‘ದಕ್ಷಿಣ ಕಾಶಿ’ ಕಾಳಗಿಯಲ್ಲಿ ಜಗದ್ಗುರು ರೇಣುಕಾಚಾರ್ಯರ ಜಯಂತೋತ್ಸವ ಸಂಭ್ರಮ
ಕಾಳಗಿ.ಮೇ.18 : ವಿಶ್ವ ಬಂಧುತ್ವದ ಮಾನವೀಯ ವೈಶಾಲ್ಯಗಳನ್ನು ಸಾರಿದ ವೀರಶೈವ ಧರ್ಮದ ಸಂಸ್ಥಾಪನಾಚಾರ್ಯ ಜಗದ್ಗುರು ರೇಣುಕಾಚಾರ್ಯರ ಜೀವನ, ತತ್ವ ಸಿದ್ಧಾಂತಗಳು ಸುಖ ಶಾಂತಿ ಸಮೃದ್ಧಿಯ ಬಾಳಿಗೆ ಮೂಲ ಸೆಲೆಯಾಗಿವೆ ಎಂದು ರಂಭಾಪುರಿ ಜಗದ್ಗುರು ಪ್ರಸನ್ನ ರೇಣುಕ ವೀರಸೋಮೇಶ್ವರ ಶಿವಾಚಾರ್ಯ ಭಗವತ್ಪಾದರು ಹೇಳಿದರು.
ಪಟ್ಟಣದ ನೀಲಕಂಠ ಕಾಳೇಶ್ವರ ಕಲ್ಯಾಣ ಮಂಟಪದಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯರ ಜಯಂತಿ ಯುಗಮಾನೋತ್ಸವ ತಾಲೂಕು ಸೇವಾ ಸಮಿತಿ ವತಿಯಿಂದ ಹಮ್ಮಿಕೊಂಡ ಜಗದ್ಗುರು ಶ್ರೀ ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ ಹಾಗೂ ಧರ್ಮ ಜಾಗೃತಿ ಸಮಾವೇಶ ಪಾವನ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಕರ್ಮವನ್ನು ಕಳೆದು ಧರ್ಮವನ್ನು ಬಿತ್ತಿ ಬದುಕನ್ನು ಬಂಗಾರಗೊಳಿಸಿದ ಕೀರ್ತಿ ಜಗದ್ಗುರು ರೇಣುಕಾಚಾರ್ಯರದು. ಜಾತಿ ಮತ ಪಂಥಗಳ ಗಡಿ ಮೀರಿ ತನು ಮನ ಶುದ್ಧಿಗೆ ಆದರ್ಶ ಮೌಲ್ಯಗಳ ಪರಿಪಾಲನೆ ಮಹತ್ವವನ್ನು ಸಾರಿದ ಶ್ರೇಯಸ್ಸು ಅವರದು ಎಂದರು.
ಕಾಯಕ ಮತ್ತು ದಾಸೋಹದ ಮೂಲಕ ಜೀವನದ ಶ್ರೇಯಸ್ಸಿಗೆ ದಾರಿ ತೋರಿದ ಮೂಲ ಪುರುಷರು ರೇಣುಕಾಚಾರ್ಯರು. ಅಂಗ ಅವಗುಣಗಳನ್ನು ದೂರ ಮಾಡಿ, ಲಿಂಗಾಂಗ ಸಾಮರಸ್ಯ ಉಂಟು ಮಾಡಿದ ಕೀರ್ತಿ ಇವರದು. ಅಹಿಂಸಾ ಸತ್ಯ, ಅಸ್ತೇಯ ಬ್ರಹ್ಮಚರ್ಯ, ದಯಾ, ಕ್ಷಮಾ, ದಾನ, ಪೂಜಾ, ಜಪ, ಧ್ಯಾನ ಎಂಬ ಧರ್ಮದ ದಶಸೂತ್ರಗಳನ್ನು ಬೋಧಿಸಿ ಜೀವನದ ಉನ್ನತಿಗೆ ಬೆಳಕು ತೋರಿದವರು.
ಸತ್ಯ ಮತ್ತು ಶಾಂತಿಯ ತಳಹದಿಯ ಮೇಲೆ ಸುಸಂಸ್ಕøತ ಸಮಾಜ ನಿರ್ಮಿಸಲು ನಿರಂತರ ಶ್ರಮಿಸಿದವರು ಎಂದು ತಿಳಿಸಿದರು. ಶಿವಾದ್ವೆತ ಜ್ಞಾನ ಸಂಪತ್ತನ್ನು ಕರುಣಿಸಿದ ಕಾರುಣ್ಯ ಶಕ್ತಿ ಇವರದಾಗಿದೆ. ಶಿವನ ಸದ್ಯೋಜಾತ ಮುಖದಿಂದ ಕೆuಟಿಜeಜಿiಟಿeಜನಲುಪಾಕ ಶ್ರೀ ಸೋಮೇಶ್ವರ ಮಹಾಲಿಂಗದಿಂದ ಆವಿರ್ಭವಿಸಿದ ಮಹಾಮುನಿ ಅಗಸ್ತರಿಗೆ ಧರ್ಮ ದೀಕ್ಷೆ ಮತ್ತು ಷಟಸ್ಥಲ ಶಿವಸಿದ್ಧಾಂತವನ್ನು ಬೋಧಿಸಿ ಹರಸಿದ ಮಹಾನ್ ಶಕ್ತಿ ಇವರಾಗಿದ್ದಾರೆ ಎಂದರು.
ಇದಕ್ಕೂ ಮೊದಲು ಪಟ್ಟಣದ ರಾಮನಗರ ಬಸವೇಶ್ವರ ವೃತ್ತದಿಂದ ನೀಲಕಂಠ ಕಾಳೇಶ್ವರ ದೇವಸ್ಥಾನದವರೆಗೆ ಎಂಟು ಅಡಿ ಎತ್ತರದ ರೇಣುಕಾಚಾರ್ಯರ ಕಂಚಿನ ಮೂರ್ತಿ ಹಾಗೂ ರಂಭಾಪುರಿ ಜಗದ್ಗುರು ಅಡ್ಡಪಲ್ಲಕ್ಕಿ ಉತ್ಸವವು ಅದ್ಧೂರಿಯಾಗಿ ಜರುಗಿತು. ಮೆರವಣಿಗೆಯಲ್ಲಿ ಮುತೈದಿಯರ ಪೂರ್ಣಕುಂಭ, ಪುರವಂತರ ಕುಣಿತ, ಗರುಡ ಗೊಂಬೆ ಕುಣಿತ, ಭಜನೆ, ಸೇರಿದಂತೆ ವಿವಿಧ ಕಲಾ ತಂಡಗಳ ಅಡ್ಡ ಪಲ್ಲಕ್ಕಿ ಉತ್ಸವಕ್ಕೆ ಮೆರಗು ತಂದವು.
ಹೊನ್ನಕಿರಣಗಿ ಪೂಜ್ಯ ಚಂದ್ರಗುಂಡ ಶಿವಾಚಾರ್ಯರು, ಶಾಸಕ ಡಾ. ಅವಿನಾಶ್ ಜಾಧವ್ ಮಾತನಾಡಿದರು.
ಭರತನೂರ ಪೂಜ್ಯ ಚಿಕ್ಕಗುರುನಂಜೇಶ್ವರ ಮಹಾಸ್ವಾಮಿಗಳು, ಮಂಗಲಗಿ ಪೂಜ್ಯ ಶಾಂತಸೋಮನಾಥ ಶಿವಾಚಾರ್ಯರು, ಕೋಡ್ಲಿ ಪೂಜ್ಯ ಬಸವಲಿಂಗ ಶಿವಾಚಾರ್ಯರು, ಹೊಸ್ಸಳ್ಳಿ ಪೂಜ್ಯ ಸಿದ್ಧಲಿಂಗ ಶಿವಾಚಾರ್ಯರು, ರಟಕಲ್ ಪೂಜ್ಯ ಸಿದ್ಧರಾಮ ಮಹಾಸ್ವಾಮಿಗಳು, ಬಣಮಗಿ ಪೂಜ್ಯ ರಾಚೋಟೇಶ್ಚರ ಶಿವಾಚಾರ್ಯರು, ಡೊಣ್ಣೂರ ಪೂಜ್ಯ ಪ್ರಶಾಂತ ದೇವರು, ಕಾಳಗಿ ಹಿರೇಮಠ ನೀಲಕಂಠ ಮರಿದೇವರು, ಚಂದ್ರಮೌಳಿ ಮಹಾರಾಜ, ಶಿವಶರಣಪ್ಪ ಸೇರಿ, ಜಯಂತೋತ್ಸವ ಸಮಿತಿ ಗೌರವಾಧ್ಯಕ್ಷ ಶಿವರಾಜ ಪಾಟೀಲ ಗೊಣಗಿ, ಸ್ವಾಗತ ಸಮಿತಿ ಅಧ್ಯಕ್ಷ ನಾಗರಾಜ ಚಿಕ್ಕಮಠ, ಪ್ರಚಾರ ಸಮಿತಿ ಅಧ್ಯಕ್ಷ ಮಲ್ಲಿನಾಥ ಪಾಟೀಲ, ಜಂಗಮ ಸಮಾಜ ತಾಲೂಕಾಧ್ಯಕ್ಷ ಶರಣು ಸಾಲಿಮಠ, ಶಿವಕುಮಾರ್ ಕಮಲಾಪೂರ, ರಾಜಶೇಖರ ಕುಡ್ಡಳ್ಳಿ, ಮಾಜಿ ಜಿಪಂ ಸದಸ್ಯ ರಾಜೇಶ್ ಗುತ್ತೇದಾರ, ಮಲ್ಲಿನಾಥ ಕೊಲಕುಂದಿ, ನಿಂಬೆಣ್ಣಪ್ಪ ಮಂಗಲಗಿ, ರಾಮಶ್ಚಂದ್ರ ಜಾಧವ್, ಶರಣಗೌಡ ಪೆÇೀಲಿಸ್ ಪಾಟೀಲ, ಶಿವಶರಣಪ್ಪ ಕಮಲಾಪೂರ, ಜಗದೀಶ್ ಮಾಲಿಪಾಟೀಲ, ವಿಶ್ವನಾಥ ವನಮಾಲಿ, ಸಂತೋಷ ಪಾಟೀಲ ಮಂಗಲಗಿ, ವಿಜಯಕುಮಾರ್ ಚೆಂಗಟಿ, ರೇವಣಸಿದ್ಧ ಬಡಾ, ಶಶಿಕಲಾ ಟೆಂಗಳಿ, ಶರಣು ಮಜ್ಜಿಗೆ, ರಾಜಶೇಖರ ಗುಡದ, ರಾಘವೇಂದ್ರ ಗುತ್ತೇದಾರ, ಶೇಖರ ಮಾನಶೆಟ್ಟಿ, ಅಮೃತ ಪಾಟೀಲ, ಶಿವಕಿರಣ ಪ್ಯಾಟಿಮಠ, ರೇವಣಸಿದ್ಧ ಹರಕಂಚಿ, ರವಿ ಬಿರೆದಾರ, ಕಾಳಶೆಟ್ಟಿ ಪಡಶೆಟ್ಟಿ, ಕಾಳಪ್ಪ ಕದ್ದರಗಿ, ಶರಣು ಬಿರೆದಾರ, ಸೇರಿದಂತೆ ತಾಲ್ಲೂಕಿನ ವಿವಿಧ ಹಳ್ಳಿಗಳಿಂದ ನೂರಾರು ಜನರು ಹಾಜರಿದ್ದರು.
ರಟಕಲ್ (ರೇವಗ್ಗಿ) ಶ್ರೀರೇವಣಸಿದ್ದೇಶ್ವರರ ದೇವಸ್ಥಾನದ ಆವರಣದಲ್ಲಿ ಸುಂದರವಾದ “ವೈದಿಕ ಜ್ಯೋತಿಷ್ಯ ಪಾಠ ಶಾಲೆ ನಿರ್ಮಾಣದ ಮಾಡುವ ಸಂಕಲ್ಪ ಈ ಭಾಗದ ಸದ್ಭಕ್ತರದ್ದಾಗಿದೆ.
ಕಲಬುರಗಿ ಜಿಲ್ಲೆಗೆ ಡಾ.ಉಮೇಶ ಜಾಧವ ಎರಡನೆ ಬಾರಿಗೆ ಸಂಸದರಾಗಿ ಆಯ್ಕೆಯಾಗಲಿದ್ದು, ಜನಹಿತ ಮತ್ತು ಧರ್ಮ ರಕ್ಷಣೆಯ ಮಹತ್ತರವಾದ ಜವಾಬ್ದಾರಿ ಅವರ ಮೇಲಿದೆ.
ಶಾಸಕ-ಸಂಸದರು ಸೇರಿಕೊಂಡು ವೈದಿಕ ಪಾಠ ಶಾಲೆಯ ನಿರ್ಮಾಣಕ್ಕೆ ಪಣತೊಡಬೇಕು.
-ಜಗದ್ಗುರು ರಂಭಾಪುರಿ ಶ್ರೀ