ಮಣ್ಣು ಮಾದರಿ ಪರೀಕ್ಷೆಯ ವರದಿ ಆಧರಿಸಿ ಬೆಳೆ ಆಯ್ಕೆ ರಸಗೊಬ್ಬರ ಬಳಕೆಗೆ ಸಲಹೆ
ಆಳಂದ:ಮೇ.19: ಮುಂಗಾರು ಅಥವಾ ಹಿಂಗಾರು ಹಂಗಾಮಿನ ಬಿತ್ತನೆ ಪೂರ್ವ ರೈತರು ಹೊಲದ ಮಣ್ಣಿನ ಮಾದರಿಯನ್ನು ಪರೀಕ್ಷೆಯ ವರದಿ ಆಧಾರದ ಮೇಲೆ ಬೆಳೆ ಆಯ್ಕೆ ಮಾಡಿಕೊಂಡು ಅಗತ್ಯ ರಸಗೊಬ್ಬರ ಬಳಕೆಗೆ ಮುಂದಾಗಬೇಕು ಎಂದು ಕಲಬುರಗಿ ಕೃಷಿ ಸಂಶೋಧನ ಕೇಂದ್ರದ ವಿಜ್ಞಾನಿಗಳ ತಂಡವು ಸಲಹೆ ನೀಡಿದೆ.
ಮಣ್ಣು ಪರೀಕ್ಷೆ ಮಾಡಿಸಬೇಕು.
ಕೃಷಿಯಲ್ಲಿ ನೈಸರ್ಗಿಕವಾಗಿ ದೊರೆಯುವ ಮಣ್ಣಿಗೆ ಮಹತ್ತರ ಪಾತ್ರವಿದೆ Éಕಾರಣ ಯಾವುದೇ ಬೆಳೆಯ ಉತ್ತಮ ಬೆಳವಣಿಗೆಗೆ ಹಾಗೂ ಇಳುವರಿಗೆ ಮಣ್ಣಿನ ಫಲವತ್ತತೆಯು ಉನ್ನತ ಮಟ್ಟದಲ್ಲಿರಬೇಕಾದ ಅಗತ್ಯವಿದೆ. ಮಣ್ಣಿಗೆ ಅವಶ್ಯವಿರುವ ಪೋಷಕಾಂಶಗಳ ಸರಿಯಾದ ಮಾಹಿತಿಯಿಲ್ಲದೇ ಅನಾವಶ್ಯಕವಾಗಿ ರಾಸಾಯನಿಕಗಳನ್ನು ಬಳಕೆ ಮಾಡುತ್ತಿರುವುದರಿಂದ ಮಣ್ಣಿನಲ್ಲಿರುವ ಪ್ರಮುಖ ಪೋಷಕಾಂಶಗಳು ನಾಶವಾಗಿ ಕ್ರಮೇಣ ಭೂಮಿಯು ಬರಡಾಗುತ್ತಿದೆ.ಅದಕ್ಕಾಗಿ ರೈತರು ತಮ್ಮ ಜಮೀನಿನ ಮಣ್ಣನ್ನು ಬಿತ್ತನೆಗೆ ಪೂರ್ವದಲ್ಲಿ ವೈಜ್ಞಾನಿಕವಾಗಿ ಮಣ್ಣಿನ ಮಾದರಿಯನ್ನು ಸಂಗ್ರಹಿಸಿ ಮಣ್ಣು ಪರೀಕ್ಷೆ ವರದಿ ಆಧಾರದ ಮೇಲೆ ಬೆಳೆ ಆಯ್ಕೆ ಮತ್ತು ರಸಗೊಬ್ಬರಗಳ ಪ್ರಮಾಣವನ್ನು ನಿರ್ಧರಿಸಬೇಕು. ರಾಸಾಯನಿಕ ಗೊಬ್ಬರಗಳ ಬೆಲೆ ಅಧಿಕವಾಗಿರುವ ಇಂದಿನ ದಿನಗಳಲ್ಲಿ ಅವಶ್ಯಕತೆಗೆ ತಕ್ಕಂತೆ ಕೊರತೆಯಿರುವ ಪೋಷಕಾಂಶಗಳ ನಿರ್ವಹಣೆ ಮಾಡಿಅಗತ್ಯವಿದ್ದಷ್ಟು ಗೊಬ್ಬರಗಳನ್ನು ಕೊಡುವುದರಿಂದ ಇಳುವರಿ ಜೊತೆಗೆಆರ್ಥಿಕದೃಷ್ಟಿಕೋನದಿಂದಲ್ಲದೇ ಮಾನವರ ಹಾಗೂ ಮಣ್ಣಿನಆರೋಗ್ಯದದೃಷ್ಟಿಯಿಂದಲೂ ಲಾಭದಾಯಕವಾಗಿದೆ. ಪ್ರಸ್ತುತ ಹದವಾಗಿ ಮಳೆಯಾಗಿರುವುದರಿಂದ ಮುಂಗಾರಿನ ಬೇಸಾಯಕ್ಕೆ ಭೂಮಿ ಸಿದ್ದಗೊಳಿಸುವ ಬಹುಪಯೋಗಿ ಕೃಷಿ ಚಟುವಟಿಕೆಯಾದ ಮಾಗಿ ಉಳುಮೆಯಂತಹ ಸಾಂಪ್ರದಾಯಿಕ ಪದ್ದತಿಗಳನ್ನು ಕೈಗೊಳ್ಳುವುದರಿಂದ ಅಲ್ಪಖರ್ಚಿನಲ್ಲಿಉತ್ತಮ ಫಸಲನ್ನುತೆಗೆಯಬಹುದು.ಇದರಿಂದ ಮಣ್ಣಿನ ಆರೋಗ್ಯ ಕಾಪಾಡುವುದರ ಮೂಲಕ ವಿಷಮುಕ್ತ ಕೃಷಿಯನ್ನುಕೈಗೊಂಡು ಆರೋಗ್ಯಯುತ ಸಮಾಜ ನಿರ್ಮಾಣ ಮಾಡಬಹುದಾಗಿದೆ.
ಮಾಗಿ ಉಳುಮೆ: ಮಾಗಿ ಉಳುಮೆ ಎಂಬುವುದು ಮುಂಗಾರಿಗಿಂತ ಮುಂಚೆ ಹಾಗೂ ಹಿಂಗಾರು ಬೆಳೆಗಳ ಕಟಾವಿನ ನಂತರ ಅಂದರೆ ಬೇಸಿಗೆಯಲ್ಲಿ ಕೈಗೊಳ್ಳಬಹುದಾದಕ ಡಿಮೆಖರ್ಚಿನ ಆದರೆ ಬಹು ಉಪಯೋಗಿಕೃಷಿ ಚಟುವಟಿಕೆಯಾಗಿದೆ.
ಮಾಗಿ ಉಳುಮೆ ಪ್ರಯೋಜನ
ಜಮೀನಿನ ಮಣ್ಣಿನ ಮೇಲೆ ಪರಿಣಾಮ:
ಬೇಸಿಗೆಯಲ್ಲಿ ಮಾಗಿ ಉಳುಮೆಯಿಂದ ತಯಾರಾದ ಜಮೀನು ಮುಂಗಾರು ಮಳೆಯಾಗುತ್ತಿದ್ದಂತೆ ಹರಗಿ ಬಿತ್ತಲು ಸುಲಭವಾಗುತ್ತದೆ. ಇದರಿಂದ ಕೃಷಿ ಭೂಮಿಯಲ್ಲಿನ ಮಣ್ಣುತಿರುವು ಮುರುವಾಗಿ ಸಡಿಲವಾಗುವುದರಿಂದ ಬಿದ್ದಂತಹ ಮಳೆ ನೀರು ಸುಲಭವಾಗಿ ಅಲ್ಲಿಯೇ ಇಂಗಿ ಭೂಮಿಯ ಅಂತರಜಲ ಮಟ್ಟ ಮತ್ತು ತೇವಾಂಶದ ಪ್ರಮಾಣ ಅಧಿಕವಾಗಲು ಸಡಿಲಾಗುವಂತೆ ಮಾಡಿ ಮಳೆ ನೀರನ್ನು ಸಾಕಷ್ಟು ಪ್ರಮಾಣದಲ್ಲಿ ಭೂಮಿಯಲ್ಲಿ ಇಂಗುವದಕ್ಕೆ ಸಹಾಯವಾಗಿ ಸಹಕಾರಿಯಾಗುವುದರ ಜೊತೆಗೆ ಬಿತ್ತಿದ ಬೀಜಗಳ ಮೊಳಕೆ ಪ್ರಮಾಣ ಹಾಗೂ ಸದೃಢ ಸಸಿಗಳ ಸಂಖ್ಯೆ ಹೆಚ್ಚಾಗಿ ಅಧಿಕ ಇಳುವರಿ ಪಡೆಯಲು ಅನುಕೂಲವಾಗುತ್ತದೆ.
ಮಣ್ಣಿನ ಮೇಲ್ಪದರ ಸಡಿಗೊಂಡಿರುವುದರಿಂದ ಬೇರುಗಳು ಸರಾಗವಾಗಿ ಆಳಕ್ಕೆ ಇಳಿದು ಬೆಳೆಗಳ ಬೆಳವಣಿಗೆಯಿಂದ ಉತ್ತಮ ಫಸಲನ್ನು ಪಡೆಯಬಹುದು. ಮಾಗಿ ಉಳುಮೆಯನ್ನು ಇಳಿಜಾರಿಗೆ ಅಡ್ಡಲಾಗಿ ಮಾಡುವುದರಿಂದ ಮಣ್ಣು, ನೀರಿನಸಂರಕ್ಷಣೆಮತ್ತು ಮಳೆ ನೀರು ಸಂಗ್ರಹಣೆಹಾಗೂಅದರದಕ್ಷಉಪಯೋಗವನ್ನು ಹೆಚ್ಚಿನ ಖರ್ಚಿಲ್ಲದೆ ಪಡಯಬಹುದು
ಡಾ. ಶ್ರೀನಿವಾಸ ಬಿ.ವಿ, ವಿಜ್ಞಾನಿಗಳು ಮಣ್ಣು ವಿಜ್ಞಾನ. ಕೆವಿಕೆ ಕಲಬುರಗಿ
ಕಳೆಗಳ ನಿಯಂತ್ರಣ: ಮಾಗಿ ಉಳುಮೆ ಕೈಗೊಳ್ಳುವ ಮೂಲಕ ಕರಿಕೆಯ ಬೇರುಗಳು ಹಾಗೂ ಜೇಕಿನ ಗಡ್ಡೆಗಳನ್ನು ಮತ್ತುಇನ್ನಿತರ ಕಳೆಗಳ ಅವಶೇಷಗಳನ್ನು ಸುಲಭವಾಗಿಆರಿಸಿ ತೆಗೆಯಲು ಸಹಾಯವಾಗುವುದರಿಂದ ಮುಂದಿನ ಬೆಳೆಗಳಲ್ಲಿ ಇಂತಹಕಳೆಗಳನ್ನು ಪ್ರಥಮ ಹಂತದಲ್ಲಿಯೇ ಹತೋಟಿ ಮಾಡಬಹುದು. ಕಳೆಗಳ ನಿಯಂತ್ರಣಕ್ಕಾಗಿತಗಲುವ ಕೂಲಿ ಮತ್ತು ಕಳೆನಾಶಕಗಳ ವೆಚ್ಚ ಮತ್ತು ಸಮಯವನ್ನು ಕಡಿಮೆಗೊಳಿಸಬಹುದಾಗಿದೆ.
ಕೀಟ, ರೋಗಾಣುಗಳ ನಿಯಂತ್ರಣ: ಹಿಂಗಾರು ಹಂಗಾಮಿನಲ್ಲಿ ಬೆಳೆದ ಬೆಳೆಗಳಿಗೆ ಸಂಬಂಧಿಸಿದ ಕೀಟಗಳ ಕೋಶ ಮತ್ತು ಅವುಗಳ ತತ್ತಿಗಳು ಸೂರ್ಯನ ಶಾಖಕ್ಕೆ ಒಗ್ಗುವುದರಿಂದಜಮೀನಿನ ಒಳಗೆ ಇರಬಹುದಾದ ಪೈರಿನವೈರಿಗಳಾದ ಕೆಲವು ಕೀಟಗಳು ಮತ್ತು ಸಸ್ಯ ರೋಗಗಳ ರೋಗಾಣುಗಳನ್ನು ಕೋಶದ ಹಂತದಲ್ಲಿಯೇಕಡಿಮೆಖರ್ಚಿನಲ್ಲಿಹತೋಟಿ ಮಾಡುವ ಮೂಲಕ ಮುಂದೆ ಆಗಬಹುದಾದ ಹೆಚ್ಚಿನಹಾವಳಿಯನ್ನು ಪ್ರಾಥಮಿಕ ಹಂತದಲ್ಲಿಯೇ ನಿಯಂತ್ರಿಸಿ ಕೀಟನಾಶಕಗಳು ಮತ್ತು ಪೀಡೆನಾಶಕಗಳಿಗೆತಗಲುವಅನಾವಶ್ಯಕಖರ್ಚನ್ನು ಕಡಿಮೆಗೊಳಿಸಬಹುದು.
ನೈಸರ್ಗಿಕ ಹಾಗೂ ಜೈವಿಕ ಪರಿಸರದಮೇಲೆ ಪರಿಣಾಮ:ಮಾಗಿ ಉಳುಮೆಯಿಂದ ಕೀಟಗಳ ಕೋಶಗಳು ಮತ್ತು ರೋಗಾಣುಗಳನ್ನು ಕೊಕ್ಕರೆ ಮತ್ತು ಮುಂತಾದಪಕ್ಷಿಗಳು ಹೆಕ್ಕಿ ತಿನ್ನುವುದರಿಂದಜೈವಿಕ ನಿಯಂತ್ರಣದಿಂದಕೀಟ ಮತ್ತು ರೋಗಗಳನ್ನು ಹತೋಟಿ ಮಾಡಿ ಮಣ್ಣಿನಆರೋಗ್ಯ, ಪರಿಸರ ಮತ್ತುಆಹಾರವನ್ನುರಾಸಾಯನಿಕಗಳ ಬಳಕೆಯನ್ನು ಕಡಿಮೆಗೊಳಿಸಬಹುದು.ಜೊತೆಗೆ ಮಣ್ಣಿನಲ್ಲಿಜೈವಿಕಕ್ರಿಯೆಯನ್ನು ಹೆಚ್ಚಿಸಲು ಸಹಕಾರಿಯಾಗುತ್ತದೆ.
ಬೆಳೆ ಉಳಿಕೆಗಳು: ಬೆಳೆ ಕಟಾವು ನಂತರ ಉಳಿದ ಬೆಳೆ ಉಳಿಕೆಗಳು ಮತ್ತುತ್ಯಾಜ್ಯವಸ್ತುಗಳು ಮಣ್ಣಿನಲ್ಲಿ ಬೇಗನೆಕೊಳೆತು ಉತ್ತಮ ಸಾವಯವಗೊಬ್ಬರವಾಗಿ ಮುಂಬರುವ ಬೆಳೆಗಳಿಗೆ ಪೂರೈಕೆಯಾಗುತ್ತದೆ.ಇದರಿಂದಕೃಷಿ ಪರಿಸರದಲ್ಲಿ ಸಾವಯವ ಪದಾರ್ಥಗಳ ಬಳಕೆಯಿಂದ ಮಣ್ಣಿನ ಫಲವತ್ತತೆ ಹಾಗೂ ಉತ್ಪಾದಕತೆ ಹೆಚ್ಚಿಸುವಮೂಲಕ ಸ್ವಾಭಾವಿಕಕ್ರಿಯೆಗಳನ್ನು ತ್ವರಿತಗೊಳಿಸಿದಂತಾಗುತ್ತದೆ.
ರೈತರು ಬೇಸಿಗೆಯಲ್ಲಿ ಮಾಗಿ ಉಳುಮೆ ಕೈಗೊಂಡು ನೈಸರ್ಗಿಕ ಹಾಗೂ ಜೈವಿಕ ವಿಧಾನಗಳಿಂದ ಪ್ರಕೃತಿದತ್ತವಾದ ಮಣ್ಣಿನಸಂಪತ್ತನ್ನು ಸಂರಕ್ಷಿಸುವುದು, ಅಭಿವೃದ್ಧಿಪಡಿಸುವುದು ಹಾಗೂ ಸಮರ್ಪಕರೀತಿಯಿಂದ ಬಳಸುವುದು ನಮ್ಮಕೈಯಲ್ಲಿಯೇಇದೆ. ಆದ್ದರಿಂದರೈತರುಮಣ್ಣು ಪರೀಕ್ಷೆಫಲಿತಾಂಶ ಆಧರಿಸಿ ಮೇಲೆ ಬೆಳೆಗಳಿಗೆ ಸಮತೋಲನ ರಸಗೊಬ್ಬರಗಳನ್ನು ಬಳಸಿದರೆÀಭೂಮಿಯ ಫಲವತ್ತತೆ ಹಾಗೂ ಉತ್ಪಾದಕತೆಯನ್ನುಅಂದರೆ ಮಣ್ಣಿನ ಆರೋಗ್ಯವನ್ನು ನಿರಂತರವಾಗಿಕಾಪಾಡಿಕೊಂಡು ಹೋಗಲು ಸಾಧ್ಯವಾಗುತ್ತದೆ.ಜೊತೆಗೆ ಕಡಿಮೆ ಖರ್ಚಿನ ಬೇಸಾಯವನ್ನು ಕೈಗೊಂಡು ಅಧಿಕ ಇಳುವರಿ ಪಡೆಯುವ ಮೂಲಕ ತಮ್ಮಆದಾಯವನ್ನೂ ಸಹ ಹೆಚ್ಚಿಸಿಕೊಳ್ಳಬಹುದು.
ಡಾ. ಜಹೀರ್ ಅಹಮದ್, ಡಾ. ಶ್ರೀನಿವಾಸ ಬಿ.ವಿ ಡಾ. ರಾಜು ಜಿ. ತೆಗ್ಗಳ್ಳಿ ಡಾ. ಯುಸುಫ್ ಅಲಿ ಕೃಷಿ ವಿಜ್ಞಾನ ಕೇಂದ್ರ, ಕಲಬುರಗಿ