ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಮಹಿಳೆ ಸಾವು
ವಿಜಯಪುರ, ಮೇ ೧೮: ಕೋಲಾರದಿಂದ ಚಿಕ್ಕಬಳ್ಳಾಪುರ ನಗರಕ್ಕೆ ಚಲಿಸುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯೊಬ್ಬರು ಹೃದಯಘಾತದಿಂದ ಸಾವನ್ನಪ್ಪಿರುವ ಘಟನೆ ವಿಜಯಪುರದಲ್ಲಿ ನಡೆದಿದೆ.
ಮೃತ ಮಹಿಳೆ ಚಿಕ್ಕಬಳ್ಳಾಪುರದ ಸೈಯದ್ ಬಾನು ಎಂದು ಗುರ್ತಿಸಲಾಗಿದ್ದು, ವಿಜಯಪುರ ಬಸ್ ನಿಲ್ದಾಣದ ಬಳಿ ಪ್ರಯಾಣಿಕರನ್ನು ಇಳಿಸುವ ವೇಳೆಯಲ್ಲಿ ಗಮನಕ್ಕೆ ಬಂದಿದೆ. ಚಾಲಕ ಬಸ್ ಅಲ್ಲೇ ನಿಲ್ಲಿಸಿದ್ದಾನೆ. ಇನ್ನು ಈ ವಿಷಯ ತಿಳಿದ ಕೂಡಲೇ ಕೆಎಸ್‌ಆರ್‌ಟಿಸಿ ಬಸ್ ಎದುರು ನೂರಾರು ಸಂಖ್ಯೆಯಲ್ಲಿ ಜನರು ಜಮಾಯಿಸಿದ್ದರು.
ಸ್ಥಳಕ್ಕೆ ಪಟ್ಟಣದ ಪೋಲಿಸ್ ಸಿಬ್ಬಂದಿ ಆಗಮಿಸಿ, ಮೃತರ ಕುಟುಂಬ ವರ್ಗದವರಿಗೆ ವಿಷಯ ತಲುಪಿಸಿ, ಮುಂದಿನ ತನಿಖೆ ಕೈಗೊಂಡಿದ್ದಾರೆ.