ಜೂ.15 ರಂದು ರಾಜ್ಯ ಮಟ್ಟದ ಕುಸ್ತಿ ಪಂದ್ಯಾವಳಿ
ಸಂಜೆವಾಣಿ ನ್ಯೂಸ್
ಎಚ್.ಡಿ.ಕೋಟೆ.ಮೇ.19:- ತಾಲೂಕಿನ ಇತಿಹಾಸದಲ್ಲೇ ಇದೆ ಮೊದಲ ಬಾರಿಗೆ ಇಲ್ಲಿನ ಶ್ರೀ ರಾಮಾಂಜನೇಯ ಕುಸ್ತಿ ಸಂಘದ ವತಿಯಿಂದ ರಾಜ್ಯ ಮಟ್ಟದ ಕುಸ್ತಿ ಪಂದ್ಯಾವಳಿಯನ್ನು ಜೂ.15 ರಂದು ಪಟ್ಟಣದ ಉಪ್ಲಿಕೆರೆ ಮೈದಾನದಲ್ಲಿ ಅಯೋಜಿಸಲಾಗುವುದು ಎಂದು ಸಂಘದ ಅಧ್ಯಕ್ಷ ಹೋಟೆಲ್ ನಂದೀಶ್ ತಿಳಿಸಿದರು.ಎಚ್.ಡಿ.ಕೋಟೆ ತಾಲೂಕು ಪತ್ರಕರ್ತರ ಸಂಘದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ರಾಜ್ಯ ಮಟ್ಟದ ಕುಸ್ತಿ ಪಂದ್ಯಾವಳಿಯೂ ಕ್ಷೇತ್ರದ ಶಾಸಕರು, ಮಾಜಿ ಶಾಸಕರು, ತಾಲೂಕಿನ ಅನೇಕ ಮುಖಂಡರು, ಸಂಘ ಸಂಸ್ಥೆಗಳು ಹೀಗೆ ಎಲ್ಲರ ಸಹಕಾರದಲ್ಲಿ ಸುಮಾರು 13 ಲಕ್ಷ ರೂ ವೆಚ್ಚದಲ್ಲಿ ನಡೆಯುತ್ತಿದ್ದು, ರಾಜ್ಯದ ವಿವಿಧ ಭಾಗಗಳಿಂದ 40ಕ್ಕೂ ಹೆಚ್ಚು ಪೈಲ್ವಾನ್‍ಗಳು ಭಾಗವಹಿಸಲಿದ್ದು, ಪಂದ್ಯಾವಳಿಯಲ್ಲಿ ಮೊದಲ ಬಾರಿಗೆ 40 ಜೊತೆ ನಾಡ ಕುಸ್ತಿ ಪೈಲ್ವಾನ್‍ಗಳು ಸೆಣಸಾಡಲಿದ್ದಾರೆ ಎಂದ ಅವರು ಗೆದ್ದ ಮೊದಲ ಜೋಡಿಗೆ ಬೆಳ್ಳಿ ಹಾಗೂ ಕಂಚಿನ ಗಾಧೆ ಬಹುಮಾನ ಇರಲಿದೆ, ಇನ್ನೂ ಪಂದ್ಯಾವಳಿಯಲ್ಲಿ ಭಾಗವಹಿಸಿದ ಎಲ್ಲ 40 ಜೊತೆ ಫೈಲ್ವಾನ್‍ಗಳಿಗೂ ಪ್ರಶಸ್ತಿ ಪ್ರತ್ರದ ಜತೆಗೆ ನಗದು ಬಹುಮಾನ ಇರಲಿದೆ ಎಂದು ನುಡಿದರು.
ಚಿತ್ರ ನಟ ದೊಡ್ಡಣ್ಣ, ಧ್ರುವ ಸರ್ಜಾ ಆಗಮನ: ಇನ್ನೂ ತಾಲೂಕಿನಲ್ಲಿ ಇದೇ ಮೊದಲ ಬಾರಿಗೆ ನಡೆಯುತ್ತಿರುವ ರಾಜ್ಯ ಮಟ್ಟದ ಕುಸ್ತಿ ಪಂದ್ಯಾವಳಿಯಲ್ಲಿ ಖ್ಯಾತ ಚಿತ್ರನಟ ದೊಡ್ಡಣ್ಣ, ಧ್ರುವ ಸರ್ಜಾ, ರಾಘ ಮಾದವನ್ ಸೇರಿದಂತೆ ಇನ್ನೀತರ ಗಣ್ಯರು ಭಾಗವಹಿಸಲಿದ್ದಾರೆ.
ಹಾಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಯುವ ಕ್ರೀಡಾ ಸ್ಪರ್ಧಿಗಳು, ಹಿರಿಯ ಮುಖಂಡರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಕನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಶ್ರೀ ರಾಮಾಜಂನೇಯ ಕುಸ್ತಿ ಸಂಘದ ಉಪಾಧ್ಯಕ್ಷ ನಿಂಗಪ್ಪ, ಗೌರವಾಧ್ಯಕ್ಷ ಡೈರಿ ಶ್ರೀಕಾಂತ್, ಕಾನೂನು ಸಲಹೆಗಾರ ವಕೀಲ ಆರ್.ನಾಗೇಶ್, ಕಾರ್ಯದರ್ಶಿ ನಾಗೇಶ್, ಸಹ ಕಾರ್ಯದರ್ಶಿ ಪೂರ್ಣೇಶ್, ಕಾರ್ಯಕಾರಿ ಸಮಿತಿಯ ಜಯಂತ್ ಜಿ, ಬಿಡುಗಲು ರಾಜು, ಪ್ರಶಾಂತ್, ಫೈಲ್ವಾನ್ ನಾಗೇಶ್ ಮತ್ತೀತರರು ಇದ್ದರು.