ಮೃತ ಮಕ್ಕಳ ಪಾಲಕರಿಗೆ ಸಾಂತ್ವನ
ಗದಗ, ಮೇ18: ಇತ್ತೀಚೆಗೆ ವಿಜಯಪುರದಲ್ಲಿ ಜರುಗಿದ ದುರ್ಘಟನೆಯಲ್ಲಿ ಗದಗ ನಗರದ ಇಬ್ಬರು ಮಕ್ಕಳು ಮೃತರಾಗಿದ್ದರು.
ಶುಕ್ರವಾರ ಮೃತ ಮಕ್ಕಳ ಮನೆಗೆ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶೇಖರಗೌಡ ರಾಮತ್ನಾಳ ಅವರು ಭೇಟಿ ನೀಡಿ ಸಾಂತ್ವನ ಹೇಳಿದರು. ಈ ವೇಳೆ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿಗಳು ಇದ್ದರು.
ನಂತರ ಅವರು ನಗರದ ಬೀಷ್ಮಕೆರೆ ವೀಕ್ಷಿಸಿ, ಸಾರ್ವಜನಿಕರ ಹಿತದೃಷ್ಟಿಯಿಂದ ಕೆರೆ ಸುತ್ತಲು ಸಂರಕ್ಷಣಾ ಕ್ರಮಗಳನ್ನು ಕೈಗೊಳ್ಳಲು ನಗರಸಭೆ ಮುಂದಾಗಬೇಕು ಎಂದರು.