ಮೈಸೂರು ನ್ಯಾಯಾಲಯದ ಆವರಣದಲ್ಲಿ ಆಚಾರ್ಯತ್ರಯರ ಜಯಂತಿ
ಸಂಜೆವಾಣಿ ನ್ಯೂಸ್
ಮೈಸೂರು.ಮೇ.18:- ಮೈಸೂರು ವಕೀಲರ ಸಂಘ ಹಾಗೂ ಕರ್ನಾಟಕ ವಿಪ್ರ ವಕೀಲರ ಟ್ರಸ್ಟ್ ಸಹಯೋಗದೊಂದಿಗೆ ನ್ಯಾಯಾಲಯದ ಆವರಣದಲ್ಲಿ ಆಚಾರ್ಯತ್ರಯರಾದ ಶ್ರೀ ಶಂಕರಾಚಾರ್ಯರು ಹಾಗೂ ಶ್ರೀ ರಾಮಾನುಜಾಚಾರ್ಯರು ಮತ್ತು ಮಧ್ವಾಚಾರ್ಯರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಆಚಾರ್ಯತ್ರಯರ ಜಯಂತಿಯನ್ನು ಆಚರಿಸಲಾಯಿತು, ಮುಖ್ಯ ಭಾಷಣ ಕಾರರಾಗಿ ಹೆಸರಾಂತ ವಕೀಲರಾದಂತ ಮೇದಪ್ಪ ಹಾಗೂ ಎನ್ ಪ್ರಭಾಕರ್ ರವರು ನಡೆಸಿಕೊಟ್ಟರು,
ಇದೇ ಸಂದರ್ಭದಲ್ಲಿ ಹಿರಿಯ ವಕೀಲರಾದ ಎ.ಎಸ್. ನಟರಾಜ್, ಪಿ ಡಿ ಮೇದಪ್ಪ, ಕೆ.ಆರ್. ಶಿವಶಂಕರ್, ವಿ ಮೈಥಿಲಿ, ಎಂ ಎಸ್ ಸಾವಿತ್ರಿ, ವರದರಾಜು, ದುರ್ಗಾ ಪ್ರಸಾದ್, ರವರನ್ನು ಸನ್ಮಾನಿಸಲಾಯಿತು.
ಸಂಘದ ಅಧ್ಯಕ್ಷರಾದ ಲೋಕೇಶ್ ಹಾಗೂ ಕಾರ್ಯದರ್ಶಿ ಸುಧೀರ್ ಹಾಗೂ ವಿಪ್ರ ವಕೀಲರ ಟ್ರಸ್ಟ್ ಅಧ್ಯಕ್ಷರಾದ ಸಂಗಮೇಶ್ವರ, ರವಿಚಂದ್ರನ್, ಶಿವಶಂಕರ್, ಲಕ್ಷ್ಮಿ, ಜಯಶ್ರೀ ಶಿವರಾಮ್, ಲಕ್ಷ್ಮಿ ಪ್ರಸಾದ್, ಬಾಲಕೃಷ್ಣ, ರಾಜಲಕ್ಷ್ಮಿ, ಬೆಂಗಳೂರಿನ ಹೈಕೋರ್ಟ್ ವಕೀಲರಾದ ದುರ್ಗಾ ಪ್ರಸಾದ್, ಹಾಗೂ ಇತರರು ಉಪಸ್ಥಿತರಿದ್ದರು.