ಕನ್ನಡ ಮಾಧ್ಯಮ ಶಾಲಾ ವಿದ್ಯಾರ್ಥಿನಿಯ ಸಾಧನೆ ಇತರರಿಗೆ ಮಾದರಿಯಾಗಲಿ
ಸೈದಾಪುರ:ಮೇ.18:ಗಡಿ ಗ್ರಾಮೀಣ ಭಾಗದ ಕನ್ನಡ ಮಾಧ್ಯಮದಲ್ಲಿ ಅಭ್ಯಾಸ ಮಾಡಿ 593 ಅಂಕಗಳೊಂದಿಗೆ ಶೇ 95 ರಷ್ಟು ಎಸ್‍ಎಸ್‍ಎಲ್‍ಸಿಯಲ್ಲಿ ಫಲಿತಾಂಶ ಪಡೆದ ಪ್ರೀಯಾಂಕ ವಿದ್ಯಾರ್ಥಿನಿಯ ಸಾಧನೆ ಇತರೆ ವಿದ್ಯಾರ್ಥಿಗಳಿಗೆ ಮಾದರಿಯಾಗಲಿ ಎಂದು ಮುಖ್ಯಗುರು ಲಿಂಗಾರೆಡ್ಡಿ ನಾಯಕ ಅಭಿಪ್ರಾಯಪಟ್ಟರು.
ಪಟ್ಟಣದ ವಿದ್ಯಾ ವರ್ಧಕ ಪ್ರೌಢ ಶಾಲೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿನಿಗೆ ಶಾಲಾ ವತಿಯಿಂದ ಸನ್ಮಾನಿಸಿ ಮಾತನಾಡಿದರು. 1 ರಿಂದ 7ನೇ ತರಗತಿಯನ್ನು ಗಡಿ ಗ್ರಾಮೀಣ ಭಾಗದ ಬಾಲಛೇಡ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅಭ್ಯಾಸ ಮಾಡಿ ನಂತರ ನಮ್ಮ ಸಂಸ್ಥೆಯ ಪ್ರೌಢ ಶಾಲೆಯಲ್ಲಿ ಉತ್ತಮ ಸಾಧನೆ ಮಾಡಿರುವುದು ಸಂತಸವನ್ನುಂಟು ಮಾಡುವಂತಿದೆ. ಇನ್ನೂ ಹೆಚ್ಚಿನ ಸಾಧನೆ ಮಾಡುವಂತಾಗಲಿ. ಯಾವುದೆ ವಿದಧ ಸಹಾಯ ಮತ್ತು ಸಹಕಾರ, ಮಾರ್ಗದರ್ಶನವನ್ನು ನಮ್ಮ ವತಿಯಿಂದ ನೀಡಲಾಗುವುದು ಎಂದು ಹೇಳಿದರು.
ಡಿ.ಎಲ್.ಇಡಿ ಕಾಲೇಜಿನ ಪ್ರಾಂಶುಪಾಲ ಕರಬಸಯ್ಯ ದಂಡಿಗಿಮಠ, ಶಿಕ್ಷಕರಾದ ಗೂಳಪ್ಪ.ಎಸ್.ಮಲ್ಹಾರ, ರಾಚಯ್ಯ ಸ್ವಾಮಿ ಬಾಡಿಯಾಲ, ಸತೀಶ ಪರ್ಮಾಂ, ಭೀಮಣ್ಣ ನಾಯಕ ಸೇರಿದಂತೆ ಇತರರಿದ್ದರು.
1962ರ ಹಳೆಯ ಕನ್ನಡ ಮಾಧ್ಯಮದ ಸಂಸ್ಥೆ ಇದಾಗಿದ್ದೂ ಇಲ್ಲಿ ಅನುಭವಿ ಶಿಕ್ಷಕ ವೃಂದವಿದೆ. ವರ್ಷದಿಂದ ವರ್ಷ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗುತ್ತಿರುವುದು ಅಲ್ಲದೆ ಇಲ್ಲಿನ ವಿದ್ಯಾರ್ಥಿಗಳ ಸಾಧನೆಯೂ ಉತ್ತಮವಾಗಿರುತ್ತದೆ. ಇದು ನನ್ನ ಸಾಧನೆಯ ಮೇಲ ಪ್ರಭಾವ ಭೀರಲು ಕಾರಣವಾಯಿತು. ಇನ್ನೂ ಹೆಚ್ಚಿನ ಸಾಧನೆ ಮಾಡುವ ವಿದ್ಯಾರ್ಥಿಗಳು ಈ ಸಂಸ್ಥೆಯಿಂದ ಬರಲಿ ಆ ಮೂಲಕ ಗಡಿ ಗ್ರಾಮೀಣ ಭಾಗದಲ್ಲಿ ಇದರ ಮಹತ್ವ ಹೆಚ್ಚಾಗುವಂತಾಗಲಿ.
ಪ್ರೀಯಾಂಕ ಶಿವರಾಜಪ್ಪ ಬಾಲಛೇಡ ವಿದ್ಯಾರ್ಥಿನಿ