ಬದುಕಿನ ಆಯಾಮಕ್ಕೆ ಯೋಗ, ಲಿಂಗಾರ್ಚನೆ, ತತ್ವಪಾಲಿಸಿ: ನಿರಂಜನ ದೇವರು
ಆಳಂದ: ಮೇ.18:ಬದುಕಿನ ಆಯಾಮಕ್ಕೆ ನಿತ್ಯ ಬೆಳಗಿನ ಜಾವ ಯೋಗ ಇದಾದ ಬಳಿಕ ಇಷ್ಟಲಿಂಗಾರ್ಚನೆ ವಚನಗಳ ವಾಚನ, ಪ್ರಸಾದ ಮತ್ತು ಕಾಯಕ ತತ್ವಗಳನ್ನು ಮೈಗೂಡಿಸಿಕೊಂಡರೆ ಆರೋಗ್ಯದೊಂದಿಗೆ ಮಾನಸಿಕ ಮತ್ತು ದೈಹಿಕ ಸದೃಢತೆ ತಂದುಕೊಳ್ಳಬಹುದು ಎಂದು ಸಂಚಾರಿ ಹಿಮಾಲಯನ ಧ್ಯಾನ ಮತ್ತು ಯೋಗ ಬೋಧಕರಾದ ನಿರಂಜನದೇವರು ಹೇಳಿದರು.
ಕಲಬುರಗಿ ನಗರ ಜೇವರ್ಗಿ ಕಾಲೋನಿಯ ಮಾಕಾ ಲೇಔಟ್£ ಬಸವ ಮಂಟಪದಲ್ಲಿ ಜಗಜ್ಜ್ಯೋತಿ ಬಸವೇಶ್ವರ ಸೇವಾ ಸಮಿತಿ ಆಶ್ರಯದಲ್ಲಿ 891ನೇ ಬಸವ ಜಯಂತಿ ಉತ್ಸವ ಅಂಗವಾಗಿ ಉಚಿತವಾಗಿ ಹಮ್ಮಿಕೊಂಡ 11 ದಿನಗಳಕಾಲದ ಯೋಗ ಮತ್ತು ಆಧ್ಯಾತ್ಮಿಕ ಪ್ರಚನ ಮತ್ತು ಸಮೂಹಿಕ ಇಷ್ಟಲಿಂಗಾರ್ಚನೆಯಲ್ಲಿ ಅವರು ಮಾತನಾಡಿದರು.
ಯೋಗದಿಂದ ದೈಹಿಕ ಆರೋಗ್ಯವನ್ನು ಕಾಪಾಡುವುದಾದರೆ, ಇಷ್ಟಲಿಂಗಾರ್ಚನೆಯಿಂದ ಮಾನಸಿಕ ನೆಮ್ಮದಿ ತಂದುಕೊಡುತ್ತದೆ. ಆಧ್ಯಾತ್ಮ ಆಲಿಸುವುದರಿಂದ ಸಂಸ್ಕಾರ ಮತ್ತು ಸನ್ಮಾರ್ಗದ ಜೊತೆಗೆ ಕಾಯಕ ದಾಸೋಹ ತತ್ವಗಳನ್ನು ಅನುಪಾಲನೆಯಾಗುತ್ತೆ. ಇದರಿಂದ ಸಮ ಸಮಾಜದೊಂದಿಗೆ ಆರೋಗ್ಯವಂತ ಸಮಾಜವನ್ನು ನಿರ್ಮಿಸಲು ಸಾಧ್ಯವಾಗುತ್ತದೆ ಎಂದು ಅವರು ಹೇಳಿದರು.
ಮೇ 10ರಿಂದ ನಿತ್ಯ ಬೆಳಗಿನ ಜಾವ 5:30ಕ್ಕೆ ಯೋಗ ಮತ್ತು ಸಂಜೆ 6:30ಕ್ಕೆ ಸಾಮೂಹಿಕ ಭಜನೆ ಮತ್ತು ಆಧ್ಯಾತ್ಮೀಕ ಪ್ರವಚನ ಮೇ 20ರಂದು ಸಮಾರೋಪಗೊಳ್ಳಲಿದೆ ಎಂದು ಸೇವಾ ಸಮಿತಿಯ ಪದಾಧಿಕಾರಿಗಳು ಹೇಳಿಕೊಂಡಿದ್ದಾರೆ.
ಹಿಮಾಲಯ ತಪ್ಪಸ್ವೀ ಸಂಚಾರಿಗಳಾದ ಶ್ರೀ ನಿರಂಜನ ದೇವರು ಎಲ್ಲಿಯೂ ತಮ್ಮ ನೆಲೆಯನ್ನೂರದೇ ಮಠ ಕಟ್ಟದೆ, ಯಾರಿಂದಲೂ ಕಿಂತವೂ ಹಣ ಪಡೆಯದೇ ಸ್ವಾಸ್ಥ್ಯ ಸಮಾಜದ ನಿರ್ಮಾಣದ ಸತಸಂಕಲ್ಪದ ಧೇಯೋದ್ದೇಶದೊಂದಿಗೆ ದೇಶಾದ್ಯಂತ ಪರ್ಯಟನೆ ಮೂಲಕ ಉಚಿತವಾಗಿ ಯೋಗಧ್ಯಾನ ಮತ್ತು ಆಧ್ಯಾತ್ಮೀಕ ಪ್ರವಚನದ ಮೂಲಕ ಜನರ ಮಾನಸಿಕ ನೆಮ್ಮದಿ ಮತ್ತು ದೈಹಿಕ ಸದೃಢತೆಗೆ ಅವರು ನೀಡುತ್ತಿರುವ ಉಪದೇಶಗಳು ಪ್ರತಿಯೊಬ್ಬ ಮಾನವನ ಬದುಕಿಗೆ ದಿವ್ಯ ಔಷಧಿಯಾಗಿದೆ ಎಂದು ಅನಿಸಿಕ ವ್ಯಕ್ತಪಡಿಸಿದ ಅನೇಕ ಯೋಗ ಶಿಬಿರಾರ್ಥಿಗಳು ಈ ಸಂದರ್ಭದಲ್ಲಿ ಮಾತನಾಡಿದರು.
ಮಹಿಳೆಯರು ಮಕ್ಕಳು ಸೇವಾ ಸಮಿತಿಯ ಪ್ರಮುಖರು ಸೇರಿ ನೂರಾರು ಮಂದಿ ಈ ಸಂದರ್ಭದಲ್ಲಿ ಪಾಲ್ಗೊಂಡಿದ್ದರು.