ಕೆನರಾ ಬ್ಯಾಂಕ್‍ನ ಖಾತೆದಾರರ ಖಾತೆ ಹ್ಯಾಕ್, ಗ್ರಾಹಕರೇ ಹುಷಾರ್
ಸಂಜೆವಾಣಿ ವಾರ್ತೆ
ಸಂಡೂರು:ಮೇ: 18:  ಕೆನರಾಬ್ಯಾಂಕ್‍ನ ಖಾತೆದಾರ ಇಬ್ರಾಹಿಂಸಾಬ್ ರವರು ಸಂಡೂರಿನ ಕೆನರಾಬ್ಯಾಂಕಿನಲ್ಲಿ ಖಾತೆದಾರರಾಗಿದ್ದು ಇಬ್ರಾಹಿಂಸಾಬ್ ರವರ 2 ಲಕ್ಷ 32 ಸಾವಿರ 500 ರೂಪಾಯಿಗಳನ್ನು ದಿನಾಂಕ: 23.04.2024 ರಂದು ಮಧ್ಯರಾತ್ರಿ 11 ಗಂಟೆಗೆ ನನ್ನ ಖಾತೆಯಿಂದ ಹರಿಯಾಣ , ಬಾಂಬೆ , ಹಿಂದೂಸ್ತಾನ್ ಬ್ಯಾಂಕ್‍ಗೆ ಹ್ಯಾಕ್ ಅಗಿದೆ. ನನ್ನದೊಂದೆ ಪ್ರಕರಣವಲ್ಲ ಬೇರೆಯವರ ಖಾತೆಯಿಂದ 1300 ಹ್ಯಾಕ್ ಅಗಿದೆ, ಇಂತಹ 6-7 ಪ್ರಕರಣಗಳಾಗಿವೆ. ಇಂತಹ ಪ್ರಕರಣಗಳು ಬೇರೆ ಯಾವ ಬ್ಯಾಂಕಿನಲ್ಲಿ ನಡೆದಿಲ್ಲ. ಸಂಡೂರಿನ ಕೆನರಾ ಬ್ಯಾಂಕಿನಲ್ಲಿ ಮಾತ್ರ ನಡೆದಿದೆ. 24ನೇ ತಾರೀಕು ಮತ್ತು 2ನೇ ತಾರೀಕು ಬೆಂಗಳೂರಿನ ಸೈಬರ್ ಜೋನ್‍ಗೆ ದೂರು ದಾಖಲಿಸಿದ್ದು ನಮಗೂ ಪ್ರಕರಣಕ್ಕೂ ಯಾವುದೇ ಸಂಬಂಧವಿಲ್ಲವೆಂದು ಬ್ಯಾಂಕ್ ವ್ಯವಸ್ಥಾಪಕರು ಖಡಾ ಖಂಡಿತವಾಗಿ ಹೇಳಿದ್ದಾರೆ.
ಮಗಳ ಮದುವೆಗೆ ಕೂಡಿಟ್ಟ ಹಣ: ಮಗಳ ಮದುವೆಗೆ ಮಕ್ಕಳ ಶಿಕ್ಷಣಕ್ಕಾಗಿ ಹಣವನ್ನು ಕೂಡಿಟ್ಟಿದ್ದೆ ನಮ್ಮಂತಹ ಬಡವರು ಬ್ಯಾಂಕಿನಲ್ಲಿ ಹಣ ಇಡುವುದೇ ತಪ್ಪಾಗಿದೆ. ಮನೆಯಲ್ಲಿಯೇ ಒಂದು ಗಡಗಿಯಲ್ಲೇ ಹಣವನ್ನು ಕೂಡಿಟ್ಟಿದ್ದರೆ ಅಗುತ್ತಿತ್ತು. ಬ್ಯಾಂಕಿನಲ್ಲಿದ್ದರೆ ಸೇಪ್ ಇರುತ್ತಿತ್ತು ಎನ್ನುವ ಭಾವನೆಯಿಂದ ಹಣವನ್ನು ಬ್ಯಾಂಕಿನಲ್ಲಿಟ್ಟಿದ್ದೆ. ನಾನು ಯಾರಿಗೂ ಆಧಾರ ಕಾರ್ಡ ಅಗಲಿ, ಪಾಸ್ ವರ್ಡ ಅಗಲಿ ಕೊಟ್ಟಿರಲಿಲ್ಲ, ಯಾವ ರೀತಿ ಹ್ಯಾಕ್ ಆಗಿದೆ ಶಿವನೇ ಬಲ್ಲ, ಬ್ಯಾಂಕ್ ಮ್ಯಾನೇಜರ್‍ಗೆ ಹಾಗೂ ಬೆಂಗಳೂರಿನ ಸೈಬರ್ ಜೋನ್‍ಗೆ ಎರಡು ಬಾರಿ ದೂರುನ್ನು ನೀಡಿ ನ್ಯಾಯ ಒದಗಿಸಲು ಹಾಗೂ ಸೂಕ್ತ ಕ್ರಮ ಕೈಗೊಳ್ಳಲು ಮನವಿ ಮಾಡಿದ್ದೇನೆ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಬ್ಯಾಂಕಿನಲ್ಲಿ ದುಡ್ಡಿಟ್ಟರೆ ಯಾವ ರೀತಿ ಮೋಸ ಅಗುತ್ತದೆ ಎನ್ನುವುದಕ್ಕೆ ಇದು ಒಂದು ಉದಾಹರಣೆಯಾಗಿದೆ. ಎನ್ನುವುದು ಸಾರ್ವಜನಿಕರ ಅಭಿಪ್ರಾಯ, ಬೆಂಗಳೂರಿನ ಸೈಬರ್ ಜೋನ್‍ಗೆ ಎರಡು ಬಾರಿ ದೂರು ದಾಖಲಿಸಿದರೆ ಅವರು ನನಗೆ ಕಾಪಿ ಕೊಟ್ಟಿರುತ್ತಾರೆ  ಬೇಲಿಯೇ ಎದ್ದು ಹೊಲ ಮೇಯಿದೊಡೆ ಏನು ಪ್ರಯೋಜನ? ಸಣ್ಣ ಮಗಳ ಡಿಪೋಮಾ ಓದುತ್ತಿದ್ದಾಳೆ, ಅವಳ ಮದುವೆಗೆ ಹಣವನ್ನು ಇಟ್ಟಿದ್ದೇ ಎಂದು ಬಹಳ ನೋವಿನಿಂದ ಇಬ್ರಾಹಿಂ ಸಾಹೇಬ್ ರವರು ತಮ್ಮ ಮನದಾಳದ ಮಾತುಗಳನ್ನಾಡಿದರು. ಈ ಸಂದರ್ಭದಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಕುಮಾರಸ್ವಾಮಿ ವಕೀಲರು, ಎಸ್.ಖಾದರ್ ಭಾಷಾ, ಹುಲುಗಪ್ಪ ಉಪಸ್ಥಿತರಿದ್ದರು.
One attachment • Scanned by Gmail