್ಮಿಕ, ವಿಚಾರಗಳಿಗೆ ಮತ್ತು ಮಹತ್ವದ ಘಟನೆಗಳಿಗೆ ಸಾಕ್ಷಿಯಾಗಿ ನಿಂತಿವೆ ಎಂದರು.
ಕಾರ್ಯಕ್ರಮದಲ್ಲಿ ಭಾರತೀಯ ಪುರಾತತ್ವ ಸರ್ವೇಕ್ಷಣೆಇಲಾಖೆಯ ಪುರಾತತ್ವ ಸಂಗ್ರಹಾಲಯದÀ ಸಿಬ್ಬಂದಿ ವರ್ಗದವರು ಸೇರಿದಂತೆ ಬಾದಾಮಿ ಸರಕಾರಿ ಪ್ರಥಮ ದರ್ಜೇ ಕಾಲೇಜು ವಿದ್ಯಾರ್ಥೀಗಳು ಪಾಲ್ಗೊಂಡಿದ್ದರು.