ಈಶಾನ್ಯ ಕರ್ನಾಟಕ ಪದವೀಧರ ಕ್ಷೇತ್ರ ಚುನಾವಣೆ:26 ಅಭ್ಯರ್ಥಿಗಳ 34 ನಾಮಪತ್ರ ಕ್ರಮಬದ್ಧ,7 ನಾಮಪತ್ರ ತಿರಸ್ಕೃತ
ಕಲಬುರಗಿ:ಮೇ.17:ಈಶಾನ್ಯ ಕರ್ನಾಟಕ ಪದವೀಧರ ಕ್ಷೇತ್ರದಿಂದ ಕರ್ನಾಟಕ ವಿಧಾನ ಪರಿಷತ್ತಿಗೆ ಬರುವ ಜೂನ್ 3ರಂದು ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಶುಕ್ರವಾರ ಸಾಮಾನ್ಯ ವೀಕ್ಷಕ ಐ.ಎ.ಎಸ್. ಅಧಿಕಾರಿ ಎಂ.ಮಹೇಶ್ವರ ರವ್ ಅವರ ಸಮಕ್ಷಮ ನಾಮಪತ್ರ ಪರಿಶೀಲನಾ ಕಾರ್ಯ ನಡೆದಿದ್ದು, 26 ಅಭ್ಯರ್ಥಿಗಳ ಒಟ್ಟು 34 ನಾಮಪತ್ರ ಪುರಸ್ಕೃತ ವಾಗಿದ್ದು, 7 ನಾಮಪತ್ರ ತಿರಸ್ಕೃತ ವಾಗಿವೆ ಎಂದು ಕ್ಷೇತ್ರದ ಚುನಾವಣಾಧಿಕಾರಿಯಾಗಿರುವ ಕಲಬುರಗಿ ವಿಭಾಗದ ಪ್ರಾದೇಶಿಕ ಆಯುಕ್ತ ಕೃಷ್ಣ ಭಾಜಪೇಯಿ ಅವರು ತಿಳಿಸಿದ್ದಾರೆ.
ನಾಮಪತ್ರ ಪುರಸ್ಕೃತ ಅಭ್ಯರ್ಥಿಗಳ ವಿವರ:ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಅಮರನಾಥ ನೀಲಕಂಠ ಪಾಟೀಲ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಚಂದ್ರಶೇಖರ ಬಸವರಾಜ, ಸ್ವತಂತ್ರ ಅಭ್ಯರ್ಥಿಗಳಾದ ಅನಿಮೇಶ ತಂದೆ ಮಹಾರುದ್ರಪ್ಪ, ಅಬ್ದುಲ್ ಜಬ್ಬಾರ್ ತಂದೆ ಅಬ್ದುಲ್ ರೆಹಮಾನ್ ಗೋಳಾ, ಕಾಶಿನಾಥ ಎಂ. ತಂದೆ ಸೋಮಪ್ಪ, ಗವಿಸಿದ್ದಪ್ಪ ತಂದೆ ಚಂದ್ರಶೇಖರ, ಎನ್.ಪ್ರತಾಪರೆಡ್ಡಿ ತಂದೆ ಎನ್.ಗೌರಣ್ಣ, ಪ್ರಭು ತಂದೆ ನಾರಾಯಣ, ಬಸವರಾಜ ತಂದೆ ದುರ್ಗಪ್ಪ, ಮಲ್ಲಿಕಾರ್ಜುನ ತಂದೆ ವೀರಣ್ಣ ಧುತ್ತರಗಾಂವ, ಮಹೆಬೂಬ್ ತಂದೆ ಮೊಹಮ್ಮದ್ ಖಾಜಾ ಹುಸೇನ್ ವಂಟೇಲಿ, ಮೊಹಮ್ಮದ್ ಹುಸೇನ್ ತಂದೆ ಮೊಹಮ್ಮದ್ ಅಲಿ, ರಾಜು ತಂದೆ ದೇವಪ್ಪ, ರಿಯಾಜ್ ಅಹ್ಮದ್ ತಂದೆ ನಬಿಸಾಬ್, ವಿಲಾಸ ತಂದೆ ಮಾರುತಿ, ಶರಣಬಸಪ್ಪ ತಂದೆ ಪೀರಪ್ಪ, ಶರಣಬಸಪ್ಪ ಎಸ್.ಎ. ತಂದೆ ಶ್ರೀಮಂತಪ್ಪ, ಶಶಿಧರ ತಂದೆ ಬಸವರಾಜ, ಶಿವಕುಮಾರ ತಂದೆ ಜಂಬುನಾಥ ಸ್ವಾಮಿ, ಎನ್.ಶೈಲಜಾ ರೆಡ್ಡಿ, ಸತೀಶಕುಮಾರ ತಂದೆ ರಾಮಮೂರ್ತಿ, ಸತೀಷಕುಮಾರ ತಂದೆ ಅಮೃತ, ಸಾಯಿನಾಥ ತಂದೆ ಸಂಜೀವಕುಮಾರ್ ನಾಗೇಶ್ವರ, ಸುನೀಲಕುಮಾರ ತಂದೆ ಹೈದ್ರಪ್ಪ, ಸುರೇಶ ತಂದೆ ದವಿದಪ್ಪ ಹಾಗೂ ಸುರೇಶ ತಂದೆ ರಾಜಶೇಖರಪ್ಪ. ಉಳಿದಂತೆ 3 ಅಭ್ಯರ್ಥಿಗಳಲ್ಲಿ ಓರ್ವ ಅಭ್ಯರ್ಥಿಯನ್ನು ಭಾರತ ಚುನಾವಣಾ ಆಯೋಗ ಅನರ್ಹಗೊಳಿಸಿದರೆ, ಉಳಿದ ಇಬ್ಬರು ಅಭ್ಯರ್ಥಿಗಳ ನಾಮಪತ್ರಗಳು ವಯೋಮಿತಿ ಮಾನದಂಡಕ್ಕೆ ಅನರ್ಹವಾಗಿವೆ.
ಕೇತ್ರದ ಚುನಾವಣೆಗೆ ಮೇ 9 ರಂದು ಅಧಿಸೂಚನೆ ಹೊರಡಿಸಿ ಮೇ 16ರ ವರೆಗೆ ನಾಮಪತ್ರ ಸಲ್ಲಿಸಲು ಅವಕಾಶ ನೀಡಲಾಗಿತ್ತು. ಅದರಂತೆ ಒಟ್ಟಾರೆ 29 ಅಭ್ಯರ್ಥಿಗಳಿಂದ 41 ನಾಮಪತ್ರಗಳು ಸಲ್ಲಿಕೆಯಾಗಿದ್ದವು. ಇದರಲ್ಲಿ 26 ಅಭ್ಯರ್ಥಿಗಳ ನಾಮಪತ್ರ ಕ್ರಮಬದ್ಧವಾದರೆ, 3 ಅಭ್ಯರ್ಥಿಗಳ ನಾಮಪತ್ರ ನಾನಾ ಕಾರಣಕ್ಕೆ ತಿರಸ್ಕೃತವಾಗಿವೆ. ಇನ್ನೂ ನಾಮಪತ್ರಗಳನ್ನು ಹಿಂದಕ್ಕೆ ಪಡೆಯಲು ಇದೇ ಮೇ 20 ಕೊನೆಯ ದಿನವಾಗಿದೆ.