ಟ್ರ್ಯಾಕ್ಟರ್ ರೋಟರಿಗೆ ಸಿಲುಕಿ ಬಾಲಕ ಮೃತ
ಸಂಜೆವಾಣಿ ವಾರ್ತೆ
ನಂಜನಗೂಡು,ಮೇ18:- ಟ್ರ್ಯಾಕ್ಟರ್ ರೋಟರಿಗೆ ಸಿಲುಕಿ ಬಾಲಕ ಮೃತಪಟ್ಟ ದುರಂತ ಘಟನೆ ನಂಜನಗೂಡು ತಾಲೂಕಿನ ದೇವರಸನಹಳ್ಳಿ ಗ್ರಾಮದಲ್ಲಿ ನಡೆದಿದೆ. ಭವಿಷ್ (8)ಮೃತ ಬಾಲಕ.ಶಾಲೆ ರಜಾ ಹಿನ್ನೆಲೆಯಲ್ಲಿ ತನ್ನ ಅಜ್ಜಿ ಮನೆಗೆ ಬಂದಿದ್ದ ಭವಿಷ್.ತಾಯಿ ಮಮತಾ ದೇವರಸ ಹಳ್ಳಿಯಿಂದ ಚಾಮರಾಜನಗರಕ್ಕೆ ಮದುವೆಯಾಗಿದ್ದರು.
ಶಾಲಾ ರಜೆ ಕಳೆಯಲು ತನ್ನ ಎರಡು ಮಕ್ಕಳೊಂದಿಗೆ ತಾಯಿ ಮನೆ ದೇವರಸನಹಳ್ಳಿಗೆ ಬಂದಿದ್ದರು.ಮೃತ ಬಾಲಕನ ಸೋದರ ಮಾವ ನನ್ನ ತಂಗಿಯ ಎರಡು ಮಕ್ಕಳನ್ನು ಜಮೀನಿಗೆ ಕರೆದುಕೊಂಡು ಹೋಗಿದ್ದರು ಎನ್ನಲಾಗಿದೆ.ಜಮೀನಿನಲ್ಲಿ ಉಳುಮೆ ಮಾಡುವ ಸಂದರ್ಭದಲ್ಲಿ ಬಾಲಕ ಭವಿಷ್ ಹಾಗೂ ಆತನ ಸಹೋದರಿಯನ್ನು ಟ್ರ್ಯಾಕ್ಟರ್ ಮೇಲೆ ಕೂರಿಸಲಾಗಿದೆ.ಈ ವೇಳೆ ಬಾಲಕ ಭವಿಷ್ ಟ್ರ್ಯಾಕ್ಟರ್ ನಿಂದ ಆಯತಪ್ಪಿ ಕೆಳಗೆ ಬಿದ್ದು ರೋಟರಿಗೆ ಸಿಲುಕಿದಾಗ ದೇಹ ತುಂಡು ತುಂಡಾಗಿ ಸ್ಥಳದಲ್ಲಿಯೇ ಮೃತ ಪಟ್ಟಿದ್ದಾನೆ.