ಹಾರೋ ಬಂಡೆ ಸಾಯಿಬಾಬಾ ಆಶ್ರಮಕ್ಕೆ ಆಗಮಿಸಿದ ರಾಂಬಾಹು ಗುರೂಜಿ,ಚಿಕ್ಕಬಳ್ಳಾಪುರ ಜಿಲ್ಲೆಗೂ ನೀರು ಸಿಗಬೇಕಾದ್ರೆ ದೇವಾಲಯಗಳಲ್ಲಿ ಯಜ್ಞ ಮಾಡಿಸಿ
ಚಿಕ್ಕಬಳ್ಳಾಪುರ : ಮೇ. 17. ಮಳೆ ಇಲ್ಲದೆ ಬೆಳೆ ಇಲ್ಲದೆ ಬರಪಿಡಿತ ಬಯಲು ಸೀಮೆಯ ಜಿಲ್ಲೆಗಳಿಗೆ ಸಮೃದ್ಧ ಮಳೆ ಆಗಬೇಕಾದರೆ ವರುಣದೇವನನ್ನು ತೃಪ್ತಿ ಪಡಿಸಬೇಕು ಸನಾತನ ಧರ್ಮದ ಸಂದೇಶದಂತೆ ಯಜ್ಞ ಯಾಗಾದಿಗಳನ್ನು ಮಾಡಿದರೆ ಸಮೃದ್ಧ ಮಳೆ ಸುರಿಯುತ್ತದೆ ಇದು ಈ ಹಿಂದೆಯೂ ಆಗಿದೆ ಎಂದು ದೇಶದ ಪ್ರಖ್ಯಾತ ತಂಜಾವೂರಿನ ಶಾಂತಾಶ್ರಮದ ಉಚ್ಚಿಷ್ಟ ಗಣಪತಿ ಆರಾಧಕರಾದ ಶ್ರೀ ರಾಮ್ ಬಾವು ಗುರೂಜಿ ತಿಳಿಸಿದರು.
ಅವರು ನಗರದ ಹೊರವಲಯದ ಹಾರೋ ಬಂಡೆ ಸಮೀಪ ಇರುವ ಶ್ರೀ ಶಿರಡಿ ಸಾಯಿ ಮಂದಿರಕ್ಕೆ ಆಗಮಿಸಿ ಅಲ್ಲಿ ನಡೆಯುವ ಧಾರ್ಮಿಕ ಕಾರ್ಯಕ್ರಮಗಳನ್ನು ವೀಕ್ಷಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
ಬಯಲುಸೀಮೆ ಜಿಲ್ಲೆಗಳಿಗೆ ನೀರು ಮಳೆ ಬರಿಸಲು ದೇವಾಲಯಗಳಲ್ಲಿ ಯಜ್ಞ ಯಾಗಾದಿಗಳನ್ನ ಕೈಗೊಳ್ಳಿ ಎಂದು ಸಲಹೆ ನೀಡಿದರು.ಬೆಂಗಳೂರು ನೀರಿಗಾಗಿ ತತ್ತರಿಸಿತ್ತು.ಟ್ಯಾಂಕರ್ ಮೂಲಕ ನೀರು ಪೂರೈಸಲಾಗಿತ್ತು.
ಸರ್ಕಾರವೂ ನೀರು ಪೂರೈಸಲು ಹರಸಾಹಸ ಪಡುವಂತಾಗಿತ್ತು ಆ ಸಂದರ್ಭಕ್ಕೆ ತಮಿಳುನಾಡಿನ ತಂಜಾವೂರು ರಾಂಬಾಹು ಗುರೂಜಿಯನ್ನ ಕರೆತಂದು ಸಾಯಿಬಾಬಾ ದೇವಾಲಯದಲ್ಲಿ12 ದಿನಗಳ ಕಲಾ ಸತತವಾಗಿ ಯಜ್ಞ ಯಾಗಾದಿಗಳನ್ನು ಮಾಡಿಸಲು ಪ್ರಾರಂಬಿಸಿದ ಮರುದಿನವೇ ಮಳೆ ಬಂದು ಇಡೀ ನಗರವನ್ನ ತಂಪಾಗಿಸಿತ್ತು ನೀರಿನ ಕೊರತೆಯನ್ನು ನೀಗಿಸಿತ್ತು ಎಂದು ಶ್ರೀ ಶಿರಡಿ ಸಾಯಿ ಬಾಬಾ ರವರ ದೇವಾಲಯದ ಧರ್ಮದರ್ಶಿ ಹಾಗೂ ದೇವರಾಜ್ ಅರಸ್ ಮೆಡಿಕಲ್ ಕಾಲೇಜ್ ಅಧ್ಯಕ್ಷ ಜಿ ಎಚ್ ನಾಗರಾಜ ರವರು ಇದೇ ಸಂದರ್ಭದಲ್ಲಿ ತಿಳಿಸಿದರು.
ರಾಂಬಾಹು ಗುರೂಜಿ ಪೌವರ್ ಫುಲ್ ಸ್ವಾಮೀಜಿ ಆಗಿದ್ದಾರೆ ಅವರು ಐವತ್ತು ವರ್ಷಗಳಿಂದ ಊಟ ಮತ್ತು ನೀರು ತ್ಯಜಿಸಿ ಜೀವನ ಸಾಗಿಸುತಿದ್ದಾರೆ ಯಜ್ಞ ಯಾಗಾದಿಗಳಲ್ಲಿ ಬೆಂಕಿಯನ್ನ ತಲೆ ಮೇಲೆ ಹೊತ್ತು ಹೋಮ ಹವನ ನಡೆಸುತ್ತಾರೆ ಅಗ್ನಿ ಮೇಲೆ ಮಲಗಿ ವರುಣಾಗಮನ ಮಾಡುತ್ತಾರೆ ಮೂಟೆಗಟ್ಟಲೆ ಗರಿಕೆ ತರಿಸಿ ಹೋಮ ನಡೆಸುವ ಇವರು ಯಾವುದೆ ಬಕ್ತಾದಿಗಳಿಂದ ಎನನ್ನೂ ಬಯಸುವುದಿಲ್ಲ ಸರಳ ಹಾಗೂ ಸಾಧಾರಣ ಸ್ವಾಮಿಜಿಯಾಗಿದ್ದು ಕೇವಲ ವಿಬೂತಿ ಮತ್ತು ಕುಂಕುಮ ರೂಪದ ಪ್ರಸಾದ ಮಾತ್ರ ವಿತರಿಸುವ ರಾಂಬಾಹು ಗುರೂಜಿಗೆ ತಮಿಳುನಾಡು,ಕರ್ನಾಟಕ,ಕೇರಳ ರಾಜ್ಯಗಳಲ್ಲೂ ನೂರಾರು ಭಕ್ತರಿದ್ದಾರೆ ಇವರನ್ನ ಚಿಕ್ಕಬಳ್ಳಾಪುರ ಹೊರವಲಯ ಹಾರೋಬಂಡೆ ಸಾಯಿಬಾಬ ಧರ್ಮದರ್ಶಿ ಜಿ ಹೆಚ್ ನಾಗರಾಜ್ ಮತ್ತು ಅವರ ಪುತ್ರ ಕೆ.ಪಿ.ಸಿ.ಸಿ. ಸದಸ್ಯ ಹಾಗೂ ದೇವರಾಜ್ ಅರಸ್ ಮೆಡಿಕಲ್ ಕಾಲೇಜ್ ಸದಸ್ಯ ಎನ್ ವಿನಯ್ ಶ್ಯಾಮ್ ಮೇರೆಗೆ ಆಗಮಿಸಿದ್ದರು.
.ಗುರೂಜಿ ಪುತ್ರ ಗಣೇಶ್ ರಾಂಬಾಹು, ತಂಜಾವೂರು ಮಠದ ಭಕ್ತಳು ಸುನಂದಗಂಗಪ್ಪ, ಸಾಯಿಬಾಬ ಅಶ್ರಮ ದರ್ಮದರ್ಶಿ ಜಿ ಹೆಚ್ ನಾಗರಾಜ್,ವಿನಯ್ ಶಾಮ್, ನಗರದ ಖ್ಯಾತ ವೈದ್ಯ ಡಾ ಜಿ ವಿ ಮಂಜುನಾಥ್ ಕಾಂಗ್ರೆಸ್ ಮುಖಂಡ ಮರಸನಹಳ್ಳಿ ಪ್ರಕಾಶ್ ಸಂತೋಷ್ ರಾಜ್ ಒಳಗೊಂಡಂತೆ ಮತ್ತಿತರರು ಉಪಸ್ಥಿತರಿದ್ದರು.