ಗೂಂಡಾಗಳ ಕೈಯಲ್ಲಿ ರಾಜ್ಯದ ಕಾಂಗ್ರೆಸ್ ಸರ್ಕಾರ
ತಾಳಿಕೋಟೆ:ಮೇ.18: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಕಾನೂನು ಸುವ್ಯವಸ್ಥೆ ಎಂಬುದು ಸಂಪೂರ್ಣ ಹದಗೆಟ್ಟು ಹೋಗಿದೆ ರಾಜ್ಯದಲ್ಲಿ ಅರಾಜಕತೆ ಸೃಷ್ಟಿಯಾಗಿದೆ ಗೂಂಡಾಗಳು, ಜಿಹಾದಿಗಳು ಬೀದಿಗಿಳಿದು ಕಲ್ಲು ತೂರುತ್ತಿದ್ದಾರೆ. ಹೆಣ್ಣುಮಕ್ಕಳ ಮೇಲೆ ವಿಕೃತಿ ತೋರುವದರೊಂದಿಗೆ ಹತ್ಯಗೈಯುವಂತಹ ಕಾರ್ಯಕ್ಕೆ ಮುಂದಾಗುತ್ತಿದ್ದರೂ ಗ್ರಹ ಮಂತ್ರಿಗಳು ಕ್ಷುಲಕ ರಾಜಕಾರಕ್ಕಾಗಿ ಅಚಾತೂರ್ಯದ ಘಟನೆ ಎಂಬ ಹೇಳಿಕೆ ಗೂಂಡಾಗಳ ಕೈಯಲ್ಲಿ ರಾಜ್ಯ ಸರ್ಕಾರ ಸಿಲುಕಿ ನಲುಗುತ್ತಿರುವದು ಎತ್ತಿ ತೋರಿಸುತ್ತಿದೆ ಎಂದು ಭಾರತೀಯ ಜನತಾ ಪಕ್ಷದ ಜಿಲ್ಲಾ ಅಧ್ಯಕ್ಷ ಆರ್.ಎಸ್.ಪಾಟೀಲ(ಕೂಚಬಾಳ) ಅವರು ಹೇಳಿದರು.
ಶುಕ್ರವಾರರಂದು ಪಟ್ಟಣದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡುತ್ತಿದ್ದ ಅವರು ರಾಜ್ಯದಲ್ಲಿ ದಲಿತರ ಮೇಲೆ ದೌರ್ಜನ್ಯಗಳು, ಪ್ರೀತಿ ನಿರಾಕರಿಸುವ ಹಿಂದೂ ಹೆಣ್ಣು ಮಕ್ಕಳ ಮೇಲೆ ಜೀಹಾದಿಗಳು ಅಟ್ಟ ಹಾಸ ಮೇರೆಯುವದರೊಂದಿಗೆ ಹಾಡು ಹಗಲೇ ಹತ್ಯ ಮಾಡುವಂತಹ ಕೃತ್ಯಕ್ಕೆ ಮುಂದಾಗುತ್ತಿದ್ದಾರೆ ಹುಬ್ಬಳ್ಳಿಯ ನೇಹಾ ಹತ್ಯ ಪ್ರಕರ್ಣ ಮಾಸುವ ಮುನ್ನವೇ ಅದೇ ಬಡಾವಣೆಯ ಅಂಜಲಿ ಎಂಬ ಹೆಣ್ಣು ಮಗಳನ್ನು ಹಾಡು ಹಗಲೇ ಹತ್ಯ ಮಾಡಲಾಗಿದೆ ಈ ಹತ್ಯ ನಡೆಯುವ ಮುಂಚೆ ಆ ಯುವಕ ಯುವತಿಯ ಮನೆಗೆ ಬಂದು ದಮ್ಕಿ ಹಾಕಿ ಹೋಗಿದ್ದು ಪೊಲೀಸ್‍ರಿಗೆ ಮಾಹಿತಿ ಮುಟ್ಟಿದೆ ಆದರೂ ಕೂಡಾ ರಾಜ್ಯ ಸರ್ಕಾರದ ಕಪಿ ಮುಷ್ಠಿಯಲ್ಲಿ ಸಿಲುಕಿ ನಲಗುತ್ತಿರುವ ಪೊಲೀಸ್ ಇಲಾಖೆ ಅಪರಾದಿಗೆ ಕರೆಯಿಸಿ ಕಠಿಣ ಏಚ್ಚರಿಕೆಯನ್ನಾದರೂ ನೀಡಬೇಕಾಗಿತ್ತು ರಾಜಕೀಯ ಒತ್ತಡಗಳಿಗೆ ಮಣಿದು ಸುಮ್ಮನೆ ಕುಳಿತಿದ್ದರ ಪರಿಣಾಮ ಹೆಣ್ಣು ಮಗಳು ನಡು ಬೀದಿಯಲ್ಲಿ ಬಲಿಯಾಗಿದ್ದಾಳೆ ಇದಕ್ಕೆ ನೇರವಾಗಿ ರಾಜ್ಯ ಸರ್ಕಾರವೇ ಕಾರಣವಾಗಿದ್ದು ಕೂಡಲೇ ಗ್ರಹ ಮಂತ್ರಿಗಳು ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದ ಅಧ್ಯಕ್ಷ ಕೂಚಬಾಳ ಅವರು ಹಗಲು ಹೊತ್ತಿನಲ್ಲಿ ಕಳ್ಳತನ, ಸುಲಿಗೆಗಳು ರಾಜ್ಯದಲ್ಲಿ ಹೆಚ್ಚುತ್ತಾ ಸಾಗಿವೆ ದಿ.16 ರಂದು ತಾಳಿಕೋಟೆ ಪಟ್ಟಣದಲ್ಲಿ ಮದ್ಯಾಹ್ನದ ವೇಳೆ ಬ್ಯಾಂಕಿನಿಂದ ಹಣ ಡ್ರಾ ಮಾಡಿಕೊಂಡು ಮನೆಗೆ ಹೋಗುತ್ತಿದ್ದ ವ್ಯಕ್ತಿಯ ಕೈಯಲ್ಲಿಯ 2 ಲಕ್ಷ 20 ಸಾವಿರ ರೂ. ಹಣವನ್ನು ಕಿತ್ತುಕೊಂಡು ಇಬ್ಬರು ಖದಿಮರು ಪರಾರಿಯಾಗಿದ್ದಾರೆ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹಾಳಾಗಿರುವದಕ್ಕೆ ಇದಕ್ಕಿಂತ ಬೇರೆ ಸಾಕ್ಷೀ ಬೇಕೆ? ಎಂದು ಪ್ರಶ್ನೀಸಿದ ಅವರು ಕಾಂಗ್ರೇಸ್ ಸರ್ಕಾರ ಸಂಸ್ಕøತಿಯಾದ ಗೂಂಡಾ ರಾಜ್ಯದ ಕನಸು ನನಸಾಗುವತ್ತ ಸಾಗಿದೆ ಎಂಬುದು ಭಾಸವಾಗುತ್ತಾ ಸಾಗಿದೆ ಕನಕಪುರದ ಬಂಡೆ ಎಂದು ಕರೆಯಿಸಿಕೊಳ್ಳುವ ಡಿ.ಕೆ.ಶಿವಕುಮಾರ ಅವರು ಜಿಹಾದಿ ಸಂಸ್ಕೃತಿ ಇರುವವರನ್ನು ನಮ್ಮ ಅಣ್ಣತಮ್ಮಂದಿರರು ಎಂದು ಹೇಳಿಕೊಂಡಿರುವದು ಕಾನೂನು ಸುವ್ಯವಸ್ಥೆ ಹಾಳಾಗಲು ನೇರ ಕಾರಣೀಕರ್ತರು ಎಂದರೆ ತಪ್ಪಾಗುವದಿಲ್ಲಾವೆಂದು ಹೇಳಿದ ಅಧ್ಯಕ್ಷ ಕೂಚಬಾಳ ಅವರು ರಾಜ್ಯದಲ್ಲಿ ಬೀಕರ ಬರಗಾಲ ಆವರಿಸಿದೆ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ ರೈತರ ನೆರವಿಗೆ ಬರಬೇಕಿದ್ದ ರಾಜ್ಯ ಸರ್ಕಾರ ಕಣ್ಣು, ಕಿವಿ ಇಲ್ಲದ ಕಿವುಡ ಸರ್ಕಾರವಾಗಿ ವರ್ತಿಸುತ್ತಿದೆ ಬರ ಪರಿಹಾರ ಕೊಡುವಲ್ಲಿ ಕೇಂದ್ರ ಸರ್ಕಾರ ಮೀನ ಮೇಷ ಎಣಿಸುತ್ತಿದೆ ಎಂದು ರೋಷಭರೀತವಾಗಿ ಮಾತನಾಡುತ್ತಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಚುನಾವಣೆ ಸಂದರ್ಬದಲ್ಲಿಯೇ ಪ್ರಧಾನಿ ಮೋದಿಜಿ ಅವರು ಚುನಾವಣಾ ಆಯೋಗದಿಂದ ಅನುಮತಿ ಪಡೆದುಕೊಂಡು 3 ಸಾವಿರದಾ 800 ಕೋಟಿ ರೂ. ಹಣ ಬಿಡುಗಡೆ ಮಾಡಿದ್ದಾರೆ ಆದರೆ ಬರ ಪರಿಹಾರದ ಹಣ ಸಂಪೂರ್ಣವಾಗಿ ಯಾವ ರೈತರಿಗೂ ಮುಟ್ಟಿಲ್ಲಾ ಹಿಂದೆ ಬಿಜೆಪಿ ಸರ್ಕಾರ ಇದ್ದಾಗ ಯಡಿಯೂರಪ್ಪನವರು ಮುಖ್ಯಮಂತ್ರಿ ಇದ್ದಾಗ ಕೇಂದ್ರ ಸರ್ಕಾರ ರಾಜ್ಯದ ರೈತರಿಗೆ ಬರ ಪರಿಹಾರವೆಂದು 13600 ಕೋಟಿ ರೂ. ಹಣ ಬಿಡುಗಡೆ ಮಾಡಿದಾಗ ಯಡಿಯೂರಪ್ಪನವರು ಕೂಡಾ 13600 ಕೋಟಿ ರೂ. ಕೂಡಿಸಿ 27200 ಕೋಟಿ ರೂ.ಯನ್ನು ಪ್ರತಿ ಹೆಕ್ಟರ್‍ಗೆ ಒದಗಿಸಿ ರೈತರ ನೆರವಿಗೆ ಬಂದಿದ್ದಾರೆ ಆದರೆ ಈಗೀನ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕೇಂದ್ರ ಸರ್ಕಾರ ನೀಡಿದ ಪ್ರತಿ ಹೆಕ್ಟರ್‍ಗೆ 17 ಸಾವಿರ ರೂ. ಹಣ ಜೊತೆಗೆ ರಾಜ್ಯ ಸರ್ಕಾರದ ಹಣ ಸೇರಿಸಿ ಕೊಡುವ ಬದಲು ಮೊದಲು 2 ಸಾವಿರ ರೂ. ಮೊದಲು ನೀಡಿದ್ದೇವೆಂದು 2 ಸಾವಿರ ಕಟ್ ಮಾಡಿ 15 ಸಾವಿರ ರೂ. ರೈತರ ಅಕೌಂಟಿಗೆ ಹಾಕುತ್ತಿದ್ದಾರೆ ಇದು ಯಾವ ನ್ಯಾಯ ಕೇಂದ್ರ ಸರ್ಕಾರದ ಜೊತೆಗೆ ರಾಜ್ಯ ಸರ್ಕಾರ ಹಣ ಸೇರಿಸಿ ಕೊಡುವದು ಮಾನವೀಯತೆ ಮತ್ತು ರೈತರ ನೆರವಿಗೆ ಬರುವಂತಹದ್ದಾಗಿದೆ ಬರ ಪೀಡಿತ ತಾಲೂಕುಗಳು ಎಂದು ರಾಜ್ಯ ಸರ್ಕಾರ ಘೋಷಣೆ ಮಾಡಿದೆ ಈಗ ಸಮಿಕ್ಷೆಯಲ್ಲಿ ಪಾಳು ಭೂಮಿ ಎಂದು ನಮೂದಿಸಿ ಪರಿಹಾರ ರೈತರಿಗೆ ಸಿಗದ ಹಾಗೆ ಒಂದು ಕಡೆ ನೋಡಿಕೊಳ್ಳುತ್ತಿದ್ದಾರೆ ಇದರಿಂದ ಗೊತ್ತಾಗುತ್ತದೆ ಇವರ ಗ್ಯಾರಂಟಿಗೆ ಕೇಂದ್ರ ನೀಡಿದ ಬರ ಪರಿಹಾರವು ಸಾಲುತ್ತಿಲ್ಲಾ ರಾಜ್ಯ ಸರ್ಕಾರದ ಖಜಾನೆ ಸಂಪೂರ್ಣ ಖಾಲಿಯಾಗಿದೆ ಸಂಪೂರ್ಣ ದಿವಾಳಿಯಾಗಿದೆ ಎಂದು ಕಾರವಾಗಿ ಸರ್ಕಾರದ ಮೇಲೆ ಚಾಟಿ ಬೀಸಿದರು.
ನ್ಯಾಷನಲ್ ಕ್ರೈಂ ಬೀರೋದವರು ವರಧಿಯನ್ನು ನೀಡಿದ್ದಾರೆ ಕಳೆದ 11 ತಿಂಗಳಲ್ಲಿ ಶೇ.70 ಕ್ಕಿಂತಲೂ ಹೆಚ್ಚಿಗೆ ಅಪರಾದ ಪ್ರಕರ್ಣಗಳು ದಾಖಲಾಗುತ್ತಿವೆ ಎಂದು ವರಧಿಯನ್ನು ನೀಡಿದ್ದಾರೆ ಹೀಗಾಗಿ ಕರ್ನಾಟಕ ಈಗ ಗುಂಡಾಗಳ ರಾಜ್ಯ, ಹತ್ಯೆಗಳ ರಾಜ್ಯವಾಗುತ್ತಿದೆ ಇದಕ್ಕೆ ಕಾರಣ ಸರ್ಕಾರವನ್ನು ಆಳುವವರೇ ಗುಂಡಾಗಳಾಗಿದ್ದಾರೆ ರಾಜ್ಯದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರ ಹೇಳಿಕೆ ನೋಡಿದರೆ ಅವರ ವರ್ತನೆ ನೋಡಿದರೆ ಎಂತವರಿಗೂ ತಿಳಿದು ಬರುತ್ತದೆ ಸುಂದರ, ಶಾಂತಿಗೆ ಹೆಸರಾಗಿದ್ದ ಕರ್ನಾಟಕವು ಇಂದು ಪಾಪಿಷ್ಠರ ಕೈಯಲ್ಲಿ ಸಿಲುಕಿಕೊಂಡಿದೆ ಎಂದು ಕೂಚಬಾಳ ಅವರು ಆರೋಪಿಸಿದರು.