ಮೇ 19ರಂದು ವಧು-ವರರ ಸಮಾವೇಶ
ಕಲಬುರಗಿ,ಮೇ 17: ಜಿಲ್ಲಾ ಮುನ್ನೂರುರೆಡ್ಡಿ ಸಮಾಜ ಸಂಘದಿಂದ ಮೇ 19ರಂದು ಬೆಳಗ್ಗೆ 10.30ಕ್ಕೆ ನಗರದ ಶಿರಡಿ ಸಾಯಿಬಾಬಾ ಮಂದಿರದ ಸಭಾ ಭವನದಲ್ಲಿ ವಧು-ವರರ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಮುನ್ನೂರುರೆಡ್ಡಿ ಸಮಾಜ ಸಂಘ ಅಧ್ಯಕ್ಷ ವಾಸುದೇವ ಪಾಟೀಲ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪೆÇ್ರ.ಸೀತಾರಾಮ ಮುನ್ನೂರ ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಮುನ್ನೂರುರೆಡ್ಡಿ ಸಮಾಜದವರು ಕಲ್ಯಾಣ ಕರ್ನಾಟಕದ ಭಾಗ ಆರು ಜಿಲ್ಲಾ ಮತ್ತು ಮಹಾರಾಷ್ಟ್ರ, ತೆಲಂಗಾಣ ರಾಜ್ಯದಿಂದ ವಧು-ವರರು ಇರುವುದರಿಂದ ಈ ಸಮಾವೇಶ ನಡೆಯಲಿದೆ. ಈಗಾಗಲೇ 100ಕ್ಕೂ ಅಧಿಕ ವಧು-ವರರು ನೋಂದಣಿ ಮಾಡಿಸಿಕೊಂಡಿದ್ದಾರೆ. ಇನ್ನೂ ಅನೇಕ ವಧು-ವರರು ನೋಂದಣಿ ಮಾಡಿಸಿಕೊಳ್ಳಲಿದ್ದಾರೆ ಎಂದರು.
ಅಂದು ನಡೆಯಲಿರುವ ವಧು-ವರರ ಸಮಾವೇಶವನ್ನು ಗುಲ್ಬರ್ಗ ವಿವಿ ಹಿರಿಯ ಪ್ರಾಧ್ಯಾಪಕಿ ಪೆÇ್ರ.ಪರಿಮಳಾ ಅಂಬೇಕರ್ ಉದ್ಘಾಟಿಸಲಿದ್ದಾರೆ. ಮಾಜಿ ಶಾಸಕ ಎ. ಪಾಪರೆಡ್ಡಿ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದು, ಮುನ್ನೂರುಕಾಪು ಸಮಾಜದ ಅಧ್ಯಕ್ಷ ಬೆಲ್ಲಂ ನರಸರೆಡ್ಡಿ, ಲಕ್ಷ್ಮಣರಾವ ಗಾದೆ, ಶಿವರಾವ ಮಕಾಸಿ, ಮುರುಗೇಂದ್ರರೆಡ್ಡಿ, ಈಶ್ವರ ಔರಾಧಕರ್ ಸೇರಿದಂತೆ ಅನೇಕರು ಅತಿಥಿಗಳಾಗಿ ಪಾಬಲ್ಗೊಳ್ಳಲಿದ್ದಾರೆ. ಜಿಲ್ಲಾ ಮುನ್ನೂರುರೆಡ್ಡಿ ಸಮಾಜ ಸಂಘ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪೆÇ್ರ.ಸೀತಾರಾಮ ಮುನ್ನೂರ ಅಧ್ಯಕ್ಷತೆ ವಹಿಸಲಿದ್ದಾರೆ. ಸಮಾಜ ಬಾಂಧವರು ವಧು-ವರರ ಸಮಾವೇಶದ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.ಶಂಕರರೆಡ್ಡಿ, ಸಂಜೀವ್‍ರೆಡ್ಡಿ, ಚಂದ್ರಕಾಂತ ವೈಜಾಪುರ, ದತ್ತಾತ್ರೇಯ ಭೋಗನಳ್ಳಿ, ಓಂಪ್ರಕಾಶ ಗಂವಾರ, ದತ್ತಾತ್ರೇಯ ಕಮಲಾಪುರ, ಮಲ್ಲಿಕಾರ್ಜುನ, ಅಪ್ಪಣ್ಣ ಇತರರಿದ್ದರು.