ನಾಲ್ವರು ಕಳ್ಳರ ಬಂಧನ
ಲಕ್ಷ್ಮೇಶ್ವರ, ಮೇ18: ಸಮೀಪದ ಶಿಗ್ಲಿ ಗ್ರಾಮದಲ್ಲಿ ಮನೆಯೊಂದರ ಬಾಗಿಲು ಕೀಲಿ ಮುರಿದು ಟ್ರೇಜರಿಯಲ್ಲಿ ಇರಿಸಿದ್ದ 41 ಗ್ರಾಂ ಬಂಗಾರದ ಆಭರಣಗಳನ್ನು ಹಾಗೂ 1 ಲಕ್ಷ ನಗದನ್ನು ಕಳ್ಳತನ ಮಾಡಿ ಪರಾರಿಯಾಗಿದ್ದ ನಾಲ್ವರು ಕಳ್ಳರನ್ನು ಪಟ್ಟಣದ ಪೆÇಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಪಿಎಸ್‍ಐ ಈರಣ್ಣ ರಿತ್ತಿ ತಿಳಿಸಿದ್ದಾರೆ.
ಈ ಕುರಿತು ಮಾಹಿತಿ ನೀಡಿದ ಅವರು ಕಳ್ಳರು ಶಿರಹಟ್ಟಿ ತಾಲೂಕಿನ ಬೆಳ್ಳಟ್ಟಿ ಗ್ರಾಮದ ಬಸವರಾಜ ಮೊಡಿಕೇರ, ಶೇಖಪ್ಪ ಮೊಡಿಕೇರ, ಮಂಜುನಾಥ ಮೊಡಿಕೇರ, ಹಾಗೂ ನಾಗರಾಜ ಮೊಡಿಕೇರ ಎಂದು ತಿಳಿಸಿದರು.
ಬಂಧಿತ ಕಳ್ಳರಿಂದ 41 ಗ್ರಾಂ ಮೌಲ್ಯದ ಬಂಗಾರದ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ.
ಅಲ್ಲದೆ ಬಂಧಿತ ಕಳ್ಳರಿಂದ ಗುತ್ತಲ ಪೆÇಲೀಸ್ ಠಾಣೆಯ ವ್ಯಾಪ್ತಿಯಲ್ಲಿನ ನೀರಲಗಿ ಗ್ರಾಮದಲ್ಲಿ ಕಳ್ಳತನ ಮಾಡಿದ್ದು ಒಂದು ಬೈಕ್ ಹಾಗೂ ಶಿಗ್ಗಾಂವಿ ತಾಲೂಕಿನ ಮಂಡಿಗನಾಳ ಗ್ರಾಮದಲ್ಲಿ ಕಳ್ಳತನ ಮಾಡಿದ್ದ ಬೈಕ್ ನನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಿದ ಅವರು ಈ ಕಾರ್ಯದಲ್ಲಿ ಸಿಪಿಐ ನಾಗರಾಜ್ ಮಾಡಳ್ಳಿ, ಪಿಎಸ್‍ಐ ಈರಣ್ಣ ರಿತ್ತಿ, ಚನ್ನಬಸವ ಬಬಲಿ, ಎಎಸ್‍ಐ ಎ.ಎಂ.ಮೌಲ್ವಿ, ಗುರು ಬೂದಿಹಾಳ, ಆರ್.ಎಸ್.ಯರಗಟ್ಟಿ, ಎಂ.ಎ.ಶೇಖ, ಎಂ.ಎಸ್.ಬಳ್ಳಾರಿ, ಆನಂದ ಕಮ್ಮಾರ, ಸಿ.ಎಸ್.ಮಠಪತಿ, ಡಿ.ಎಸ್.ನದಾಫ್, ಗಣೇಶ ಗ್ರಾಮ ಪುರೋಹಿತ, ಎಚ್.ಐ.ಕಲ್ಲಣ್ಣವರ, ಪಾಂಡುರಂಗ ರಾವ್, ಮಧುಚಂದ್ರ ಧಾರವಾಡ, ಸಂಜು ಕೊರಡೂರ ಅಪ್ಪಣ್ಣ ರಾಥೋಡ್, ಹನಮರೆಡ್ಡಿ ತಾರಿಕೊಪ್ಪ ಪಾಲ್ಗೊಂಡಿದ್ದು ಇವರ ಸಾಧನೆಗೆ ಎಸ್.ಪಿ.ಬಿ.ಎಸ್.ನೇಮಗೌಡರ ಹಾಗೂ ಸಿಬ್ಬಂದಿ ವರ್ಗ ಅಭಿನಂದಿಸಿದ್ದಾರೆ.