ಧಾರ್ಮಿಕ ಕ್ಷೇತ್ರಗಳಲ್ಲಿ ಸೇವಾ ಮನೋಭಾವ ಮುಖ್ಯ: ಅಭಿನವ ಶ್ರೀ
ಮಾದನಹಿಪ್ಪರಗಿ:ಮೇ.17: ಭಕ್ತರಿಂದಲೇ ಮಠ ಮಂದಿರಗಳು ಸರ್ವಭಕ್ತರು ಸೇವಾ ಮನೋಭಾವದಿಂದ ಕಾಯಕ ಮಾಡಿದರೆ ಮಠಗಳು ಅಭಿವೃದ್ಧಿ ಹೊಂದುತ್ತವೆ ಎಂದು ಅಭಿನವ ಶಿವಲಿಂಗ ಸ್ವಾಮಿಗಳು ನುಡಿದರು.
ಸ್ಥಳೀಯ ಶಿವಲಿಂಗೇಶ್ವರ ವಿರಕ್ತ ಮಠದ ಜಾತ್ರಾ ಮಹೋತ್ಸವ ಹಾಗೂ ಮಠದ ಪೀಠಾಧ್ಯಕ್ಷರ ಪಟ್ಟಾಧಿಕಾರದ ದಶಮಾನೋತ್ಸವದ ಅಂಗವಾಗಿ ಮಠದಲ್ಲಿ ನಡೆಯುತ್ತಿರುವ ಗುಡ್ಡಾಪುರ ದಾನಮ್ಮ ದೇವಿಯ ಪುರಾಣ ಪ್ರವಚನದಲ್ಲಿ ಬರುವ ತೊಟ್ಟಿಲು ಕಾರ್ಯಕ್ರಮದಲ್ಲಿ ಮಾತನಾಡುತ್ತ, ಜಾತ್ರೆಗಳು ಮಾನವ ಬಂಧುತ್ವದಲ್ಲಿ ನಡೆಯಬೇಕು ಸರ್ವ ಜನಾಂಗದವರು ಸೋದರತೆ ಭಾತೃತ್ವದ ಅಡಿಯಲ್ಲಿ ಬೆಸೆದು ಸಂಸ್ಕøತಿ, ಧಾರ್ಮಿಕ ನೆಲೆಗಟ್ಟಿನಲ್ಲಿ ಸೇರಿ ಎಲ್ಲರೂ ತೇರನ್ನೆಳೆಯಬೇಕು.ಇತ್ತಿಚೆಗೆ ಜನಸಾಮಾನ್ಯರಲ್ಲಿ ದುಡಿಯುವ ಮನೋಸ್ಥಿತಿ ದೂರ ಹೋಗಿದೆ. ಬಸವಣ್ಣನವರ ಕಾಯಕವೆ ಕೈಲಾಸ ನಾಣ್ನುಡಿ ಮರೆತು ಬಿಟ್ಟಿದ್ದಾರೆ ಎಂದರು. ಪ್ರವಚನಕಾರ ಸಾದಾನಂದ ಶಾಸ್ತ್ರಿಗಳು ಮಾತನಾಡಿ, ಬದುಕಿನಲ್ಲಿ ಧರ್ಮ ಕರ್ಮಗಳು ಜೊತೆಯಾಗಿ ನಡೆಯಬೇಕು. ದಾನ ಧರ್ಮ ಪುಣ್ಯದ ಕಾರ್ಯಗಳ ಮೇಲೆ ಧರ್ಮ ನಿಂತಿದೆ. ಮಠದ ಜಾತ್ರಾ ಮಹೋತ್ಸವದದಲ್ಲಿ ದಿ. ಮೇ 22 ರಂದು ಪುರಾಣ ಮಹಾಮಂಗಲ ಹಾಗೂ ಸುಮಂಗಲಿಯರಿಗೆ ಉಡಿ ತುಂಬುವ ಕಾರ್ಯಕ್ರಮ. ದಿ. 23 ರಂದು ಸಾ.7.30 ಕ್ಕೆ ಮಹಾರಥೋತ್ಸವ ಜರುಗುವುದು. 24 ರಂದು ಭಕ್ತರಿಂದ ಹರಜಾತ್ರೆ ಹಾಗೂ ಜಂಗೀ ಪೈಲ್ವಾನರ ಕುಸ್ತಿಗಳು, ನಂತರ ಸಾ. 6 ಗಂ. ಅಭಿನವ ಶಿವಲಿಂಗ ಸ್ವಾಮಿಗಳ ಪಟ್ಟಾಧಿಕಾರದ ದಶಮಾನೋತ್ಸವ ಹಾಗೂ ಲಕ್ಷ ದೀಪೋತ್ಸವ. ದಿ.25 ರಂದು 7.30 ಕ್ಕೆ ಪೂಜ್ಯರಿಂದ ರಥಕ್ಕೆ ಕಡುಬಿನ ಕಾಳಗ ನಡೆಯುವುದು ಎಂದರು. ಕಾರ್ಯಕ್ರಮಮದಲ್ಲಿ ಶಿವಯೋಗಾಶ್ರಮದ ಶಿವದೇವಿ ಮಾತಾಜೀ ಉಪಸ್ಥಿತರಿದ್ದರು. ಸಂಗೀತ ಸೇವೆ ಮಹೇಶಕುಮಾರ ಹೇರೂರ, ತಬಲಾ ಬಸವರಾಜ ಚಲಗೇರಿ ನಿರೂಪಣೆ ಬಸವರಾಜ ಪ್ಯಾಟಿ ಅವರಿಂದ ನಡೆಯಿತು.