ಸರ್ಕಾರಿ ಆಸ್ಪತ್ರೆಗೆ ಲೋಕಾ ಅಧಿಕಾರಿ ಭೇಟಿ: ಬಡ ಜನರಿಗೆ ಉತ್ತಮ ಚಿಕಿತ್ಸೆ ನೀಡಿ
ಸಂಜೆವಾಣಿ ವಾರ್ತೆ
ಹುಮನಾಬಾದ್:ಮೇ.18:ಲೋಕಾಯುಕ್ತದ ಕಲಬುರಗಿ ಡಿವೈಎಸ್ಪಿ ಆಯಂಟನಿ ಜಾನ್ ಹಾಗೂ ಇತರೆ ಅಧಿಕಾರಿಗಳು ನಗರದಲ್ಲಿನ ತಾಲ್ಲೂಕು ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿ ವ್ಯವಸ್ಥೆ ಪರಿಶೀಲಿಸಿದರು.
ಆಸ್ಪತ್ರೆಯಲ್ಲಿನ ಊಟದ ವ್ಯವಸ್ಥೆ, ಹಾಸಿಗೆಗಳ ಕೊಠಡಿ, ಸ್ಕ್ಯಾನಿಂಗ್ ಮಷೀನು, ಹೊರ ಮತ್ತು ಒಳ ರೋಗಿಗಳಿಗೆ ದೊರಕುವ ಸೌಲಭ್ಯಗಳು ಇತ್ಯಾದಿಯ ಬಗ್ಗೆ ಮಾಹಿತಿ ಪಡೆದುಕೊಂಡರು. ಕೆಲ ಸಿಬ್ಬಂದಿಯವರು ಗೈರಿಗೆ ಕಾರಣವೇನು ಎಂದು ಪ್ರಶ್ನಿಸಿದರು.
ಎಲ್ಲೆಡೆ ಸ್ವಚ್ಛತೆ ಕಾಪಾಡಬೇಕು. ರೋಗಿಗಳಿಗೆ ಸರ್ಕಾರದ ಎಲ್ಲ ಸೌಲಭ್ಯ ಒದಗಿಸಬೇಕು. ಯಾವುದೇ ಕಾರಣಕ್ಕೂ ತಾರತಮ್ಯ ಸಲ್ಲದು. ಸಿಬ್ಬಂದಿಯವರು ನಿಯಮಿತವಾಗಿ ಕರ್ತವ್ಯ ನಿರ್ವಹಿಸುವಂತೆ ಕ್ರಮ ತೆಗೆದುಕೊಳ್ಳಬೇಕು’ ಎಂದು ಆಸ್ಪತ್ರೆ ಮುಖ್ಯ ವೈದ್ಯಾಧಿಕಾರಿ ನಾಗನಾಥ ಹುಲಸೂರೆ ಹಾಗೂ ತಾಲೂಕು ವೈದ್ಯಾಧಿಕಾರಿ ಶಿವಕುಮಾರ ಸಿದ್ದೇಶ್ವರ, ಅವರಿಗೆ ಸೂಚಿಸಿದರು.
ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಅಹವಾಲು ಸ್ವೀಕಾರ ಸಭೆಯಲ್ಲಿ ಮಾತನಾಡಿ ಸರ್ಕಾರದಿಂದ ಸಂಬಳ ಪಡೆಯುವವರು ಗಿಂಬಳಕ್ಕಾಗಿ ಕೈಚಾಚಿ ಸಾರ್ವಜನಿಕರನ್ನು ಅನಗತ್ಯ ಅಲೆದಾಡಿಸುವುದು ಶಿಕ್ಷಾರ್ಹ ಅಪರಾಧ ಅಂತಹ ದುಷ್ಕøತ್ಯಕ್ಕೆ ಕೈಹಾಕಿ ಇಡೀ ನೌಕರರ ಸಮುದಾಯಕ್ಕೆ ಮುಜುಗರ ಉಂಟು ಮಾಡಬಾರದು ಎಂದರು.
ರೀತಿಂದು ಹಂತದಲ್ಲಿ ಮೇಲಾಧಿಕಾರಿಗಳು ಉತ್ತಮ ಆಮೀಷೆಗೆ ಒಳಗಾಗಿ ಜನರು ತೊಂದರೆಯನ್ನು ಅನುಭವಿಸುತ್ತಿರುವ ಘಟನೆಗಳು ದಿನನಿತ್ಯ ಸಾಕಷ್ಟು ಸಂಭವಿಸುತ್ತಿದ್ದರೂ ಅಧಿಕಾರಿ, ಸಿಬ್ಬಂದಿ ಈಗಲೂ ಜಾಗೃತರಾಗದೇ ಇರುವುದು ನೋವಿನ ಸಂಗತಿ. ಇನ್ನೊಬ್ಬರಿಗೆ ಹಿಂಸೆ ನೀಡಿ ಪಡೆಯುವ ಗಿಂಬಳ ಹಣದಿಂದ ಯಾವತ್ತೂ ಯಾರಿಗೂ ಒಳಿತಾದ ನಿದರ್ಶನ ಇತಿಹಾಸದಲ್ಲಿಲ್ಲ ಎಂದರು. ಸಮಸ್ಯೆ ಹೇಳಿಕೊಂಡು ನಿಮ್ಮ ಬಳಿಗೆ ಸಾರ್ವಜನಿಕರ ಜತೆಗೆ ಸೌಜನ್ಯದಿಂದ ಮಾತನಾಡಿ ಅಹವಾಲು ಆಲಿಸುವ ಮನೋಭಾವವನ್ನು ಅಧಿಕಾರಿ ಹಾಗೂ ಸಿಬ್ಬಂದಿ ವರ್ಗ ಮೈಗೂಡಿಸಿಕೊಳ್ಳಬೇಕು ಎಂದರು.
ಲೋಕಾಯುಕ್ತ ಸಬ್ ಇನ್ಸಪೆಕ್ಟರ್‍ಪ್ರದೀಪ ಕೊಳ್ಳಾ,ತಹಸೀಲ್ದಾರ್ ಅಂಜುಮ್ ತಬಸುಮ್, ಗ್ರೇಡ-2 ತಹಸೀಲ್ದಾರ್ ಮಂಜುನಾಥ ಪಂಚಾಳ, ಕಂದಾಯ ನೀರಿಕ್ಷಕ ರಾಹುಲ್ ಪ್ರಸಾದ, ಮುಖ್ಯ ವೈದ್ಯಾಧಿಕಾರಿ ನಾಗನಾಥ ಹುಲಸೂರೆ, ಡಿವೈಎಸ್ಪಿ ಜೆ.ಎಸ್ ನ್ಯಾಮೇ ಗೌಡರ್, ಸಿಪಿಐ ಗುರುಲಿಂಗಪ್ಪಾಗೌಡ ಪಾಟೀಲ್, ಸಂತೋಷ ರಾಠೋಡ, ವಾಹಿದ್ ಕೋತವಾಲ್, ತಾಲೂಕು ವೈದ್ಯಾಧಿಕಾರಿ ಶಿವಕುಮಾರ ಸಿದ್ದೇಶ್ವರ, ತಾಲೂಕ ಪಂಚಾಯತ್ ಕಾರ್ಯನಿವಾರಣಾಧಿಕಾರಿ ಅಧಿಕಾರಿ ಶಿವಲೀಲಾ, ಪುರಸಭೆ ಮುಖ್ಯಾಧಿ ಕಾರಿ ಮೀನಾಕುಮಾರಿ ಬೊರಾಳೆ ಸೇರಿ ಇತರರಿದ್ದರು.