ಗುರಗಳೇ ದೇವರು ಶಿಕ್ಷಣವೇ ಬದುಕಿನ ಮೂಲಪಾಯ- ಶ್ರೀನಾಥ್
ಕೋಲಾರ.ಸೆ.೨೩-ಸಿದ್ದಗಂಗಾ ಮಠದಲ್ಲಿ ಶಿಕ್ಷಣದ ಜೊತೆಗೆ ಅನ್ನ, ಆಶ್ರಯ ಸೇರಿದಂತೆ ತ್ರಿವಿಧವಾದ ದಾಸೋಹದ ಸೇವೆಯನ್ನು ಪಡೆದ ವಿದ್ಯಾರ್ಥಿಗಳು ಇಂದು ವಿಶ್ವದಾದ್ಯಂತ ಉನ್ನತ ಅಧಿಕಾರಿಗಳು ಉದ್ಯಮಿಗಳಾಗಿ ಹೊರಹೊಮ್ಮಿ ಸಮಾಜ ಮುಖಿಗಳಾಗಿ ಸೇವೆ ಸಲ್ಲಿಸುತ್ತಿರುವುದು ಶ್ಲಾಘನೀಯ ಎಂದು ಸಮಾಜ ಸೇವಕ ಸಿ.ಎಂ.ಆರ್.ಶ್ರೀನಾಥ ತಿಳಿಸಿದರು,
ತಾಲ್ಲೂಕಿನ ರಾಜಕಲ್ಲಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹಳೆಯ ವಿದ್ಯಾರ್ಥಿಗಳು ಮತ್ತು ಗ್ರಾಮಸ್ಥರಿಂದ ಕುವೆಂಪು ರಂಗಮಂಟಪ ಶಾಲಾ ಶತಮಾನೋತ್ಸವ ಮತ್ತು ಗುರುವಂದನದ ಸವಿ ನೆನಪು ಹಾಗೂ ಸನ್ಮಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ ವಿದ್ಯಾರ್ಥಿಗಳಿಗೆ ಶಾಲೆಗಳೇ ದೇವಾಲಯ ಹಾಗೂ ಶಿಕ್ಷಕರುಗಳೇ ದೇವರು. ಶಿಕ್ಷಣ ಬದುಕಿನ ಮೂಲಪಾಯವಾಗಿದೆ, ಗುರುಗಳು ವಿದ್ಯಾರ್ಥಿಗಳು ಮರೆತರು ವಿದ್ಯಾರ್ಥಿಗಳು ಮರೆಯಲಾರರು ಗುರುಗಳು ವಿದ್ಯಾರ್ಥಿಗಳ ಬದುಕಿನ ಭಾಗವಾಗಿರುತ್ತಾರೆ ಎಂದು ಅಭಿಪ್ರಾಯ ಪಟ್ಟರು.
ಸರ್ಕಾರಿ ಶಾಲೆಗಳಲ್ಲಿ ಮೌಲ್ಯಧಾರಿತ ಗುಣಾತ್ಮಕ ಶಿಕ್ಷಣದ ಜೂತೆಗೆ ಶಿಸ್ತು. ಬದ್ದತೆ, ಸಂಸ್ಕೃತಿ, ಸಂಸ್ಕಾರಗಳನ್ನು ಸಿಗಲಿದೆ ಅದರೆ ನಿಮಗೆ ಎಷ್ಟೆ ಹಣ ಕೊಟ್ಟು ಖಾಸಗಿ ಶಾಲೆಗಳಿಗೆ ಹೋದರೂ ಮೌಲ್ಯಧಾರಿತ ಗುಣತ್ಮಾಕ ಶಿಕ್ಷಣಗಳು ಸರ್ಕಾರಿ ಶಾಲೆ ಹಾಗೂ ಮಠಗಳಿಂದ ಸಿಗಲು ಸಾಧ್ಯ ಹಾಗಾಗಿ ಸಿದ್ದಗಂಗಾ ಮಠದ ವಿದ್ಯಾರ್ಥಿಗಳು ಎಲ್ಲೆ ಇದ್ದರೂ ಸಮಾಜ ಮುಖಿಗಳಾಗಿ ಕಾರ್ಯನಿರ್ವಹಿಸುತ್ತಿರುತ್ತಾರೆ ಎಂಬುವುದಕ್ಕೆ ರಾಜಕಲ್ಲಹಳ್ಳಿ ಸರ್ಕಾರಿ ಶಾಲೆಯ ಅಭಿವೃದ್ದಿಯೇ ನಿದರ್ಶನವಾಗಿದೆ. ಶಿಕ್ಷಣ ಸಂಸ್ಥೆ ಸೇವೆಗಳು ದೇಶ ಸೇವೆಯಷ್ಟೆ ಪವಿತ್ರವಾದದ್ದು ಎಂದರು.
ಸಿದ್ದಗಂಗಾ ಮಠದ ತ್ರಿವಿಧ ದಾಸೋಹಿಗಳು ವಿದ್ಯಾರ್ಥಿಗಳಿಗಾಗಿ ಜೋಗುಳಿ ಹಿಡಿದು ಹಣ, ದವಸ ಧಾನ್ಯ ಸಂಗ್ರಹಿಸುವ ಮೂಲಕ ತಮ್ಮ ಜೀವನವನ್ನೆ ಸವೆಸಿರುವುದನ್ನು ಸುವರ್ಣಆಕ್ಷರಗಳಲ್ಲಿ ದಾಖಲಿಸಲು ಆರ್ಹವಾಗಿದೆ. ಸಿದ್ದಗಂಗ ಮಠಕ್ಕೆ ಹೋದಾಗ ನೆಮ್ಮದಿ, ಶಾಂತಿ ಸಿಗುವುದರಿಂದ ಆಗಾಗ್ಗೆ ಸಿದ್ದಗಂಗ ಮಠಕ್ಕೆ ಭೇಟಿ ನೀಡುತ್ತೇನೆ. ಬಡ ಸಂಸ್ಥೆಗಳ ಜೂತೆಗೆ ಸ್ಥಿತಿವಂತವರು ಕೈ ಜೋಡಿಸುವಂತಾಗಿ ಸಾಮಾಜಿಕ ಚಟುವಟಿಕೆಗಳಲ್ಲಿ ಭಾಗವಹಿಸುವ ಮೂಲಕ ಸಮಾಜ ಮುಖಿಗಳಾಗಿ ಕಾರ್ಯನಿರ್ವಹಿಸಿವಿಕೆ ನಿರಂತರವಾಗಿ ಮುಂದುವರೆಸುವಂತಾಗ ಬೇಕು ಹಿಂದಿನ ಬಡತನ ಮರೆಯದೆ ಈಗಿನ ಶ್ರೀಮಂತಿಕೆಯನ್ನು ಮೆರೆಯದೆ ಸಾಮಾಜಿಕ ಸೇವೆಗಳಲ್ಲಿ ತೊಡಗಿಸಿಕೊಳ್ಳ ಬೇಕೆಂದು ಕಿವಿ ಮಾತು ತಿಳಿಸಿದರು,
ಕಾರ್ಯಕ್ರಮ ಉದ್ಘಾಟಿಸಿದ ನೆಲಮಂಗಲ ಮಂಡಿಗೆರೆ ಶಾಲಾ ಮುಖ್ಯೋಪಾದ್ಯಾಯರು ಹಾಗೂ ರಾಜಕಲ್ಲಹಳ್ಳಿ ಶಾಲೆಯ ನಿಕಟ ಪೂರ್ವ ಶಿಕ್ಷಕರಾದ ಜಿ. ಸಚ್ಚಿದಾನಂದ ಮೂರ್ತಿ ಮಾತನಾಡಿ ಸಿದ್ದಗಂಗ ಮಠದ ವಿವಿಧ ಜಿಲ್ಲೆಯ ಹಳೆಯ ವಿದ್ಯಾರ್ಥಿಗಳು ಒಕ್ಕೂಟ ರಚಿಸಿ ಕೊಂಡು ಗುರು ಶಿಷ್ಯರ ಅವಿನಾಭಾಜ್ಯ ಸಂಬಂಧವನ್ನು ಸಧೃಡ ಪಡೆಸಿ ಕೊಂಡಿರುವುದು ಶ್ಲಾಘನೀಯ ಸಂಗತಿಯಾಗಿದೆ. ಸಿದ್ದಗಂಗಾ ಮಠದಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳು ಭಾರತ ಮಾತ್ರವಲ್ಲ ವಿಶ್ವದ ವಿವಿಧ ಮೂಲೆಗಳಲ್ಲಿ ನೆಲೆಸಿರುವುದನ್ನು ಕಾಣಬಹುದಾಗಿದೆ. ಉನ್ನತ ಸ್ಥಾನಮಾನಗಳನ್ನು ಹೊಂದಿ ನೊರಾರು ಮಂದಿಗೆ ಉದ್ಯೋಗ ನೀಡುವಂತ ಉದ್ಯಮಿಗಳಾಗಿ, ಸಮಾಜದಲ್ಲಿ ಉನ್ನತ ಸ್ಥಾನಮಾನಗಳನ್ನು ಪಡೆದು ಗೌರವಯುತ ಜೀವನ ನಡೆಸುವ ಮೂಲಕ ಸಮಾಜಮುಖಿಗಳಾಗಿ ಸೇವೆ ಸಲ್ಲಿಸುತ್ತಿದ್ದಾರೆ ಎಂದರು.
ಉದ್ಯಮಿ ಜನಾರ್ಥನ್ ಗೌಡ ಮಾತನಾಡಿ ಮಠದಲ್ಲಿ ಶಿಕ್ಷಣ ವ್ಯಾಸಂಗ ಮಾಡಿದ ಅವಧಿ ಕಡಿಮೆಯಾದರೂ ಶ್ರೀಗಳ ಆಶೀರ್ವಾದದಿಂದ ಟೈಲ್ಸ್ ಉದ್ಯಮಿಯಾಗಿ ಸ್ಥಿತಿವಂತನಾಗಲು ಶ್ರೀಗಳ ಆದರ್ಶಗಳೇ ಕಾರಣವಾಗಿದೆ. ಶಿಕ್ಷಣದ ಜೊತೆಗೆ ನಿಸ್ವಾರ್ಥ ಸೇವೆಯನ್ನು ಕಲಿಸಿದೆ. ಜೀವನದಲ್ಲಿ ಗುರಿ ಇದ್ದರೆ ಮಾತ್ರ ಸಾಧನೆ ಸಾಧ್ಯ ಶಿಕ್ಷಣ ಕಲಿಯುವುದು ಸಾಧನೆಯಲ್ಲಿ ಸಮಾಜ ಸೇವೆ ಸಲ್ಲಿಸುವುದು ಸಾಧನೆಯಾಗಿದೆ ಎಂದು ಹೇಳಿದರು,
ಗ್ರಾಮದ ಹಿರಿಯ ಮುಖಂಡ ನಂಜುಂಡಗೌಡ ಮಾತನಾಡಿ ಶಾಲೆಗೆ ಒಂದು ಶತಮಾನಗಳಾಗಿದೆ ವಿಧಾನ ಪರಿಷತ್ತಿನ ಸದಸ್ಯರಾದ ಗೋವಿಂದರಾಜು ಹಾಗೂ ಸಿ.ಎಂ.ಆರ್. ಶ್ರೀನಾಥ ಅವರು ಕೊಠಡಿಗಳನ್ನು ನಿರ್ಮಿಸಿ ಕೊಡುವುದಾಗಿ ಆಶ್ವಾಸನೆ ನೀಡಿದ್ದಾರೆ. ಮಂಜುನಾಥ್ ಅವರು ಶಾಲೆಗೆ ರಂಗ ಮಂದಿರ, ಮಕ್ಕಳಿಗೆ ಸಮವಸ್ತ್ರ, ವಿದ್ಯುತ್ ದೀಪ ಸೌಲಭ್ಯವನ್ನು ಕಲ್ಪಿಸಿದ್ದು ಮುಂದಿನ ದಿನಗಳಲ್ಲಿ ಶಾಲಾ ಅವರಣಕ್ಕೆ ಸಿಮೆಂಟ್ ಶೀಟ್ ಹಾಕಿಸಿ ಕೊಡುವುದಾಗಿ ಭರವಸೆ ನೀಡಿದ್ದಾರೆ ಎಂದು ತಿಳಿಸಿದರು.
ಡಾ.ಸಿದ್ದಲಿಂಗಪ್ಪ ಎಸ್.ದೇಶ್‌ಮುಖ್ ಪ್ರಸ್ತಾವಿಕ ನುಡಿಗಳಾಡಿದರು, ಒಕ್ಕೂಟದ ಮುಖ್ಯಸ್ಥರಾದ ಸುರೇಶ್ ಸ್ವಾಗತಿಸಿ ಗುರುವಂದನಾ ಕಾರ್ಯಕ್ರಮದ ಜೊತೆಗೆ ಹಳೆ ವಿದ್ಯಾರ್ಥಿಗಳ ಒಕ್ಕೂಟದ ಸಾಧಕರಿಗೆ ಸನ್ಮಾನದ ಬಗ್ಗೆ ವಿವರಿಸಿದರು. ಸಿದ್ದಗಂಗಾಶ್ರೀಗಳ ಭಾವಚಿತ್ರಕ್ಕೆ ಪುಷ್ಟರ್ಚನೆ ಸಲ್ಲಿಸಲಾಯಿತು.
ಇದೇ ಸಂದರ್ಭದಲ್ಲಿ ಜಿ.ಸಚ್ಚಿದಾನಂದ ಮೂರ್ತಿ, ಸಿ.ಎಂ.ಆರ್.ಶ್ರೀನಾಥ್, ಗುತ್ತಿಗೆದಾರ ರಮೇಶ್ ಎಂ.ಎನ್. ಮುಂತಾದವರಿಗೆ ಸನ್ಮಾನಿಸಿ ಗೌರವಿಸಲಾಯಿತು, ಬಾಲಕಿ ನಿವೇಧಿತ ಪ್ರಾರ್ಥನೆ ಅದ್ಬೂತವಾಗಿ ಮೂಡಿ ಬಂದಿತು. ವೇದಿಕೆಯಲ್ಲಿ ಈರೇಗೌಡ ಜಿ. ಸತ್ಯವಾರ, ಡಾ.ಮುನಿರಾಜು ಎಂ.ಜಿ. ನಾರಾಯಣಸ್ವಾಮಿ,ಎಸ್, ಕೃಷ್ಣವೇಣಿ, ಶ್ರೀನಿವಾಸ್, ಯಲ್ಲಪ್ಪ, ಶ್ರೀನಾತ್, ಲಕ್ಮಣ್,ನಾರಾಯಣಸ್ವಾಮಿ,ಸುಧಾಕರ್ ಮುಂತಾದವರು ಇದ್ದರು,