38ನೇ ವರ್ಷದ ದಿಂಡಿ ಮಹೋತ್ಸವ
ಸಂಜೆವಾಣಿ ವಾರ್ತೆ
ಮಂಡ್ಯ.ಮೇ.19:- ಭಾವಸಾರ ಕ್ಷತ್ರಿಯ ಸಮಾಜ, ಶ್ರೀ ಪಾಂಡುರಂಗಸ್ವಾಮಿ ದೇವಸ್ಥಾನ ವತಿಯಿಂದ ನಗರದ ಶ್ರೀ ಪಾಂಡುರಂಗಸ್ವಾಮಿ ದೇವಾಲಯದ ಆವರಣದಲ್ಲಿ 38ನೇ ವರ್ಷದ ದಿಂಡಿ ಮಹೋತ್ಸವ ವಿಜೃಂಭಣೆಯಿಂದ ನಡೆಯಿತು.
ಬೆಳಗ್ಗೆ 5.30ಕ್ಕೆ ಕಾಕಡ ಆರತಿ, 6 ಗಂಟೆಗೆ ಧ್ವಜಾರೋಹಣ, ದೇವತಾ ಮೂರ್ತಿಗಳಿಗೆ ಪಂಚಾಮೃತ ಅಭಿಷೇಕ, 7 ಗಂಟೆಗೆ ಜ್ಞಾನೇಶ್ವರಿ ಪಾರಾಯಣ ಬಳಿಕ ಉಪಹಾರ ನಡೆಯಿತು.
ಬೆಂಗಳೂರಿನ ಭಜನಾ ಮಂಡಳಿಯವರು ಪಂಡರಿನಾಥನ ಅಖಂಡ ಭಜನ ಸೇರಿದಂತೆ ವಿವಿಧ ಪೂಜಾ ವಿಧಿವಿಧಾನಗಳನ್ನು ಪೂರೈಸಲಾಯಿತು. ನಂತರ ಶ್ರೀ ಪಾಂಡುರಂಗ ರುಕ್ಮಿಣಿ ಸತ್ಯಭಾಮ ದೇವತಾ ಮೂರ್ತಿಗಳೊಂದಿಗೆ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು.
ಇದೇ ವೇಳೆ ಸಮುದಾಯದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ನಂತರ ವಿದ್ಯಾರ್ಥಿಗಳಿಂದ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆದವು.
ಭಾವಸಾರ ಕ್ಷತ್ರಿಯ ಸಮಾಜದ ಅಧ್ಯಕ್ಷ ಅಶೋಕ ಪುಟಾಣೆ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಕಸ್ತೂರಿಬಾಯಿ ಸುತ್ರಾವೆ, ಖಜಾಂಚಿ ಆನಂದ್ ಎಸ್.ಕೆ. ನಾಯಕ್, ಉಪಾಧ್ಯಕ್ಷ ಶಿವರಾವ್ ಎನ್. ಮಿರಸ್ಕರ್, ಜಂಟಿ ಕಾರ್ಯದರ್ಶಿ ಟಿ.ಎನ್. ಹರ್ಷ ಪೇಟ್ಕರ್, ನಿರ್ದೇಶಕರಾದ ಪದ್ಮಾವತಿ, ಎನ್. ನಾಮದೇವ್ ರೇಳೇಕರ್, ಬಿ.ಎಸ್. ನಾಗರಾಜ್ ಬಗರೆ, ಬಿ.ಡಿ. ರವಿ ಇಜ್ಜಂತ್‍ಕರ್ ಇತರರು ಸಮಾರಂಭದಲ್ಲಿ ಭಾಗವಹಿಸಿದ್ದರು.