ಸಿದ್ಧಕಣ್ಣಿನ ಹನಿ” ಕಾರ್ಯಕ್ರಮ
ಸಂಜೆವಾಣಿ ವಾರ್ತೆ

ದಾವಣಗೆರೆ. ಸೆ.೨೩;  ವಂಶ ಪಾರಂಪರೆಯ ಸಿದ್ಧ ವೈದ್ಯರಾದ ಕೆ. ಮುತ್ತುಕೃಷ್ಣನ್ ಅವರಿಂದ ತಯಾರಿಸಲಾದ ಸಿದ್ದ ಕಣ್ಣಿನ ಹನಿಗಳನ್ನು ಇಲ್ಲಿನ ವಿದ್ಯಾನಗರದ ಶ್ರೀ ಈಶ್ವರ ಪಾರ್ವತಿ ಗಣಪತಿ ದೇವಸ್ಥಾನದಲ್ಲಿ ಸಾರ್ವಜನಿಕರಿಗೆ ಹಾಕಲಾಯಿತು. ಇಂದು ಬೆಳಗಿನಿಂದಲೂ ಸಾರ್ವಜನಿಕರು ಸರತಿ ಸಾಲಿನಲ್ಲಿ ಆಗಮಿಸಿ ಸಿದ್ದಕಣ್ಣಿನ ಹನಿಗಳನ್ನು ಹಾಕಿಸಿಕೊಂಡರು.ಕಣ್ಣಿಗೆ ಹನಿ ಹಾಕುವುದರಿಂದ ಕಣ್ಣಿನಲ್ಲಿ ನೀರು ಬರುತ್ತಿರುವುದು, ಕಣ್ಣುರಿ, ಕಣ್ಣು ಕೆಂಪಾಗುವುದು, ಕಣ್ಣಿನ ಪೊರೆ ಬರುವ ಹಂತದಲ್ಲಿರುವವರು, ಮೈಗ್ರೇನ್ ತಲೆನೋವು ಹಾಗೂ ದೂರದೃಷ್ಟಿ ಮತ್ತು ಸಮೀಪ ದೃಷ್ಟಿಯಲ್ಲಿ ತೊಂದರೆ ಇರುವವರಿಗೆ ಮತ್ತು ಸೂಕ್ಷ್ಮ ಕೆಲಸಗಳಾದ ಚಿನ್ನ ಬೆಳ್ಳಿ ಕೆಲಸಾಗರರು, ಟೈಲರಿಂಗ್ ಕೆಲಸಗಾರರು, ಕಂಪ್ಯೂಟರ್ ಆಪರೇಟರ್ಸ್ ಸೇರಿದಂತೆ ಅನೇಕರು ಹನಿ ಹಾಕಿಸಿಕೊಂಡರು.ಈ ವೇಳೆ ಎಂ. ಮೋಕ್ಷಾನಂದ್,ಬಿ. ಎಸ್. ವೀರೇಶ್, ಕೆ. ಎಂ.ವೀರಭದ್ರಯ,ಎಂ. ಎನ್. ತಿಪ್ಪೇಸ್ವಾಮಿ ಉಪಸ್ಥಿತರಿದ್ದರು.