ಪಿರಿಯಾಪಟ್ಟಣದಲ್ಲಿ ಭಾರಿ ಮಳೆಗೆ ಜನಜೀವನ ಅಸ್ತವ್ಯಸ್ತ ಮನೆಗೆ ನುಗ್ಗಿದ ನೀರು ಅಪಾರ ಪ್ರಮಾಣದಲ್ಲಿ ಹಾನಿ
ಸಂಜೆವಾಣಿ ವಾರ್ತೆ
ಪಿರಿಯಾಪಟ್ಟಣ.ಮೇ.18:- ಪಟ್ಟಣದಲ್ಲಿ ಇಂದು ಸಂಜೆ ಸುರಿದ ಭಾರಿ ಮಳೆಗೆ ತಗ್ಗು ಪ್ರದೇಶದಲ್ಲಿ  ಇರುವ ಮನೆಗಳಿಗೆ ನುಗ್ಗಿದ ಮಳೆ ನೀರು ಭಾರಿ ಪ್ರಮಾಣದಲ್ಲಿ ಅನಾಹುತ ಸೃಷ್ಟಿ ಮಾಡಿದೆ ಪಟ್ಟಣದ ರುದ್ರಪ್ಪ ಬಡಾವಣೆ ಶಿವಪ್ಪ ಬಡಾವಣೆ ಚತ್ರದ ಬೀದಿ ಸೇರಿದಂತೆ ಅನೇಕ ತಗ್ಗು ಪ್ರದೇಶದ ಮನೆಗಳಿಗೆ ಬಾರಿ ಪ್ರಮಾಣದ ಮಳೆ ನೀರು, ನುಗ್ಗಿ ಮನೆಯ ಪಾತ್ರೆ ಪಗಡೆಗಳು ಕೊಚ್ಚಿ ಹೋಗಿರುವ ಸುದ್ದಿ ವರದಿಯಾಗಿದೆ.
ವಿಶೇಷವಾಗಿ ಚತ್ರದ ಬೀದಿಯಲ್ಲಿರುವ ರಾಮಕೃಷ್ಣ ಎಂಬುವರ ಮನೆಗೆ ನುಗ್ಗಿದ ಮಳೆ ನೀರು ಸಿಲೆಂಡರ್ ಸೇರಿದಂತೆ ಪಾತ್ರ ಪಗಡೆಗಳನ್ನು ಕೊಚ್ಚಿಕೊಂಡು ಹೋಗಿದ್ದು ಅಪಾರ ಪ್ರಮಾಣದ ಹಾನಿ ಉಂಟಾಗಿದೆ  
 ಚತ್ರದ ಬೀದಿಯಲ್ಲಿರುವ ಕುಂಬಾರಕಟ್ಟೆ ಯಲ್ಲಿ ಪ್ರತಿ ವರ್ಷ ಮಳೆ ನೀರು ಹರಿದು ಅಕ್ಕಪಕ್ಕದ ಮನೆಗಳಿಗೆ ಅಪಾರ ಪ್ರಮಾಣದಲ್ಲಿ ನೀರು ನುಗ್ಗಿ ಹಾನಿಯಾಗುತ್ತಿದ್ದರೂ ಸಹ ಇದರ ಬಗ್ಗೆ ಜನಪ್ರತಿನಿಧಿಗಳಾಗಲಿ ಅಧಿಕಾರಿಗಳಾಗಲಿ, ಯಾರು ಸಹ ಇದರ ಬಗ್ಗೆ ಗಮನ ಹರಿಸುತ್ತಿಲ್ಲ.
ಪ್ರತಿ ವರ್ಷ ಮಳೆಗಾಲದಲ್ಲಿ ಇಲ್ಲಿನ ನಿವಾಸಿಗಳು ಬಾರಿ ಸಂಕಷ್ಟಗಳನ್ನು ಅನುಭವಿಸುತ್ತಿದ್ದಾರೆ ಜೀವ ಇದರಿಂದ ಜೀವ ಹಾನಿಯಾದರೆ ಯಾರು ಹೊಣೆ ಎಂದು ಇಲ್ಲಿನ ನಿವಾಸಿ ಪುಟ್ಟರಾಜು ಅಧಿಕಾರಿಗಳ ಹಾಗೂ ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.