ತಾಜಲಾಪೂರ ಹೊಳೆತ್ತುವ ಕಾಮಗಾರಿ ಪರಿಶೀಲನೆ
ಚಿಂಚೋಳಿ,ಮೇ.18- ತಾಲ್ಲೂಕಿನ ಕನಕಪೂರ ಗ್ರಾಮ ಪಂಚಾಯತ ತಾಜಲಾಪೂರ ಗ್ರಾಮದ ನಾಲಾ ಹೂಳೆತ್ತುವ ಕಾಮಗಾರಿಯ ಕೆಲಸದಲ್ಲಿ 128 ಜನ ಕೂಲಿಕಾರರು ಕೆಲಸ ನಿರ್ವಹಿಸುತ್ತಿದ್ದು, ಸ್ಥಳಕ್ಕೆ ಭೇಟಿ ನೀಡಿ ಎಲ್ಲಾ ಕೂಲಿಕಾರರು ಮಳೆಗಾಲ ಪ್ರಾರಂಭವಾಗುವ ವರೆಗೆ ಪ್ರತಿದಿನ ಕಡ್ಡಾಯವಾಗಿ ಕೆಲಸಕ್ಕೆ ಬರಬೇಕು ನಿಮಗೆ ಪ್ರತಿ ವಾರ ಕೆಲಸ ಇರುತ್ತದೆ 100 ದಿನ ನೀವು ಕೆಲಸ ಪಡೆದುಕೊಳ್ಳಬೇಕು ಎಂದು ಮಾಹಿತಿ ನೀಡಲಾಯಿತು.
ಹೆಚ್ಚಿನ ಜನರಿಗೆ ಕೆಲಸಕ್ಕೆ ಕರೆದುಕೊಂಡು ಬರುವಂತೆ ತಿಳಿಸಲಾಯಿತು ಇದೆ ಸಂದರ್ಭದಲ್ಲಿ ಹಿರಿಯ ನಾಗರಿಕರು ಖುಷಿಯಿಂದ ಕೆಲಸದಲ್ಲಿ ತೊಡಗಿರುವುದು ಮತ್ತು ಅವರಿಗೆ ಕೆಲಸದ ಪರಮಾಣದಲ್ಲಿ ರಿಯಾಯಿತಿ ಇದೆ ಎಂದು ಮಾಹಿತಿ ನೀಡಲಾಯಿತು ಈ ಸಂದರ್ಭದಲ್ಲಿ ತಾಐಇಸಿ ಸಂಯೋಜಕರಾದ ಭೀಮಾಶಂಕರ ಕಮಕನೂರ,ಕಾಯಕಬಂದು ಶ್ಯಾಮಸುಂದರ ತಾಜಲಾಪೂರ,128 ಜನ ಕೂಲಿಕಾರರು ಉಪಸ್ಥಿತರಿದ್ದರು