ವಿಜೃಂಭಣೆಯಿಂದ ಜರುಗಿದ ಶ್ರೀ ವಾಸವಾಂಬ ಜಯಂತ್ಯೋತ್ಸವ

ಸಂಜೆವಾಣಿ ವಾರ್ತೆ
ದಾವಣಗೆರೆ.ಮೇ.೧೮: ನಗರದ ಶ್ರೀ ಕನ್ಯಕಾಪರಮೇಶ್ವರಿ ದೇವಸ್ಥಾನದಲ್ಲಿ ಇಂದು ಶ್ರೀ ವಾಸವಾಂಬ ಜಯಂತ್ಯೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.ವೈಶಾಖ ಶುದ್ಧ ದಶಮಿಯ ಸುದಿನವಾದ  ಇಂದು  ಆರ್ಯವೈಶ್ಯ ಕುಲದೇವತೆ ವಾಸವಿಯ ಜನ್ಮದಿನವಾಗಿದ್ದು, ಬೆಳಿಗ್ಗೆ 6 ಗಂಟೆಗೆ  ದೇವಿಗೆ ಸುಪ್ರಭಾತ, ಕಾಕಡಾರತಿ, ಅಭ್ಯಂಗ ಸ್ನಾನ, ಪಂಚಾಮೃತ ಅಭಿಷೇಕ, ಪೂರ್ವಭಾವಿ ಅಭಿಷೇಕ, ಅಲಂಕಾರ ನೆರವೇರಿತು.ಬೆಳಿಗ್ಗೆ 8 ಗಂಟೆಗೆ ಅಮ್ಮನವರ ಹಾಗೂ ನಗರೇಶ್ವರ ದೇವರ ಉತ್ಸವ ಮೂರ್ತಿಗೆ ಭಕ್ತರಿಂದ ಕ್ಷೀರಾಭಿಷೇಕ ನಂತರ ಬೆಳಿಗ್ಗೆ 11 ಗಂಟೆಗೆ ಪುರಾಣ ಪ್ರವಚನ,  ತೊಟ್ಟಿಲು ಸೇವೆ, ಜನ್ಮೋತ್ಸವ, ಕುಂಕುಮಾರ್ಚನೆ, ನೈವೇದ್ಯ, ಮಹಾಮಂಗಳಾರತಿ, ಮಂತ್ರಪುಷ್ಪ, ಅಷ್ಟಾವಧಾನ ಹಾಗೂ ಸೇವಾಕರ್ತೃಗಳಿಂದ ತೊಟ್ಟಿಲು ಸೇವೆ ನೆರವೇರಿತು.ನಂತರ ಮಂಗಳಾರತಿ, ಪ್ರಸಾದ ವಿನಿಯೋಗ ಹಮ್ಮಿಕೊಳ್ಳಲಾಗಿತ್ತು. ಸಂಜೆ 6 ಗಂಟೆಗೆ ಭವ್ಯ ಮಂಟಪದಲ್ಲಿ ಶ್ರೀ ಕನ್ಯಕಾಪರಮೇಶ್ವರಿ ಅಮ್ಮನವರ ಉತ್ಸವ ಮೂರ್ತಿ ಮೆರವಣಿಗೆ ರಾಜಬೀದಿಗಳಲ್ಲಿ ಸಂಚರಿಸಲಿದೆ.