ದೇವರು ನೆಲೆ ನಿಂತ ದೇವಸ್ಥಾನದ ಆವರಣ ಪರಿಶುದ್ಧವಾಗಿರಲಿ, ರಾಜಗೋಪಲ್ ಹೇಳಿಕೆ
ವಿಜಯಪುರ.ಸೆ.೨೩- ಪೂಜಾ ಮಂದಿರಗಳಲ್ಲಿ ಮಾತ್ರ ದೇವರಿದ್ದರೆ ಸಾಲದು. ನಮ್ಮ ನಮ್ಮ ಮನಸ್ಸಿನಲ್ಲೂ ದೇವರಿರಬೇಕು ಎಂದು ಗಾಣಿಗರ ಸೇವಾ ಕ್ಷೇಮಾಭಿವೃದ್ದಿ ಸಂಘದ ಟೌನ್ ಅಧ್ಯಕ್ಷ ಜಿ.ರಾಜಗೋಪಲ್ ತಿಳಿಸಿದರು.
ಇವರು ಪಟ್ಟಣದ ಕೋಲಾರ ಮುಖ್ಯರಸ್ತೆಯಲ್ಲಿರುವ ಗಾಣಿಗರ ಸೇವಾ ಕ್ಷೇಮಾಭಿವೃದ್ದಿ ಸಂಘದಲ್ಲಿ ನಗರ ಕಸಾಪ ಘಟಕವತಿಯಿಂದ ಆಯೋಜಿಸಿದ್ದ ಧಾರ್ಮಿಕ ಪುಣ್ಯ ಸ್ಥಳಗಳ ಕುರಿತು ಮಾತನಾಡಿದರು.
ನಮ್ಮ ನಮ್ಮ ಮನಸ್ಸಿನಲ್ಲೂ ದೇವರಿರಬೇಕು, ದೇವರು ನೆಲೆ ನಿಂತ ದೇವಸ್ಥಾನಗಳು ಪರಿಶುದ್ಧವಾಗಿರಬೇಕು. ಮಾತ್ರವಲ್ಲ, ಮನಸ್ಸು ಕೂಡ ಪರಿಶುದ್ಧವಾಗಿ ಇರಬೇಕು. ಬಾಹ್ಯ ಮತ್ತು ಅಂತರಂಗ ಶುದ್ಧಿ ಎರಡೂ ಅಗತ್ಯ. ಆಗ ಮಾತ್ರ ದೇವರು ದೇವಸ್ಥಾನ ಮತ್ತು ಮನಸ್ಸನ್ನು ತನ್ನ ಆವಾಸ ಸ್ಥಾನ ಮಾಡಿಕೊಳ್ಳುತ್ತಾನೆ. ನಾವು ಭಗವಂತನ ಆರಾಧನೆಯನ್ನು ಯಾರೊಬ್ಬರಿಗಾಗಿ ಮಾಡುವುದಲ್ಲ. ಆರಾಧನೆ ಮಾಡಿದರೆ ಲಾಭವೂ ನಮಗೆ, ಮಾಡದಿದ್ದರೆ ನಷ್ಟವೂ ನಮಗೇ. ಗುರುಗಳು ಬರುತ್ತಾರೆ ಎಂದಾಗ ಮಾತ್ರ ಶುದ್ಧವಾಗಿಡುವುದಲ್ಲ. ಸದಾಕಾಲ ಶುದ್ಧವಾಗಿರಬೇಕು ಎಂದರು.
ನಗರ ಘಟಕದ ಅಧ್ಯಕ್ಷ ಜೆ.ಎನ್.ಶ್ರೀನಿವಾಸ್ ಮಾತನಾಡಿ, ನಮ್ಮ ದೇಶದಲ್ಲಿ ನಮ್ಮ ಹಿಂದೂ ದೇವಾಲಯಗಳಿಗೆ ತನ್ನದೇ ಆದ ಇತಿಹಾಸ ಹೊಂದಿದೆ. ಇಲ್ಲಿನ ಇತಿಹಾಸ ಹೊಂದಿರು ದೇವಾಲಯಗಳಿಗೆ ಬೇಟಿ ನೀಡಿದರೆ ಸಾಕು ಮನಸ್ಸಿಗೆ ನೆಮ್ಮದಿಯೊಂದಿಗೆ ದೇವರನ್ನು ಗ್ರಹಿಸಲು ಅಸಾಧ್ಯವಾದರು. ಜನರಲ್ಲಿ ಭಕ್ತಿಯು ಮಾತ್ರ ಹೆಚ್ಚಾಗಿದೆ. ಆ ಕಾರಣದಿಂದಲೇ ದೇವಾಲಯ, ಪೂಜಾ ಮಂದಿರಗಳಲ್ಲಿ ಆಕಾರದ ಮೂಲಕ ನೆಲೆ ನಿಂತು ದೇವರು ಅನುಗ್ರಹಿಸುತ್ತಾನೆ. ಹೀಗಾಗಿ ದೇವಾಲಯಗಳಿಗೆ ತನ್ನದೇ ಮಹತ್ವವಿದೆ ಎಂದರು.
ಈ ಸಂದರ್ಭದಲ್ಲಿ ಲಕ್ಷ್ಮಣ್.ಜಿ, ಸಾಹಿತ್ಯ ಪರಿಷತ್ತಿನ ಸಹ ಕಾರ್ಯದರ್ಶಿಗಳಾದ ಸಿ, ಕೆ,ಜಗದೀಶ್, ಗಾಣಿಗ ಸಂಘದ ಗೌರವ ಅಧ್ಯಕ್ಷ ಆಂಜೀನಪ್ಪ, ದಲಿತ ಸ್ವಭಿಮಾನ ಸಮಿತಿ ರಾಜ್ಯಾಧ್ಯಕ್ಷ ಎಚ್.ನಾರಾಯಣಸ್ವಾಮಿ, ಶಿಕ್ಷಕ ಕೆ.ಎಚ್.ಚಂದ್ರಶೇಖರ್, ನಾರಾಯಣಸ್ವಾಮಿ, ಶ್ರೀನಿವಾಸ್, ರಮೇಶ್, ಗಾಣಿಗ ಸಂಘದ ಪ್ರಧಾನ ಕಾರ್ಯದರ್ಶಿ ಲಕ್ಷಣ್, ಉಪಾಧ್ಯಕ್ಷ ಟಿ.ವೆಂಕಟೇಶ್, ಸುಬ್ರಮಣಿ, ರಮೇಶ್, ಶಿವರಾಜು ಇತರರು ಹಾಜರಿದ್ದಾರು.