ವಿಜಯನಗರದಲ್ಲಿ ಶ್ರೀ ಶಂಕರ ಜಯಂತಿ ಆನೆಯ ಅಂಬಾರಿ ಉತ್ಸವ
ಸಂಜೆವಾಣಿ ವಾರ್ತೆ
ಹೊಸಪೇಟೆ ಮೇ18:  ವಿದ್ಯಾರಣ್ಯರ ಪೂಣ್ಯಭೂಮಿ ವಿಜಯನಗರದ ಕೇಂದ್ರಸ್ಥಾನ ಹೊಸಪೇಟೆಯ ಚಿಂತಾಮಣಿ ಮಠ ಹಾಗೂ ಕೋಟೆಯ ಶಂಕರಲಿಂಗ ದೇವಸ್ಥಾನದಲ್ಲಿ ವೈಭವದ ಶ್ರೀ ಶಂಕರ ಭಗ್ವತ್ಪಾದರ ಜಯಂತೋತ್ಸವ ಅದ್ದೂರಿಯಾಗಿ ನಡೆಯಿತು.
ಶಂಕರ ಲಿಂಗೇಶ್ವರ ದೇವಸ್ಥಾನದಲ್ಲಿ ಕಳೆದ 12 ರಿಂದ ಇಂದಿನ ವರೆಗೂ ನಿತ್ಯವೂ ವೈವಿಧ್ಯಮಯ ಕಾರ್ಯಕ್ರಮಗಳು ಜರುಗಿದರೆ ಕೊನೆಯ ದಿನವಾದ ಶನಿವಾರ ಉದಯರಾಗದೊಂದಿಗೆ ಶಂಕರಲಿಂಗೇಶ್ವರ ಹಾಗೂ ಶಂಕರ ಭಗ್ವತ್ಪಾದರಿಗೆ ವಿಶೇಷ ಪೂಜೆ, ಪಂಚಾಮೃತಾಭಿಷೇಕ, ರುದ್ರಭಿಷೇಕ, ಪುಣ್ಯಾವಾಚನ, ರುದ್ರಸ್ವಾಹಾಕಾರ ಹೋಮ,ಲಲಿತಾ ಸಹಸ್ರನಾಮ ಪಠಣ, ಪೂರ್ಣಾಹುತಿ ಹಾಗೂ ಪ್ರಸಾದ ವಿತರಣೆ ಜರುಗಿತು.
ಪುರಾತನ ಐತಿಹಾಸಿ ಹಿನ್ನೆಲೆ ಹೊಂದಿರುವ ಶ್ರೀಚಿಂತಾಮಣಿ ಮಠದಲ್ಲಿಯು ಸಹ ಶ್ರೀ ಶಂಕರ ಭಗ್ವತ್ಪಾದರ ಜಯಂತೋತ್ಸವನ್ನು ಅದ್ದೂರಿಯಾಗಿ ಆಚರಿಸಲಾಯಿತು. ವೈವಿದ್ಯಮ ಸಾಂಸ್ಕøತಿ ಕಾರ್ಯಕ್ರಮ, ಶ್ರೀಲಲಿತಾ ಸಹಸ್ರನಾಮ ಪಾರಾಯಣ, ಸಂಗೀತ ಸುಧೆ, ಹೋಮ ಹವನ ಹಾಗೂ ಧಾರ್ಮಿಕ ವಿಧಿ ವಿಧಾನಗಳ ಹೊರತಾಗಿ ನಗರದ ಪ್ರಮುಖ ರಸ್ತೆಯಲ್ಲಿ ಆನೆ ಅಂಬಾರಿ ಉತ್ಸವ ಶ್ರೀ ಅದ್ವೆತ ತತ್ವ ಸಾರುವ ಶ್ರೀ ಶಂಕರಾಚಾರ್ಯ ಭಾಷಾ ಗ್ರಂಥವನ್ನು ಅಂಬಾರಿಯಲ್ಲಿ ಶ್ರೀಶಂಕರರ ಮೂರ್ತಿಯೊಂದಿಗೆ ಮೆರವಣಿಗೆ ಮಾಡಲಾಯಿತು.