ಒಂದು ದಿನದ ಪಾಠಯೋಜನೆ ಕಾರ್ಯಾಗಾರ
ಬಾದಾಮಿ, ಮೇ19: ಇಲ್ಲಿನ ಶ್ರೀ ಕಾಳಿದಾಸ ಶಿಕ್ಷಣ (ಬಿ.ಇಡಿ)ಮಹಾವಿದ್ಯಾಲಯದ ವತಿಯಿಂದ ಶ್ರೀ ಕಾಳಿದಾಸ ಶಿಕ್ಷಣ ಸಂಸ್ಥೆಯ, ಶ್ರೀ ಕಾಳಿದಾಸ ಶಿಕ್ಷಣ (ಬಿ.ಇಡಿ) ಮಹಾವಿದ್ಯಾಲಯದಲ್ಲಿ ಒಂದು ದಿನದ ಘಟಕ ಪಾಠಯೋಜನೆ ಕಾರ್ಯಾಗಾರವನ್ನು ಸಂಸ್ಥೆಯ ಸಭಾ ಭವನದಲ್ಲಿ ಹಮ್ಮಿಕೊಳ್ಳಲಾಯಿತು.
ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಶಿಕ್ಷಕ ಶಿವಯೋಗಿ ಕುಂಬಾರ ಕಾರ್ಯಾಗಾರದಲ್ಲಿ ಪಾಲ್ಗೊಂಡು ನಮ್ಮ ಬಿ.ಇಡಿ ಪ್ರಶಿಕ್ಷಣಾರ್ಥಿಗಳಿಗೆ ಘಟಕ ಪಾಠಯೋಜನೆಯ ಸಂಪೂರ್ಣ ಮಾಹಿತಿಯನ್ನು ನೀಡಿದರು. ಈ ಕಾರ್ಯಾಗಾರಕ್ಕೆ ಬಿ.ಇಡಿ ಮಹಾವಿದ್ಯಾಲಯದ ಪ್ರಾಚಾರ್ಯರು, ಸರ್ವಸಿಬ್ಬಂದಿಗಳು ಹಾಜರಿದ್ದರು.