ಮುಂಗಾರು ಹಂಗಾಮು 81624 ಹೆಕ್ಟರ್ ಖುಷ್ಕಿ ಪ್ರದೇಶ,36823 ಹೆಕ್ಟರ್ ನೀರಾವರಿ ಪ್ರದೇಶ ಬಿತ್ತನೆ ಗುರಿ
ಯಾದಗಿರಿ : ಮೇ 18 : ಮುಂಗಾರು ಹಂಗಾಮಿನ ಸಿದ್ದತೆ 2024-25ನೇ ಸಾಲಿನ ಮುಂಗಾರು ಹಂಗಾಮು ಪ್ರಾರಂಭವಾಗಿದ್ದು, ಯಾದಗಿರಿ ಹಾಗೂ ಗುರುಮಠಕಲ್ ತಾಲ್ಲೂಕುಗಳಲ್ಲಿ ಇಲ್ಲಿಯವರೆಗೆ ವಾಡಿಕೆ ಅನುಸಾರ ಉತ್ತಮ ಮಳೆಯಾಗಿದೆ. ರೈತರು ಭೂಮಿ ಸಿದ್ದತೆಯಲ್ಲಿ ತೊಡಗಿರುತ್ತಾರೆ. ಮುಂದಿನ ವಾರ ಬಹುತೇಕ ರೈತರು ಮುಂಗಾರು ಹಂಗಾಮಿನ ಬಿತ್ತನೆಯಾಗುವ ಸಂಭವವಿರುತ್ತದೆ. ಮುಂಗಾರು ಹಂಗಾಮಿನಲ್ಲಿ 81624 ಹೆಕ್ಟರ್ ಖುಷ್ಕಿ ಪ್ರದೇಶದಲ್ಲಿ ಹಾಗೂ 36823 ಹೆಕ್ಟರ್ ನೀರಾವರಿ ಪ್ರದೇಶದಲ್ಲಿ ಬಿತ್ತನೆ ಗುರಿ ಹಮ್ಮಿಕೊಳ್ಳಲಾಗಿದೆ ಎಂದು ಯಾದಗಿರಿ ಸಹಾಯಕ ಕೃಷಿ ನಿರ್ದೇಶಕರು ಸುರೇಶ ಅವರು ತಿಳಿಸಿದ್ದಾರೆ.