ಎನ್‍ಟಿಪಿಸಿ ಘಟಕದಲ್ಲಿ ಕಾರ್ಮಿಕನ ಸಾವು: ಮೂವರ ವಿರುದ್ಧ ಪ್ರಕರಣ ದಾಖಲು
ವಿಜಯಪುರ,ಮೇ.17: ಜಿಲ್ಲೆಯ ಕೊಲ್ಹಾರ ಪಟ್ಟಣದ ಕೂಡಗಿ ಎನ್‍ಟಿಪಿಸಿ ಘಟಕದಲ್ಲಿ ಸಂಭವಿಸಿದ ಕಾರ್ಮಿಕನ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಸೈಟ್ ಇನ್‍ಚಾರ್ಜ್ ವೆಂಕಟರಾಜು, ಸೈಟ್ ಸುಪರ್ವೈಜರ್ ಮನಂಜಯ , ಸೈಟ್ ಮ್ಯಾನೇಜರ್ ಕುಂದನಕುಮಾರ ಸಿಂಗ್ ವಿರುದ್ಧ ಕೇಸ್ ದಾಖಲಾಗಿದೆ. 150 ಅಡಿ ಎತ್ತರದ ಚಿಮಣಿಯಲ್ಲಿ ಕೆಲಸ ಮಾಡುವಾಗ ಕಾರ್ಮಿಕ ಕಿಶೋರಕುಮಾರಗೆ ವ್ಯವಸ್ಥಿತ ಉಪಕರಣಗಳನ್ನು ನೀಡದೇ ನಿರ್ಲಕ್ಷ್ಯವಹಿಸಿದ್ದಾರೆ ಎಂದು ಹವಾಲ್ದಾರ್ ದೂರಿನ ಮೇರೆಗೆ ಕೂಡಗಿ ಎನ್‍ಟಿಪಿಸಿ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.