ನೂತನ ದೇವಾಲಯಕ್ಕೆ ಸಚಿವ ಡಿ.ಸುಧಾಕರ್ ಭೇಟಿ

ಸಂಜೆವಾಣಿ ವಾರ್ತೆ
ಹಿರಿಯೂರು : ಮೇ 18 – ತಾಲೂಕಿನ ಆಲೂರು ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಶ್ರೀ ರಾಮಾಂಜನೇಯ ಸ್ವಾಮಿ ಶಿಲಾಮಯ ದೇವಸ್ಥಾನ ಕ್ಕೆ ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವರು  ಹಾಗೂ ಯೋಜನೆ ಮತ್ತು ಸಾಂಖ್ಯಿಕ ಖಾತೆಯ ಸಚಿವರಾದ ಡಿ ಸುಧಾಕರ್  ಭೇಟಿ ನೀಡಿ; ಉತ್ತಮ ಮಳೆ ಬೆಳೆಯಾಗಲಿ ಸುಖ ಶಾಂತಿ ಸಮೃದ್ಧಿ ನೆಲೆಸಲಿ ಎಂದು ಶ್ರೀ ರಾಮಾಂಜನೇಯ ಸ್ವಾಮಿ ದೇವರಿಗೆ ಪ್ರಾರ್ಥಿಸಿದರು. ನೂತನ ದೇವಾಲಯದ ಪ್ರಾರಂಭೋತ್ಸವದ ಹಿನ್ನೆಲೆಯಲ್ಲಿ  ನವಗ್ರಹ ಪುರಸರ, ಮಹಾ ಗಣಪತಿ, ಮೃತ್ಯುಂಜಯ, ದಿಕ್ಪಾಲಕ ದೇವತಾ ದುರ್ಗಾದೇವಿ ಸಾದ್ಗುಣ್ಯ ದೇವತಾ ಸಹಿತ ಪ್ರಧಾನ ಹೋಮ ಹಾಗೂ ವಿವಿಧ ಧಾರ್ಮಿಕ ಪೂಜಾ ಕಾರ್ಯಕ್ರಮಗಳು ನಡೆಯಿತು ಆಲೂರು ಗ್ರಾಮ ಸೇರಿದಂತೆ ಸುತ್ತಮುತ್ತಲ ಗ್ರಾಮಸ್ಥರು ಹಾಗೂ ನಾನಾ ಭಾಗಗಳಿಂದ ಬಂದಿದ್ದ ಭಕ್ತರು ಪೂಜಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು.