ರಾಜ್ಯದ ಕಾಂಗ್ರೆಸ್ ಸರ್ಕಾರ ವಿಫಲವಾಗಿದೆ: ಸಿ.ಟಿ. ಮಂಜುನಾಥ್
ಸಂಜೆವಾಣಿ ವಾರ್ತೆ
ಮಂಡ್ಯ.ಮೇ.18:- ರಾಜ್ಯಕ್ಕೆ ಬರ ಪರಿಹಾರದ ಹಣವನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ್ದರೂ, ರೈತರಿಗೆ ಸಮರ್ಪಕವಾಗಿ ವಿತರಣೆ ಮಾಡುವಲ್ಲಿ ರಾಜ್ಯದ ಕಾಂಗ್ರೆಸ್ ಸರ್ಕಾರ ವಿಫಲವಾಗಿದೆ ಎಂದು ಜಿಲ್ಲಾ ಬಿಜೆಪಿ ವಕ್ತಾರ ಸಿ.ಟಿ. ಮಂಜುನಾಥ್ ಆರೋಪಿಸಿದರು.
ರಾಜ್ಯದಲ್ಲಿ ಕಳೆದ ಮುಂಗಾರು ಹಂಗಾಮಿನಲ್ಲಿ ಮಳೆ ಕೊರತೆಯಿಂದಾದ ಬೆಳೆ ನಷ್ಟಕ್ಕಾಗಿ ರೈತರಿಗೆ ಪರಿಹಾರ ವಿತರಣೆ ಪ್ರಕ್ರಿಯೆ ಆರಂಭವಾಗಿದೆ. ಕೇಂದ್ರ ಸರಕಾರ ಎನ್‍ಡಿಆರೆಫ್ (ರಾಷ್ಟ್ರೀಯ ವಿಪತ್ತು ನಿರ್ವಹಣಾ ನಿಧಿ)ನಿಂದ ಬಿಡುಗಡೆ ಮಾಡಿರುವ 3,454.22 ಕೋಟಿ ರೂ.ಗಳನ್ನು ಅರ್ಹ ರೈತರಿಗೆ ವಿತರಿಸುವಲ್ಲಿ ನಿರ್ಲಕ್ಷ್ಯ ವಹಿಸಿದೆ ಎಂದು ದೂರಿದರು.
ನೇರ ನಗದು ವರ್ಗಾವಣೆ (ಡಿಬಿಟಿ) ಮೂಲಕ ಫಲಾನುಭವಿ ರೈತರ ಬ್ಯಾಂಕ್ ಖಾತೆಗೆ ಪರಿಹಾರದ ಮೊತ್ತವನ್ನು ನೇರವಾಗಿ ವರ್ಗಾಯಿಸಲು ಅದೇಶಿಸಲಾಗಿದೆ. ಈಗಾಗಲೇ ರಾಜ್ಯ ಸರಕಾರ ಕಳೆದ ಜನವರಿಯಲ್ಲಿ ರೈತರಿಗೆ ಗರಿಷ್ಠ 2 ಸಾವಿರ ರೂ.ವರೆಗೆ ಮಧ್ಯಂತರ ಪರಿಹಾರ ಪಾವತಿಸಿದೆ. ಈಗ ಆ ಮೊತ್ತ ಕಡಿತ ಮಾಡಿಕೊಂಡು ಎಸ್‍ಡಿಆರೆಫ್ (ರಾಜ್ಯ ವಿಪತ್ತು ನಿರ್ವಹಣಾ ನಿಧಿ) ಮಾರ್ಗಸೂಚಿ ಅನ್ವಯ ನಿಗದಿಯಾದ ಬಾಕಿ ಮೊತ್ತ ಜಮಾ ಮಾಡಲು ಸೂಚಿಸಿರುವ ಸರ್ಕಾರದ ರೈತ ವಿರೋಧಿ ನಡೆಯನ್ನು ತೀವ್ರವಾಗಿ ಖಂಡಿಸಿದರು.
ಈ ಹಿಂದೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಕೇಂದ್ರದ 6800 ರೂ.ಗಳ ಜೊತೆಗೆ ರಾಜ್ಯ ಸರ್ಕಾರ 6800 ರೂ.ಗಳನ್ನು ಸೇರಿಸಿ 13,600 ರೂ.ಗಳನ್ನು ನೀಡಿತ್ತು. ಅದೇ ಮಾದರಿಯಲ್ಲಿ ಈಗಲೂ ರೈತರಿಗೆ ವಿತರಣೆ ಮಾಡಬೇಕು ಎಂದು ಆಗ್ರಹಿಸಿದರು.
ಬರ ಪರಿಹಾರಕ್ಕೆ ಪದೇ ಪದೇ ಕೇಂದ್ರದ ಕಡೆ ಕೈ ತೋರುತ್ತಿದ್ದ ರಾಜ್ಯ ಸರ್ಕಾರ ಈಗ ರೈತರಿಗೆ ಪರಿಹಾರ ಕೊಡುವಾಗ ಹಿಂದೆ ರಾಜ್ಯ ಸರ್ಕಾರದ ವತಿಯಿಂದ ನೀಡಿದ್ದ ಎರಡು ಸಾವಿರ ರೂಪಾಯಿಗಳನ್ನು ಕಡಿತಮಾಡಿಕೊಳ್ಳುತ್ತಿರುವುದು, ರೈತರಿಗೆ ಮಾಡಿದ ದ್ರೋಹವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಳೆದ ಹಲವಾರು ತಿಂಗಳುಗಳಿಂದ ಹಾಲು ಉತ್ಪಾದಕರಿಗೆ ಪೆÇರೀತ್ಸಾಹ ಧನ ಬಿಡುಗಡೆ ಮಾಡಿಲ್ಲ. ಇದನ್ನೇ ನಂಬಿಕೊಂಡು ಹೈನುಗಾರಿಕೆಯಲ್ಲಿ ತೊಡಗಿರುವ ರೈತರು ಸಂಕಷ್ಟ ಅನುಭವಿಸುವಂತಾಗಿದೆ ಎಂದು ದೂರಿದರು.
ಈಗಾಗಲೇ ಪಶು ಆಹಾರ, ಮೇವು, ಸಾಕಾಣಿಕೆ ವೆಚ್ಚ ಎಲ್ಲವೂ ದುಬಾರಿಯಾಗಿರುವ ಇಂತಹ ಸಂದರ್ಭದಲ್ಲಿ ಹಾಲು ಉತ್ಪಾದಕರ ನೆರವಿಗೆ ಬರಬೇಕಾದ ಸರ್ಕಾರ ಕನಿಷ್ಠ ಪೆÇರೀತ್ಸಾಹ ಧನವನ್ನೂ ನೀಡದೆ ರೈತರ ಹೊಟ್ಟೆ ಮೇಲೆ ಬರೆ ಎಳೆಯುವ ಪ್ರಯತ್ನ ಮಾಡುತ್ತಿದೆ ಎಂದು ಕಿಡಿಕಾರಿದರು.
ಜನಸಾಮಾನ್ಯರು, ರೈತರು ಮನೆ ಭೋಗ್ಯ, ಸೇರಿದಂತೆ ಇತರೆ ಅವಶ್ಯಕತೆಗಳಿಗಾಗಿ ಸ್ಟಾಂಪ್ ಪೇಪರ್ ಖರೀದಿಸಲು ಹೋದರೂ ಅದರಲ್ಲೂ ಕೈ ಸುಟ್ಟುಕೊಳ್ಳುವಂತಾಗಿದೆ. 1 ಲಕ್ಷದ ಬೋಗ್ಯ ಪತ್ರದ ಸ್ಟಾಂಪ್ ಪೇಪರ್ಗೆ 500ರೂ. ನೀಡಬೇಕಾಗಿದೆ. 5 ಲಕ್ಷದ್ದಾದರೆ 2500 ಜೊತೆಗೆ ಸೇವಾ ಶುಲ್ಕ ಕಟ್ಟಬೇಕಾಗಿದೆ. ಇಷ್ಟು ಹಣವನ್ನು ಎಲ್ಲಿಂದ ತರುತ್ತಾನೆ. ಗ್ಯಾರಂಟಿ ಯೋಜನೆಗಳನ್ನು ನೀಡುತ್ತಿದÉÉ ಎಂದು ಹೇಳುವ ಸರ್ಕಾರ ರೈತರು, ಜನಸಾಮಾನ್ಯರ ಮೇಲೆ ಗದಾಪ್ರಹಾರ ನಡೆಸಿ ಅದರಲ್ಲಿ ದುಪ್ಪಟ್ಟು ವಸೂಲಿ ಮಾಡುತ್ತಿರುವುದು ಸುಳ್ಳೇನಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
200 ಯೂನಿಟ್‍ವರೆಗೆ ಉಚಿತ ವಿದ್ಯುತ್ ನೀಡುವುದಾಗಿ ವಾಗ್ದಾನ ಮಾಡಿದ್ದ ಕಾಂಗ್ರೆಸ್ ಇದೀಗ ಅವರು ಉಪಯೋಗಿಸುತ್ತಿದ್ದ ಸರಾರಿ ಯೂನಿಟ್‍ಗೆ ಮಾತ್ರ ಉಚಿತ ನೀಡಿ ಹೆಚ್ಚುವರಿ ಬಳಕೆಗೆ ವಿದ್ಯುತ್ ದುಬಾರಿ ಹಣವನ್ನು ವಸೂಲಿ ಮಾಡುತ್ತಿರುವುದನ್ನು ಜನತೆ ಗಮನಿಸುತ್ತಿದ್ದು, ಸೂಕ್ತ ಸಮಯದಲ್ಲಿ ಜನರು ಸೂಕ್ತ ತೀರ್ಮಾನ ಕೈಗೊಳ್ಳುತ್ತಾರೆ ಎಂದು ಎಚ್ಚರಿಕೆ ನೀಡಿದರು.