ಜೂಜಾಟ: 8 ಜನರ ಬಂಧನ
ಕಲಬುರಗಿ,ಮೇ.18-ನಗರದ ಕೋರಂಟಿ ದೇವಸ್ಥಾನ ಮುಂದುಗಡೆ ಇರುವ ಖುಲ್ಲಾ ಜಾಗದಲ್ಲಿ ಜೂಜಾಟವಾಡಲಾಗುತ್ತಿದೆ ಎಂಬ ಮಾಹಿತಿ ಮೇಲೆ ಸ್ಟೇಷನ್ ಬಜಾರ್ ಪೊಲೀಸ್ ಠಾಣೆ ಪಿಐ ಶಕೀಲ್ ಅಹಮದ್ ಅಂಗಡಿ ಮತ್ತು ಸಿಬ್ಬಂದಿಗಳಾದ ಪ್ರಭಾಕರ, ಮೊಶಿನ್, ಫಿರೋಜ್ ಅವರು ದಾಳಿ ನಡೆಸಿ 8 ಜನರನ್ನು ಬಂಧಿಸಿದ್ದಾರೆ.
ಜಗದೀಶ ದುಧನಿ, ಶರಣಬಸವ ಮಣೂರ, ಲಕ್ಷ್ಮೀಕಾಂತ ಜಾಧವ್, ಅಶೋಕ ರಾಠೋಡ್, ಶ್ರೀಕಾಂತ ಉದಗಿಕರ್, ಶರಣಪ್ಪ ಪಂಚಾಕ್ಷರಿ, ಮಹಾಂತೇಶ ಭಜಂತ್ರಿ, ರಾಜು ಮ್ಯಾಗೇರಿ ಎಂಬುವವರನ್ನು ಬಂಧಿಸಿ 10,080 ರೂ.ನಗದು, 52 ಇಸ್ಪೇಟ್ ಎಲೆಗಳನ್ನು ಜಪ್ತಿ ಮಾಡಿದ್ದಾರೆ.
ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.