ಹಬೋಹಳ್ಳಿ :ಅಂಜಲಿ ಅಂಬಿಗೇರಾ ಹತ್ಯೆ ಖಂಡಿಸಿ ಜಿಲ್ಲಾಧಿಕಾರಿಗೆ ಮನವಿ
ಸಂಜೆವಾಣಿ ವಾರ್ತೆ
 ಹಗರಿಬೊಮ್ಮನಹಳ್ಳಿ :ಮೇ.18 ಹುಬ್ಬಳ್ಳಿಯ ಅಂಜಲಿ ಅಂಬಿಗೇರಾ ಎಂಬ ಯುವತಿಯನ್ನು ಹತ್ಯೆ ಮಾಡಿದ ಗಿರೀಶ್ ಆಲಿಯಾಸ್ ವಿಶ್ವನಾಥ್ ಎಂಬುವರನ್ನು ಕೂಡಲೇ ಗಲ್ಲು ಶಿಕ್ಷೆ ವಿಧಿಸಬೇಕೆಂದು ಗಂಗಾಮತ ಸಮುದಾಯದ ಜಿಲ್ಲಾಧ್ಯಕ್ಷರಾದ ಅಂಬಾಡಿ ನಾಗರಾಜ ಒತ್ತಾಯಿಸಿದರು.                          
 ವಿಜಯನಗರ ಜಿಲ್ಲಾಧಿಕಾರಿ ಎಂ ಎಸ್ ದಿವಾಕರ್  ಮುಖಾಂತರ ಮುಖ್ಯಮಂತ್ರಿಗೆ ತಲುಪಿಸಲು ಅವರಿಗೆ ಮನವಿ ಸಲ್ಲಿಸಿ ಮಾತನಾಡಿದರು  ಹುಬ್ಬಳ್ಳಿಯಲ್ಲಿ ನೇಹಾ ಹಿರೇಮಠ್ ಕೊಲೆ ಪ್ರಕರಣ ನೆನಪು ಮಾಸುವ ಮುನ್ನವೇ ಸರಣಿ ಮತ್ತೊಂದು ಕೊಲೆ ಪ್ರಕರಣ ರಾಜ್ಯವನ್ನೇ ಬೆಚ್ಚಿ ಬೆಳಿಸುವಂತಹ ವಿಷಯವಾಗಿದೆ. ಬೆಳ್ಳಂಬೆಳಗ್ಗೆ ಯುವತಿಯ ಮನೆಯಲ್ಲಿ ಪ್ರೀತಿ ನಿರಾಕರಣೆಯಿಂದ  ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದ ವಿಷಯ ಕುಟುಂಬದ ಮೂಲಗಳು ಪೋಲಿಸ್ ಅಧಿಕಾರಿಗಳ ಗಮನಕ್ಕೆ ತಂದ ಬಳಿಕ ಕ್ರಮ ವಹಿಸಿದ್ದರೆ ಈ ಪ್ರಕರಣ ನಡೆಯುತ್ತಿರಲಿಲ್ಲ.ಕೊಲೆ ಮಾಡಿದ ಆರೋಪಿ ತಲೆ ಮರೆಸಿಕೊಂಡಿದ್ದು ಕೂಡಲೇ ಆರೋಪಿಯನ್ನು ಬಂಧಿಸಿ ಕಠಿಣ ಶಿಕ್ಷೆ ವಿಧಿಸಬೇಕೆಂದು ಸರ್ಕಾರ ಹತ್ಯೆಯಾದ ಅಂಜಲಿ ಕುಟುಂಬಕ್ಕೆ ಐವತ್ತು ಲಕ್ಷ ರೂಪಾಯಿ ಪರಿಹಾರ ನೀಡಬೇಕೆಂದು ಒತ್ತಾಯಿಸಿದರು.                                                                                               ಈ ಸಂದರ್ಭದಲ್ಲಿ ಗಂಗಾಮತ ಸಮುದಾಯದ ಜಿಲ್ಲಾ ಗೌರವ ಅಧ್ಯಕ್ಷ ವೈ ಯು ಯಮುನೇಶ್, ಉಪಾಧ್ಯಕ್ಷರಾದ ಮೇಘರಾಜ ಬಾರಿಕರ ಭೀಮಪ್ಪ ಸುರೇಶ ಅಭಿಮನ್ಯು ಪ್ರಧಾನ ಕಾರ್ಯದರ್ಶಿ ಎಂ ವಿಶ್ವನಾಥ ಜಿಲ್ಲಾ ಸಹಕಾರಿದರ್ಶಿಗಳಾದ ಅಂಬಿಗರ ಮಂಜುನಾಥ ಖಜಾಂಚಿ ಹೆಚ್ ನಾಗಲಿಂಗಪ್ಪ ಸಂಘಟನಾ ಕಾರ್ಯದರ್ಶಿ ಸರ್ದಾರ್ ಯಮನೂರಪ್ಪ ಜಿಲ್ಲಾ ಕಾನೂನು ಸಲಹಗಾರ ಕೆ ಭಾಸ್ಕರ ನಿರ್ದೇಶಕರಾದ ಜಾಲಗಾರ ಮಂಜುನಾಥ, ರಾಮಸ್ವಾಮಿ ,ವೆಂಕಟೇಶ, ನೀಲಕಂಠಪ್ಪ ,ಶ್ರೀನಿವಾಸ ಪ್ರಕಾಶ, ವಿರೂಪಾಕ್ಷಪ್ಪ ,ಚೌಡಪ್ಪ ,ಗಂಗಪ್ಪ ಇತರರು ಇದ್ದರು.