ಗೋರ್ಟಾ ಸಂಗೀತ ರುದ್ರೇಶ್ವರ ಜಾತ್ರಾ ಮಹೋತ್ಸವ: ಪ್ರಶಸ್ತಿ ಪುರಸ್ಕøತರಿಗೆ ಆಹ್ವಾನ:ಡಾ. ಕೇಶವರಾವ ಸೂರ್ಯವಂಶಿ ಮತ್ತು ಉಸ್ತಾದ್ ಶೇಖ್ ಹನ್ನುಮಿಯ್ಯಾಗೆ ಪುರಸ್ಕಾರ
ಭಾಲ್ಕಿ:ಮೇ.18: ಪಟ್ಟಣದ ಸಂಗೀತ ದಿಗ್ಗಜರಾದ ಡಾ| ಕೇಶವರಾವ ಸೂರ್ಯವಂಶಿ ಗುರೂಜಿ ಮತ್ತು ಉಸ್ತಾದ್ ಶೇಖ್ ಹನ್ನುಮಿಯ್ಯಾರವಿಗೆ ಗೋರ್ಟಾದ ಶ್ರೀ ಸಂಗೀತ ರುದ್ರೇಶ್ವರ 2ನೇ ಜಾತ್ರಾ ಮಹೋತ್ಸವ ನಿಮಿತ್ಯ ಪಂಡಿತ್ ವಿರೂಪಾಕ್ಷ ಸಮ್ಮಾನ್ ರಾಷ್ಟ್ರೀಯ ಪುರಸ್ಕಾರ ನೀಡಲಾಗುತ್ತಿದೆ ಎಂದು ಹಿರೇಮಠ ಸಂಸ್ಥಾನ ಬೆಮಳಖೇಡ್‍ದ ಪೀಠಾಧಿಪತಿ ಡಾ| ರಾಜಶೇಖರ ಶಿವಾಚಾರ್ಯರರು ಹೇಳಿದರು.
ಪಟ್ಟಣದ ಡಾ| ಕೇಶವರಾವ ಸೂರ್ಯವಂಶಿ ನಿವಾಸದಲ್ಲಿಯ ಸಂಗೀತ ಶಾಲೆಯಲ್ಲಿ ಶುಕ್ರವಾರ ಉಭಯ ಕಲಾವಿದರಿಗೆ ಆಹ್ವಾನಿಸಿ ಅವರು ಮಾತನಾಡಿದರು. ಕಲ್ಯಾಣ ಕರ್ನಾಟಕ ಭಾಗದಲ್ಲಿ ಸಂಗೀತ ಕಲೆಯನ್ನು ಉಳಿಸಿ, ಬೆಳೆಸಿಕೊಂಡು ಬಂದಿರುವುದು ಗೋರ್ಟಾದ ಸಂಗೀತ ರುದ್ರೇಶ್ವರ ಮಠದ ಪಂಡಿತ ವಿರೂಪಾಕ್ಷ ಗುರುಗಳು. ಅವರ ಶಿಷ್ಯರಾದ ಭಾಲ್ಕಿಯ ಸಂಗೀತ ಕಲಾವಿದರಾದ ಕೇಶವರಾವ ಸೂರ್ಯವಂಶಿ ಮತ್ತು ಶೇಖ್ ಹನ್ನುಮಿಯ್ಯಾ ರವರು ಸಂಗೀತದಲ್ಲಿ ರಾಷ್ಟ್ರೀಯ, ಅಂತರರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದವರಾಗಿದ್ದಾರೆ. ಈ ಹಿನ್ನಲೆಯಲ್ಲಿ ಅವರಿಗೆ ಶ್ರೀ ಸಂಗೀತ ರುದ್ರೇಶ್ವರ 2ನೇ ಜಾತ್ರಾ ಮಹೋತ್ಸವದಲ್ಲಿ ಪಂ. ವಿರೂಪಾಕ್ಷ ಸಮ್ಮಾನ್ ರಾಷ್ಟ್ರೀಯ ಪುರಸ್ಕಾರ ಪ್ರದಾನ ಮಾಡಲಾಗುತ್ತಿದೆ ಎಂದು ಹೇಳಿದರು. ಪ್ರಶಸ್ತಿಯ ಮೊದಲ ಪುರಸ್ಕಾರ ವಿರೂಪಾಕ್ಷ ಗುರುಗಳ ಪ್ರಥಮ ಶಿಷ್ಯರಿಗೆ ಸಲ್ಲುತ್ತಿದೆ. ಹೀಗಾಗಿ ಈ ಉಭಯ ಕಲಾವಿದರಿಗೆ ಒಟ್ಟಿಗೆ ಆಹ್ವಾನಿಸಲಾಗುತ್ತಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕಲಾವಿದ ಹಣಮಂತ ಚಿದ್ರಿ, ರಾಜ್ಯ ದಿಶಾ ಸಮಿತಿಯ ಸದಸ್ಯ ಶಿವಯ್ಯಾ ಸ್ವಾಮಿ, ಬಸವರಾಜ ಹಾಳೆ, ಸಂಗಮೇಶ ಡೊಣಗಾಪೂರ, ಸಂಗಶೇಟ್ಟಿ ವಿರಶೆಟ್ಟೆ ಡೊಣಗಾಪುರ, ಜಯರಾಜ ದಾಬಶೆಟ್ಟಿ ಮತ್ತಿತರರು ಇದ್ದರು.