ಬದಲಾವಣೆ ಬಯಸಿದ್ದಾರೆ ಶಿಕ್ಷಕರು:ಪೂರ್ಣಿಮಶ್ರೀನಿವಾಸ್
ಕೆಜಿಎಫ್, ಮೇ ೧೮- ಆಗ್ನೇಯ ಶಿಕ್ಷಕರ ಕ್ಷೇತ್ರಕ್ಕೆ ಒಳಪಡುವ ೩೩ ತಾಲ್ಲೂಕುಗಳಲ್ಲಿರುವ ಶಿಕ್ಷಕರು ಬದಲಾವಣೆಯನ್ನು ಬಯಸಿದ್ದಾರೆ ಆದ್ದರಿಂದ ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡಿ ತೊರಿಸಿರುವ ನಮ್ಮ ತಂದೆ ಹಾಘು ನನ್ನ ಪತಿ ಶ್ರೀನಿವಾಸ್ ರವರ ಕೈಹಿಡಿಯಲಿದ್ದಾರೆ ಎಂಬ ನಂಬಿಕೆ ಇದ್ದು ನಾನು ಎಲ್ಲಾ ತಾಲ್ಲೂಕುಗಳಿಗೂ ಭೇಟಿ ನೀಡಿದ್ದು ಶಿಕ್ಷಕರು ಓಮ್ಮೆ ಬದಲಾವಣೆ ಮಾಡಬೇಕು ಎಂಬ ಚಿಂತನೆಯಲ್ಲಿ ಇದ್ದಾರೆ ಎಂದು ಹಿರಿಯೂರು ವಿಧಾನಸಭೆ ಕ್ಷೇತ್ರದ ಮಾಜಿ ಶಾಸಕಿ ಆಗ್ನೇಯ ಶಿಕ್ಷಕರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ ಪತ್ನಿ ಪೂರ್ಣಿಮ ಹೇಳಿದರು.
ಆಗ್ನೇಯ ಶಿಕ್ಷಕರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ್ ಪರವಾಗಿ ಅವರ ಪತ್ನಿ ಹಿರಿಯೂರು ವಿಧಾನಸಭೆ ಕ್ಷೇತ್ರದ ಮಾಜಿ ಶಾಸಕಿ ಪೂರ್ಣಿಮ ರವರು ಕೆಜಿಎಫ್ ವಿಧಾನಸಭೆಗೆ ಭೇಟಿ ನೀಡಿ ಜೈನ್ ಕಾಲೇಜು ಸೇರಿದಂತೆ ವಿವಿಧ ಶಿಕ್ಷಣ ಸಂಸ್ಥೆಗಳಿಗೆ ಭೇಟಿ ನೀಡಿ ಶಿಕ್ಷಕರ ಬಳಿ ಮತಯಾಚನೆ ಮಾಡಿ ಶಾಸಕಿ ರೂಪಕಲಾಶಶಿಧರ್ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಮಾಜಿ ಶಾಸಕಿ ಪೂರ್ಣಿಮ ಶ್ರೀನಿವಾಸ್, ಸರ್ಕಾರಿ ಹಾಗೂ ಖಾಸಗಿ ಶಿಕ್ಷಕರು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದು ಅವರುಗಳ ಸಮಸ್ಯೆಗಳನ್ನು ರಾಜ್ಯದ ಕಾಂಗ್ರೆಸ್ ಸರ್ಕಾರದ ಗಮನ ಸೇಳೆದಿದ್ದು ಸರ್ಕಾರ ಸಹ ಶಿಕ್ಷಕರು ಹಲವು ದಿನಗಳಿಂದ ಎನ್.ಪಿ.ಎಸ್ ರದ್ದುಪಡಿಸಿ ಹಳೆ ಪಿಂಚಣಿ ವ್ಯವಸ್ತೆಯನ್ನು ಜಾರಿಗೊಳಿಸಬೇಕು ಎಂಬ ಕೂಗಿಗೆ ಕಳೆದ ವಿಧಾನಸಭೆ ಚುನಾವನೆಯ ಪ್ರಣಾಣಿಕೆಯಲ್ಲೇ ಆಶ್ವಾಸನೆ ನೀಡಿತ್ತು ಆದರೆ ಲೋಕಸಭೆ ಚುನಾವಣೆ ಹಿನ್ನಲೆ ತಡವಾಗಿದ್ದು ಚುನಾವಣೆಯ ಫಲಿತಾಂಶ ಬಂದ ನಂತರ ಹಳೆ ಪಿಂಚಣಿ ವ್ಯವಸ್ಥೆಯನ್ನು ಜಾರಿಗೊಳಿಸಲಿದೆ ಮತ್ತು ೭ ನೇ ವೇತನ ಆಯೋಗದ ಆದೇಶವನ್ನು ಜಾರಿಗೆ ತರಲಿದೆ ಮತ್ತು ಇತರೆ ಕೆಲವು ಸಮಸ್ಯೆಗಳ ಬಗ್ಗೆ ಕಾನೂನತ್ಮಕವಾಗಿ ಚರ್ಚೆ ನಡೆಸಿ ಅವುಗಳನ್ನು ಜಾರಿಗೊಳಿಸುವ ಯತ್ನವನ್ನು ಮುಖ್ಯಮಂತ್ರಿಗಳು ಮಾಡಲಿದ್ದಾರೆ. ಆದ್ದರಿಂದ ಆಗ್ನೇಯ ಶಿಕ್ಷಕರ ಕ್ಷೇತ್ರದ ಮತದಾರರು ಅತಿ ಬುದ್ದಿವಂತರಿದ್ದು ನಮಗೂ ಸಹ ಒಮ್ಮೆ ಅವಕಾಶ ನೀಡಲಿದ್ದಾರೆ ಎಂಬ ನಂಬಿಕೆ ಇದೆ ಎಂದು ಹೇಳಿದರು.
ಇದೇ ವೇಳೆ ಶಾಸಕಿ ರೂಪಕಲಾಶಶಿಧರ್ ಮಾತನಾಡಿ ಶಿಕ್ಷಣ ಕ್ಷೇತ್ರದಲ್ಲಿ ದಿವಂಗತ ಕೃಷ್ಣಪ್ಪ ರವರು ಕ್ರಾಂತಿಯನ್ನೇ ಮಾಡಿದ್ದಾರೆ ಅವರು ಹಾಕಿಕೊಟ್ಟ ಹಾದಿಯಲ್ಲೇ ಪುತ್ರಿ ಪೂರ್ಣಿಮ ಶ್ರೀನಿವಾಸ್ ಕೆಲಸ ಮಾಡುತ್ತಾ ಸಾವಿರಾರು ಮಕ್ಕಳಿಗೆ ವಿಧ್ಯಾಧಾನವನ್ನು ಮಾಡುತ್ತಿದ್ದಾರೆ ಮತ್ತು ಹಿರಿಯೂರು ಕ್ಷೇತ್ರದಲ್ಲಿ ಶಾಸಕಿಯಾಗಿ ಸೇವೆ ಸಲ್ಲಿಸಿದ್ದಾರೆ ಆದ್ದರಿಂದ ಕಾಂಗ್ರೆಸ್ ಪಕ್ಷ ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡಿರುವುದನ್ನು ಗಮನಿಸಿ ಈ ಭಾರಿ ಶ್ರೀನಿವಾಸ್ ರವರಿಗೆ ಟಿಕೇಟ್ ನೀಡಿದ್ದು ಕೆಜಿಎಫ್ ವಿಧಾನಸಭೆ ಕ್ಷೇತ್ರದಲ್ಲಿ ಸರಿ ಸುಮಾರು ೭೦೦ ಮತಗಳು ಇದ್ದು ಅತಿ ಹೆಚ್ಚು ಮತಗಳು ಲಭಿಸಲಿದೆ ಎಂಬ ನಂಬಿಕೆ ಇದೆ ಶಿಕ್ಷಕರಲ್ಲೂ ಸಹ ಆಡಳಿತರೂಡ ಪಕ್ಷದ ಪರವಾಗಿ ಮತ ನೀಡಿದರೆ ನಮ್ಮ ಸಮಸ್ಯೆಗಳು ಭಗೆಹರಿಸಲು ಸುಲಭವಾಗಲಿದೆ ಎಂಬ ನಂಬಿಕೆಯಲ್ಲಿರುವುದರಿಂದ ನಮ್ಮ ಪರವಾಗಿ ಮತ ನೀಡಲಿದ್ದಾರೆ ಎಂಬ ನಂಬಿಕೆ ಇದೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ನಿವೃತ್ತ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಗೋವಿದರಾಜು ,ಕೆಪಿಸಿಸಿ ಸದಸ್ಯ ಶ್ರೀನಿವಾಸ್,ವಕೀಲ ಪದ್ಮನಾಬರೆಡ್ಡಿ ಹಾಗೂ ಇತರರು ಹಾಜರಿದ್ದರು.