ವಿಜಯಕುಮಾರ್ ಜಾಧವ್ ಗೆ ಛಾಯಾ ಸಾಧಕ ಪ್ರಶಸ್ತಿ
ಸಂಜೆವಾಣಿ ವಾರ್ತೆದಾವಣಗೆರೆ.ಸೆ.೨೩;  ಬೆಂಗಳೂರಿನಲ್ಲಿ  ಕರ್ನಾಟಕ ಛಾಯಾಚಿತ್ರ ಗ್ರಾಹಕರ ಸಂಘದ ವತಿಯಿಂದ ನಡೆದ ಡಿಜಿ ಇಮೇಜ್ ದಶಮಾನೋತ್ಸವ ಸಮಾರಂಭದಲ್ಲಿ ದಾವಣಗೆರೆ ಜಿಲ್ಲೆಯ ಜಿಲ್ಲಾಧ್ಯಕ್ಷರಾದ ವಿಜಯಕುಮಾರ್ ಜಾದವ್ ಅವರಿಗೆ ಛಾಯಾ ಸಾಧಕ  ಹಾಗೂ ಫೋಟೋಗ್ರಾಫರ್ ಯೂತ್ ವೆಲ್ಫೇರ್  ಅಸೋಸಿಯೇಷನ್ ಕಾರ್ಯದರ್ಶಿಯಾದ  ಅರುಣ್ ಕುಮಾರ್ ಬಿ ಪಾಟೀಲ್ ಅವರಿಗೆ ಛಾಯ ಶ್ರೀ ಪ್ರಶಸ್ತಿಯನ್ನು  ಅರಮನೆ ಮೈದಾನದಲ್ಲಿ ಕೆಪಿಎ ಅಧ್ಯಕ್ಷರಾದ ನಾಗೇಶ್ ಪ್ರಶಸ್ತಿ ಪ್ರಧಾನ ಮಾಡಿದರು.ಈ ವೇಳೆ ದಾವಣಗೆರೆ ಜಿಲ್ಲಾ ಛಾಯಾಗ್ರಕರ ಸಂಘದ ಕಾರ್ಯದರ್ಶಿ ರಾಜು, ದಾವಣಗೆರೆ ತಾಲೂಕು ಫೋಟೋಗ್ರಾಫರ್ ಯೂತ್ ವೆಲ್ಫೇರ್  ಅಸೋಸಿಯೇಷನ್ ಅಧ್ಯಕ್ಷರಾದ ಶ್ರೀನಾಥ್ ಅಗಡಿ ಹಾಗೂ ದಾವಣಗೆರೆ ಛಾಯಾಗ್ರಾಹಕರ ಸಹಕಾರ ಸಂಘದ ಅಧ್ಯಕ್ಷರಾದ ತಿಪ್ಪೇಸ್ವಾಮಿ ಎಸ್ ಆರ್ ಪದಾಧಿಕಾರಿಗಳು  ಉಪಸ್ಥಿತರಿದ್ದರು.