ಪಪ್ಪಾಯ ಬೆಳೆಗೆ ಅಂಟುವ ವೈರಸ್ ನಿರ್ವಹಣೆಗೆ ವಿಜ್ಞಾನಿಗಳ ಸಲಹೆ
ಆಳಂದ: ಮೇ.18:ತೋಟಗಾರಿಕೆ ಹಲವು ವಾಣಿಜ್ಯ ಬೆಳೆಗಳಲ್ಲಿ ಸ್ಥಾನ ಪಡೆದ ಪಪ್ಪಾಯ ಬೆಳೆಗಾರರಿಗೆ ಬೆಳೆಯ ಉತ್ಪಾದನೆಯಲ್ಲಿ ಸಿಹಿ ಜೊತೆಗೆ ಸಾಕಷ್ಟು ಪ್ರಮಾಣದಲ್ಲಿ ಕಹಿ ಅನುಭವಿಸತೊಡಗಿದ್ದಾರೆ. ಮಹಾಮಾರಿ ವೈರಸ್ ಅಂಟಿದರೆ ಬೆಳೆಯ ಉಳಿಸಿಕೊಳ್ಳುವುದು ಬಲು ಕಷ್ಟವಾಗುತ್ತಿದೆ. ಈ ನಡುವೆ ಬೆಳೆಗೆ ಅಂಟಿದ ವೈರಸ್ ನಿವಾರಣೆ ಜೊತೆಗೆ ಬೆಳೆಯ ನಿರ್ವಹಣೆಗೆ ವಿಜ್ಞಾನಿಗಳು ಸಲಹೆ ಸೂಚನೆಗಳನ್ನು ನೀಡಿದ್ದಾರೆ.
ಪಪ್ಪಾಯ ಮಹತ್ವ:
ವಿಟಾಮಿನ್ ಎ ಮತ್ತು ಸಿ ಜೀವಸತ್ವಗಳನ್ನು ಹೊಂದಿದ ಪಪ್ಪಾಯಿ ಹಣ್ಣು ಆರೋಗ್ಯದ ದೃಷ್ಟಿಯಿಂದ ದೇಹದ ಪೋಷಣೆಗೆ ಅತಿಮುಖ್ಯ. ಔಷಧೀಯ ತಯಾರಿಕಾ ಕ್ಷೇತ್ರಗಳಲ್ಲಿ ಪಪೇನನ್ನು ಯತೇಚ್ಚವಾಗಿ ಬಳಸಲಾಗುತ್ತಿದೆ. ನೀರು ಬಸಿದು ಹೋಗುವ ಕಪ್ಪು ಮಣ್ಣು ಅತೀ ಸೂಕ್ತವಾಗಿದೆ ಎನ್ನುತ್ತಿದ್ದಾರೆ ಬೇಸಾಯ ತಜ್ಞರು.
ಕಲ್ಯಾಣ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಪಪ್ಪಾಯಿ ಬೆಳೆಯನ್ನು ವಾಣಿಜ್ಯ ದೃಷ್ಟಿಯಿಂದ ಬಹಳ ಉಪಯೋಗವಾಗಿದೆ. ಇದನ್ನೆ ಸಾಕಷ್ಟು ವ್ಯಚ್ಚಮಾಡಿ ಬೆಳೆ ಬೆಳೆಯಲು ಮುಂದಾದ ಅನೇಕರಲ್ಲಿ ಆದಾಯ ತಂದುಕೊಂಡರೆ ಇನ್ನೂ ಕೆಲವರು ನಷ್ಟ ಅನುಭವಿಸಿ ಸಾಲದ ಸುಳಿಗೆ ಸಿಲ್ಲಕ್ಕಿದ್ದು ನಿದರ್ಶಗಳು ಎದುರುಗಿವೆ.
ಈ ನಡುವೆ ಬೆಳೆಯ ನಾಟಿಯಿಂದ ಹಿಡಿದು ಫಲ ನೀಡುವ ತನಕ್ಕೂ ಸಾಕಷ್ಟು ಸಮಸ್ಯೆಗಳ ಎದುರಾಗುತ್ತಿವೆ. ಇದನ್ನು ತಾಂತ್ರಿಕತೆ ಮತ್ತು ವೈಜ್ಞಾನಿಕವಾಗಿ ನಿವಾರಿಸುವ ಮೂಲಕ ಬೆಳೆಯನ್ನೇ ಕೈ ಸೇರುವಂತೆ ಮಾಡಲು ಸಾಧ್ಯವಿದೆ ಎಂದು ಕಲಬುರಗಿ ಕೃಷಿ ಸಂಶೋಧನ ಕೇಂದ್ರದ ವಿಜ್ಞಾನಿಗಳ ತಂಡವು ಬೆಳೆಗಾರರಿಗೆ ಸಲಹೆ ನೀಡಿದೆ.
ವೈರಸ್ ನಿವಾರಣೆ ಕ್ರಮ: ನೆರೆಯ ಸುಲ್ತಾನಪೂರ ರೈತ ಶಾಂತಕುಮಾರ ವಿ. ಪಾಟೀಲರ ಪಪ್ಪಾಯ ತೋಟಕ್ಕೆ ಹಾಗೂ ತಾವರಗೇರೆ, ಹಾಲಸುಲ್ತಾನಪೂರ, ಕಡಗಂಚಿ ಮತ್ತು ನರೋಣಾ ಭಾಗದ ಪಪಾಯ ತೋಟಗಳಿಗೆ ಭೇಟಿ ನೀಡಿದ ಕಲಬುರಗಿ ಕೃಷಿ ಸಂಶೋಧನ ಕೇಂದ್ರದ ವಿಜ್ಞಾನಿ ಡಾ. ಜಹೀರ ಅಹ್ಮದ್ ಅವರು ಪಪ್ಪಾಯ ಬೆಳೆಗೆ ಮಹಾಮಾರಿಯಾಗಿ ಅಂಟಿಕೊಳ್ಳುವ ವೈರಸ್‍ನನ್ನು ನಿವಾರಣೆಗೆ ಸಲಹೆ ನೀಡಿದ್ದಾರೆ.
ಪಪ್ಪಾಯ ವೈರಸ್ ರೋಗ ಎಲೆಗಳ ತೀವ್ರವಾಗಿ ಮುದುಡಿ ಒರಟಾಗುತ್ತದೆ. ಎಲೆದೇಟು ಡೊಂಕಾಗಿ ಬಾಗುತ್ತದೆ. ಗಿಡಗಳ ಬೆಳವಣಿಗೆ ಕುಂಠಿತವಾಗಿ ಕಾಯಿಗಳು ಬಹಳ ಚಿಕ್ಕದಾಗಿ ಕಾಣುತ್ತವೆ ಇದನ್ನು ಗಮನಿಸಬೇಕು ಎಂದಿದ್ದಾರೆ.
ನಿರ್ವಹಣೆ ಕ್ರಮ: ಸಸಿಗಳಿಗೆ ತಪ್ಪದೇ 10-12 ದಿನಗಳ ಅಂತರದಲ್ಲಿ ಅಂತರವ್ಯಾಪಿ ಕೀಟನಾಶಕಗಳಾದ 1.7 ಮಿ.ಲೀ. ಡೈಮಿಥೋಮೇಟ್ 30 ಇ.ಸಿ ಅಥವಾ ಅಕ್ಸಿಡೆಮಿಟಾನ್ ಮಿಥೈಲ್ 25 ಇ.ಸಿ ಅಥವಾ 0.25 ಮಿ.ಲೀ. ಇಮಿಡಾಕ್ಲೊಪ್ರಿಡ್ 18.5 ಎಸ್.ಎಲ್ ಅಥವಾ 0.20 ಗ್ರಾಂ ಥಿಯೋಮೆಥಾಕ್ಸಾಮ್ 25 ಡಬ್ಲ್ಯೂಜಿ ಅಥವಾ 1.0 ಗ್ರಾ. ಅಸಿಪೇಟ್ 70 ಎಸ್.ಪಿ. ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸುವುದು. ಅಗಾಗ್ಗೆ ಕೀಟನಾಶಕಗಳ ಬದಲಿಗೆ ಶೇ. 5ರ ಬೇವಿನ ಬೀಜದ ಕಷಾಯ ಸಿಂಪಡಿಸುವುದು ಇದರ ಬದಲಾಗಿ 1500 ಪಿ.ಪಿ ಎಮ್. ಅಜಾಡಿರಕ್ಟಿನ್ ಬೇವು ಮೂಲದ ಕೀಟನಾಶಕವನ್ನು 2 ಮಿ.ಲೀ. ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸುವುದು.
ನಾಟಿ ಮಾಡುವ ಮೊದಲು ಪ್ರತಿ ಗುಣಿಗೆ 10 ಗ್ರಾಂ. ಕಾರ್ಬೋಫ್ಯುರಾನ್ 3 ಜಿ. ಬಳಸುವದು ಸೂಕ್ತ. ಶೇ. 1ರ ಬೇವಿನ ಎಣ್ಣೆ ಅಥವಾ ಶೇಂಗಾ ಎಣ್ಣೆ (10 ಮಿ.ಲೀ/ಲೀಟರ್ ನೀರಿಗೆ) ಅನ್ನು ಕೀಟನಾಶಕದ ಜೊತೆ ಸಿಂಪಡಿಸುವುದು. ಪಪಾಯ ತೋಟದ ಸುತ್ತ ಹತ್ತಿ, ಬದನೆ ಮತ್ತು ಕುಂಬಳ ಜಾತಿಯ ಬೆಳೆಗಳನ್ನು ಬೆಳೆಯ ಕೂಡದು. ಕಲಬುರಗಿ ಕೆವಿಕೆ, ವಿಜ್ಞಾನಿಗಳಾದ ಡಾ. ಜಹೀರ್ ಅಹೆಮದ್‍ರವರು ತಾವರಗೇರೆ, ಹಾಲಸುಲ್ತಾನಪೂರ, ಕಡಗಂಚಿ ಮತ್ತು ನರೋಣಾ ಭಾಗದ ಪಪಾಯ ತೋಟಗಳಿಗೆ ಭೇಟಿ ನೀಡಿ ರೈತರಿಗೆ ರೋಗ ನಿರ್ವಹಣಾ ಮಾಹಿತಿ ನೀಡಿದರು.
ಸೋಡಿಯಂ ಉಪ್ಪಿನಾಂಶ ಅಧಿಕ:
ಈ ವರ್ಷ ಉಷ್ಣಂಶ 26 ದಿನಗಳಿಗಿಂತ ಹೆಚ್ಚು ವಾತಾವರಣದ 40 ಡಿಗ್ರಿ. ಸೆಲಿಸಿಯಸ್ ದಾಟಿದ್ದು. ಬೋರವೆಲ್‍ಗಳಲ್ಲಿ ನೀರು ಕಡಿಮೆಯಾಗಿ ಸೋಡಿಯಂ ಉಪ್ಪಿನಾಂಶ ಅಧಿಕವಾಗಿದೆ. ಕೆವಿಕೆ ಮಣ್ಣು ವಿಜ್ಞಾನಿಗಳಾದ ಡಾ.ಶ್ರೀನವಾಸ ಬಿ.ವಿ ರವರು ಮಣ್ಣು ಮತ್ತು ನೀರು ಪರೀಕ್ಷಿಸಿದಾಗ ಬಹುತೇಕ ತೋಟಗಳಲ್ಲಿ ಸಾವಯವ ಅಂಶ ಕಡಿಮೆ ಕಂಡು ಬಂದಿದೆ. ರೈತರು ಜೀವಾಮೃತ ಅಥವಾ ಎರೆಗೊಬ್ಬರ ಅಥವಾ ತಿಪ್ಪೆಗೊಬ್ಬರ ಭೂಮಿಗೆ ಬಳಸಬೇಕೆಂದು ಸಲಹೆ ನೀಡಿದರು. ಆರಂಭದ ರೋಗ ಹಂತದಲ್ಲಿ ಮುದುಡಿದ ಎಲೆಗಳನ್ನು ಕಿತ್ತಿ ನಾಶಪಡಿಸಬೇಕೆಂದು ಕಲಬುರಗಿ ಕೆವಿಕೆ ಮುಖ್ಯಸ್ಥರಾದ ಡಾ. ರಾಜು ತೆಗ್ಗೆಳ್ಳಿರವರು ತಿಳಿಸಿದರು.
ಹಾನಿಯಾದ ಕ್ಷೇತ್ರ:
ಈ ಬಾರಿ ಪಪ್ಪಾಯ 60 ಹೆಕ್ಟೇರ್ ಆಳಂದ ತಾಲೂಕಿನಲ್ಲಿ ಬೆಳೆಯಿದೆ, ಈ 4 ಹೆಕ್ಟೇರ್ ಮಾತ್ರ ವೈರಸ್‍ನಿಂದ ಹಾಗೂ ಅಕಾಲಿಕ ಮಳೆಗೆ ತುತ್ತಾಗಿ ಬೆಳೆ ಹಾನಿಯಾಗಿದೆ ಎಂದು ತೋಟಗಾರಿಕೆ ಅಧಿಕಾರಿ ಸುರೇಂದ್ರನಾಥ ಹೊನ್ನಪ್ಪಗೊಳ ಅವರು ಅಂದಾಜಿಸಿದ್ದಾರೆ.