ಜೋರು ಮಳೆಗೆ ಕೊಚ್ಚಿಹೋದ ಬಿತ್ತನೆ ಮಾಡಿದ್ದ ಸೂರ್ಯಕಾಂತಿ, ಹತ್ತಿ ಬೀಜಗಳು!
ಸಂಜೆವಾಣಿ ವಾರ್ತೆ
ಚಾಮರಾಜನಗರ, ಮೇ. 19- ಶನಿವಾರ ಮಧ್ಯಾಹ್ನ ಸುರಿದ ಭಾರೀ ಮಳೆಗೆ ಬಿತ್ತನೆ ಮಾಡಿದ್ದ ಸೂರ್ಯಕಾಂತಿ, ಹತ್ತಿ ಬೀಜಗಳು ಕೊಚ್ಚಿಹೋದ ಘಟನೆ ಚಾಮರಾಜನಗರ ತಾಲೂಕಿನ ಹಿರೇಬೇಗೂರು, ಕುಲಗಾಣ, ಅರಳಿಕಟ್ಟೆ ಗ್ರಾಮಗಳಲ್ಲಿ ನಡೆದಿದೆ.
ಪೂರ್ವ ಮುಂಗಾರು ಮಳೆ ಉತ್ತಮವಾಗಿ ಸುರಿದ ಹಿನ್ನೆಲೆ ಬಿತ್ತನೆ ಮಾಡಿದ್ದ ಸೂರ್ಯಕಾಂತಿ, ಹತ್ತಿ ಬೀಜಗಳು ಶನಿವಾರ ಮಧ್ಯಾಹ್ನ ಸುರಿದ ಭಾರೀ ಮಳೆಗೆ ಕೊಚ್ಚಿಹೋದ ಘಟನೆ ಚಾಮರಾಜನಗರ ತಾಲೂಕಿನ ಹಿರೇಬೇಗೂರು, ಕುಲಗಾಣ, ಅರಳಿಕಟ್ಟೆ ಗ್ರಾಮಗಳಲ್ಲಿ ನಡೆದಿದೆ.
ಹಿರೇಬೇಗೂರಿನ ಚೇರ್ಮನ್ ಮಧು, ರಾಜೇಶ್ ಸೇರಿದಂತೆ ಹತ್ತಾರು ರೈತರು ಬಿತ್ತನೆ ಮಾಡಿದ್ದ ಸೂರ್ಯಕಾಂತಿ, ಹತ್ತಿ ಬೀಜಗಳು ಮಳೆ ಆರ್ಭಟಕ್ಕೆ ಕೊಚ್ಚಿ ಹೋಗಿದ್ದು ಮತ್ತೊಮ್ಮೆ ಬಿತ್ತನೆ ಮಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ.
ಹಿರೇಬೇಗೂರಲ್ಲಿ ಟೊಮೊಟೊ ಪೈರುಕೂಡ ಕೊಚ್ಚಿ ಹೋಗಿದ್ದು ವೀರಭದ್ರಪ್ಪ 1 ಎಕರೆಗೆ ಹಾಕಿದ್ದ ಟೊಮ್ಯಾಟೊ ಪೈರು ಮಳೆ ಪಾಲಾಗಿದೆ. ಚೇರ್ಮನ್ ಮಧು ಅವರು 8 ಬ್ಯಾಗ್ ಸೂರ್ಯಕಾಂತಿ ಬಿತ್ತಿದ್ದರು ಈಗ ಎಲ್ಲವೂ ಕೊಚ್ಚಿಹೋಗಿದ್ದು ಸೂಕ್ತ ಪರಿಹಾರ ಕೊಡಬೇಕೆಂದು ಆಗ್ರಹಿಸಿದ್ದಾರೆ.